Advertisement

ಕೋವಿಡ್‌ ಕೇರ್‌ ಸೆಂಟರ್‌ ಆರಂಭ

09:08 PM May 29, 2021 | Team Udayavani |

ಹುಳಿಯಾರು: ಹುಳಿಯಾರಿನ ಅಂಬೇಡ್ಕರ್‌ ಭವನದಹಿಂಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಮೆಟ್ರಿಕ್‌ ಪೂರ್ವಬಾಲಕರ ವಿದ್ಯಾರ್ಥಿ ನಿಲಯವು ಈಗ ಕೋವಿಡ್‌ ಕೇರ್‌ಸೆಂಟರ್‌ ಆಗಿ ಪರಿವರ್ತನೆಯಾಗಿದೆ.

Advertisement

ಹುಳಿಯಾರು ಪಟ್ಟಣಸೇರಿದಂತೆ ಕೆಂಕೆರೆ, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ವಳಗೆರೆಹಳ್ಳಿಮುಂತಾದಡೆ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ತುರ್ತಾಗಿ ಹುಳಿಯಾರಿನಲ್ಲಿ ಕೋವಿಡ್‌ ಕೇರ್‌ಸೆಂಟರ್‌ ಸ್ಥಾಪಿಸುವಂತೆ ಸಚಿವಜೆ.ಸಿ.ಮಾಧುಸ್ವಾಮಿ ಸೂಚಿಸಿದ ಹಿನ್ನೆಲೆಆರಂಭಿಸಲಾಗಿದೆ.

ಮೇ 20ರಿಂದ ಈಚೆಗೆಪಾಸಿಟಿವ್‌ ಬಂದಿರುವವರು, ಹೋಂಕ್ವಾರಂಟೈನ್‌ನಲ್ಲಿರುವವರನ್ನು ಈ ಕೋವಿಡ್‌ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲುನಿರ್ಧರಿಸಲಾಗಿದ್ದು, ಆಶಾ, ಅಂಗನವಾಡಿ ಮತ್ತುಪಪಂ ಸಿಬ್ಬಂದಿ ಸೋಂಕಿತರನ್ನು ಕೇರ್‌ ಸೆಂಟರ್‌ಗೆಕರೆ ತರಲಿದ್ದಾರೆ. ಸೋಂಕಿತರು ನಿರಾಕರಿಸಿದರೆ ಪೊಲೀಸ್‌ಸಹಕಾರ ಸಹ ಪಡೆಯುವುದಾಗಿ ಪಪಂ ಮುಖ್ಯಾಧಿಕಾರಿಮಂಜುನಾಥ್‌ ತಿಳಿಸಿದ್ದಾರೆ.

ಕೋವಿಡ್‌ ಕೇರ್‌ ಸೆಂಟರ್‌ನನೋಡಲ್‌ ಅಧಿಕಾರಿಯಾಗಿ ಪಪಂ ಕಿರಿಯ ಅಭಿಯಂತರಡಿ.ಮಂಜುನಾಥ್‌ ಉಸ್ತುವಾರಿ ವಹಿಸಲಿದ್ದು, ಪಾಸಿಟಿವ್‌ಹೊಂದಿರುವವರಿಗೆ ಆರೋಗ್ಯ ತಪಾಸಣೆ, ಊಟದವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಮತ್ತಿತರ ಮೂಲಭೂತಸೌಕರ್ಯ ಕಲ್ಪಿಸಲು ತಾಲೂಕು ಆಡಳಿತದಿಂದಸಿಬ್ಬಂದಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next