Advertisement
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ 1.18 ಲಕ್ಷ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಗೌರವ ಸಂಭಾವನೆ ಹೆಸರಿನಲ್ಲಿ ಸರ್ಕಾರ ಅಲ್ಪಮೊತ್ತ ನೀಡುತ್ತಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
Related Articles
Advertisement
ಅಡುಗೆ ಸಹಾಯಕರಿಗೆ ನೀಡುತ್ತಿರುವ ಸಮಸ್ಯೆ ಸರಿಪಡಿಸಲು ಹೊಸ ನಿಯಮಾವಳಿ ಜಾರಿ ಮಾಡುತ್ತಿದ್ದೇವೆ. ಅಡುಗೆ ತಯಾರಿಕರಿಗೆ ನೀಡುವ ಗೌರವ ಧನ ಶೇ.10ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.90ರಷ್ಟು ಕೇಂದ್ರ ಸರ್ಕಾರ ನೀಡಬೇಕು. ಈಗ ಕೇಂದ್ರ ಸರ್ಕಾರ ಕೇವಲ 600 ರೂ. ನೀಡುತ್ತಿದೆ. ರಾಜ್ಯ ಸರ್ಕಾರ 1,600 ರೂ. ನೀಡುತ್ತಿದ್ದೇವೆ ಎಂದು ಹೇಳಿದರು.
ಸ್ವಾಭಿಮಾನದ ಬದುಕು ನಡೆಸಲು ಸರ್ಕಾರ ನೀಡುತ್ತಿರುವ ಗೌರವ ಧನ ಸಾಲದು ಎಂಬ ವಿಚಾರವನ್ನು ಸಂಘಟಕರು ತಿಳಿಸಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಮಾಡಲಾಗಿದೆ. ಪ್ರಾಥಮಿಕ ಶಾಲಾ ವ್ಯವಸ್ಥೆಯಲ್ಲಿ ನಮ್ಮಲ್ಲಿರುವ ಆಯಾಗಳು ಮತ್ತು ಅಡುಗೆ ಸಹಾಯಕರಿಗೆ ಆಗುವ ತೊಂದರೆಗೆಳ ಬಗ್ಗೆ ತಿಳಿದಿದೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭರವಸೆ ನೀಡಿದರು.
ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರ ಈ ಹಿಂದೆ ನೀಡಿರುವ ಭರವಸೆಯನ್ನು ಲಿಖೀತ ರೂಪದಲ್ಲಿ ಸಲ್ಲಿಸಿದ್ದೇವೆ. ಫೆ.16ರಂದು ಮುಖ್ಯಮಂತ್ರಿಯವರು ಮಂಡಿಸುವ ಬಜೆಟ್‌ನಲ್ಲಿ ಸೂಕ್ತ ತೀರ್ಮಾನ ಹೊರಬೀಳಲಿದೆ ಎಂದರು.
ಸಚಿವರ ಮನೆಗೆ ಮುತ್ತಿಗೆ ಯತ್ನ: ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ಬಿಸಿಯೂಟ ತಯಾರಕರ ಸಂಘಟನೆಯ ಕೆಲವು ಕಾರ್ಯಕರ್ತೆಯರು ಮಂಗಳವಾರ ಬೆಳಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇs… ಅವರ ಮನೆ ಮುಂದೆ ಜಮಾಯಿಸಿ ಕನಿಷ್ಠ ವೇತನ, ಕೆಲಸ ಕಾಯಂ ಮಾಡುವಂತೆ ಒತ್ತಾಯಿಸಿದರು.
ಸಚಿವರಿಂದ ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತೆಯರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಕ್ರೋಶಗೊಂಡ ಕಾರ್ಯಕರ್ತೆಯರು ಬ್ಯಾರಿಕ್ಯಾಡ್ ಎಳೆದು ಹಾಕಿದರು.
ಶಿಕ್ಷಕರ ನೇಮಕಾತಿಗೆ ಆಗ್ರಹ: ಸರ್ಕಾರಿ ಹಾಗೂ ಅನುದಾನಿತ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ನಡಪರ ಸಂಘಟನೆಗಳು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ತನ್ವೀರ್ ಸೇs…, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ಈ ವಿಚಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದೇನೆ ಎಂದು ಆಶ್ವಾಸನೆ ನೀಡಿದರು.