ಗೌರಿಬಿದನೂರು: ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂ.ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರು ಒದಗಿಸುವ ನಿಟ್ಟಿನಲ್ಲಿ ಎತ್ತಿನಹೊಳೆ ಎಂಬ ಅವೈ ಜ್ಞಾನಿಕ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ದೂರಿದರು.
ಗೌರಿಬಿದನೂರು ತಾಲೂಕು ಡಿ.ಪಾಳ್ಯಹೋಬಳಿ ನಾಮಗೊಂಡ್ಲು ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ನಾಮಗೊಂಡ್ಲು ಘಟಕದಉದ್ಘಾಟನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿ ಅಂದಿನಬಿಜೆಪಿ ಸರ್ಕಾರವು 8 ಸಾವಿರ ಕೋಟಿಬಿಡುಗಡೆ ಮಾಡಿತ್ತು, ಆನಂತರ ಬಂದಸಿದ್ದರಾಮಯ್ಯ ಸರ್ಕಾರವು 13 ಸಾವಿರಕೋಟಿ ರೂ.ಗಳಿಗೆ ಹೆಚ್ಚಿಸಿತು. ಆದರೆಕಾಮಗಾರಿ ಪೂರ್ಣಗೊಂಡಿಲ್ಲ ಎಂದುಆರೋಪಿಸಿದರು.
ನೀರು ಸಿಗಲ್ಲ: ಕೇಂದ್ರ ಜಲ ಆಯೋಗವು ಎತ್ತಿನಹೊಳೆಯಿಂದ ಯಾವುದೇ ರೀತಿಯ ನೀರು ಸಿಗುವುದಿಲ್ಲ. ಅದರಿಂದ ಉಪಯೋಗವಾಗುವುದಿಲ್ಲ ಎಂದು ವರದಿ ನೀಡಿದ್ದರೂ ಸರ್ಕಾರದಿಂದ ಸರ್ಕಾರಕ್ಕೆ ಅದರ ವೆಚ್ಚವನ್ನು ಹೆಚ್ಚಿಸುತ್ತದೆ ಮುಂದು ವರಿಸುತ್ತಿದ್ದಾರೆ ಆರೋಪಿಸಿ ದರು. ರೈತಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಹಾಗೂ ಎಪಿಎಂಸಿ ನಿರ್ದೇ ಶಕ, ವಕೀಲರಾದ ಎಂ.ಆರ್.ಲಕ್ಷ್ಮೀ ನಾರಾಯಣ್ ಮಾತನಾಡಿ, ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಎಂದು ಹೋರಾಟ ಮಾಡುತ್ತಿದ್ದರೂ ಕೇಂದ್ರಮತ್ತು ರಾಜ್ಯ ಸರ್ಕಾರಗಳು ರೈತರ ಬೆಂಬ ಲಕ್ಕೆ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯ ನ್ನು ತಾಲೂಕು ರೈತ ಸಂಘದ ಅಧ್ಯಕ್ಷರಾದ ಲೋಕೇಶ್‌ಗೌಡ ವಹಿಸಿದ್ದರು.
ನಾಮಗೊಂಡ್ಲು ಮುಖಂಡರಾದ ಮುನಿವೆಂಕಟಪ್ಪ, ಅಶ್ವತ್ಥ್ಗೌಡ, ನರಸಿಂಹ ರೆಡ್ಡಿ, ಅಶ್ವತ್ಥರೆಡ್ಡಿ, ರವಿಕು ಮಾರ್, ಶಿಡ್ಲಘಟ್ಟ ತಾ.ಅಧ್ಯಕ್ಷ ಪ್ರತೀಶ್,ಚಿಕ್ಕಬಳ್ಳಾಪುರ ತಾ.ಅಧ್ಯಕ್ಷ ವೆಂಕಟ ರಮಣಪ್ಪ, ಗುಡಿಬಂಡೆ ಆನಂದರೆಡ್ಡಿ,ಚಿಂತಾಮಣಿ ಭೀಮಣ,¡ ನಾರಾಯಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.