Advertisement

ರಾಷ್ಟ್ರಧ್ವಜ ಹಾರಿಸಿ ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ತಂಭ ಸಮರ್ಪಣೆ!

01:49 PM Mar 12, 2018 | |

ಬೆಳಗಾವಿ: ನಗರದ ಕಿಲ್ಲಾ ಕೆರೆಯ ಆವರಣದಲ್ಲಿ ನಿರ್ಮಿಸಲಾದ ದೇಶದ ಅತ್ಯಂತ ಎತ್ತರದ ರಾಷ್ಟ್ರಧ್ವಜ ಸ್ತಂಭವನ್ನು  ರಾಷ್ಟ್ರಧ್ವಜ ಹಾರಿಸುವ ಮೂಲಕ ಸೋಮವಾರ ದೇಶಕ್ಕೆ ಸಮರ್ಪಿಸಲಾಯಿತು.ಈ ಐತಿಹಾಸಿಕ ಸಮಾರಂಭಕ್ಕೆ ಸಾವಿರಾರು ನಾಗರಿಕರು ಸಾಕ್ಷಿಯಾದರು.

Advertisement

ಶಾಸಕ  ಫಿರೋಜ್ ಸೇಠ್‌ ಅವರ ಆಸಕ್ತಿಯಿಂದಾಗಿ ತಲೆಯೆತ್ತಿರುವ ಈ ಧ್ವಜಸ್ತಂಭದ ರಾಷ್ಟ್ರಧ್ವಜಾರೋಹಣವನ್ನು ಉಸ್ತುವಾರಿ ಸಚಿವ  ರಮೇಶ ಜಾರಕಿಹೊಳಿ ನೆರವೇರಿಸಿದರು.

ಜಿಲ್ಲಾಧಿಕಾರಿ ಜಿಯಾ ಉಲ್ಲಾ, ಜಿಲ್ಲಾ ಪಂಚಾಯತ್‌ ಸಿಇಓ ರಾಮಚಂದ್ರನ್,ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ,ಬೂಡಾ ಆಯುಕ್ತ ಶಕೀಲ್ ಅಹ್ಮದ ಸೇರಿದಂತೆ ನೂರಾರು ಅದಿಕಾರಿಗಳು ಉಪಸ್ಥಿತರಿದ್ದರು.

ಹಿಂದೂ,ಸಿಖ್ಬ್‌,ಮುಸ್ಲಿಮ್ ಮತ್ತು ಕ್ರೈಸ್ತ ಧರ್ಮ ಗುರುಗಳ ಉಪಸ್ಥಿತಿ ಗಮನ ಸೆಳೆಯಿತು.ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.ಕಿಲ್ಲಾ ಕೆರೆಯ ಆವರಣ ತುಂಬಿ ತುಳುಕುತ್ತಿತ್ತು.ಸಮಾರಂಭವು ಅಗಷ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ನೆನಪಿಸುವಂತಿತ್ತು.

 ಧ್ವಜ ಸ್ಥಂಬದ ನಿರ್ಮಾಣದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಹಿರಿದಾಗಿದೆ. 

Advertisement

ಧ್ವಜ ಧ್ವಜ ಸ್ತಂಭದ ಎತ್ತರ -110 ಮೀಟರ್‌ 
ಧ್ವಜದ ಅಳತೆ- 36.60 *24.40 ಮೀಟರ್‌(80*120)
ಧ್ವಜ ಸ್ತಂಭ ದ ವ್ಯಾಸ – ಕೆಳಭಾಗ 1.90 ಮೀಟರ್‌
ಮೇಲ್ಭಾಗ 0.60 ಮೀಟರ್‌ 

ಅಂದಾಜು ಮೊತ್ತ 1ಕೋಟಿಯ 62 ಲಕ್ಷದ 50 ಸಾವಿರ ರೂಪಾಯಿ 

Advertisement

Udayavani is now on Telegram. Click here to join our channel and stay updated with the latest news.

Next