Advertisement

ವಿಜೃಂಭಣೆಯ ಯಲ್ಲಮ್ಮ ದೇವಿ ಜಾತ್ರೆ

05:26 PM Feb 03, 2021 | Team Udayavani |

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮ ಹಾಗೂ ಪ್ರಭಾ ಶುಗರ್ನ ಮಧ್ಯೆ ಭಾಗದಲ್ಲಿರುವ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆಯು
ವಿಜೃಂಭಣೆಯಿಂದ ಮಂಗಳವಾರ ಜರುಗಿತು. ಬೆಳಗ್ಗೆ ಯಲ್ಲಮ್ಮದೇವಿಗೆ ರುದ್ರಾಭಿಷೇಕ, ಮಹಾಪೂಜೆ, ಉಡಿ ತುಂಬುವ ಕಾರ್ಯಕ್ರಮ
ಜರುಗಿತು.

Advertisement

ಭಂಡಾರ ಹಾರಿಸುವ ಮೂಲಕ ಭಕ್ತರು ದೇವಿಯ ದರ್ಶನ ಪಡೆದರು. ಊಧೋ ಊಧೋ ಎಂದು ದೇವಿಯ ಸ್ಮರಣೆ ಮಾಡುತ್ತಾ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಭಕ್ತರು ಹರಕೆ ಹೊತ್ತು ದೇವಿಯ ಹುಟಗಿ ಉಡುವುದು, ದೇವಿಯ ಪರಡಿ(ಹಡ್ಡಲಗಿ) ತುಂಬುವುದು ನಡೆಸಿದರು.

ದೇವಿಯ ಉಡಿಯನ್ನು ತುಂಬುವ ಮೂಲಕ ದೇವಿಯ ದರ್ಶನ ಪಡೆದರು. ನಂತರ ಪರಶುರಾಮ ಮತ್ತು ಮಾತಂಗಿ ದೇವಿಯ ದರ್ಶನ ಪಡೆದು
ಪುನೀತರಾದರು. ಏಳು ಕೊಳ್ಳದ ಯಲ್ಲಮ್ಮದೇವಿ ಸೇವಾ ಸಮಿತಿಯವರು ಭಕ್ತರಿಗೆ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಿದ್ದರು.

ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಭಕ್ತರು ದೇವಿಗೆ ನೈವೇದ್ಯ ಅರ್ಪಿಸಿ ನಂತರ ಕುಟುಂಬ ಸಮೇತ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಪ್ರಸಾದ ಸೇವನೆ ಮಾಡಿದರು. ಜಾತ್ರೆಯಲ್ಲಿ ವಿವಿಧ ಬಗೆಯ ಆಟಿಗೆ ಸಾಮಾನುಗಳ ಅಂಗಡಿಗಳಿದ್ದು ಚಿಣ್ಣರು ತಮ್ಮ ಆಟಿಗೆ ಸಾಮಾನು ಖರೀದಿಯಲ್ಲಿ ನಿರತರಾಗಿದ್ದರು.

ಓದಿ : ಮಕ್ಕಳ ಹಾಜರಾತಿಗೆ ಕ್ರಮ ಕೈಗೊಳ್ಳಿ; ಜಿಪಂ ಸಿಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next