Advertisement
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಮ್ಮ ಎಡೆ ಬಿಡದ ಪ್ರಯತ್ನದಿಂದಾಗಿ ಸಿದ್ದರಾ ಮಯ್ಯ ಅವರು ಮುಖ್ಯಮಂತಿ ಸಂದರ್ಭದಲ್ಲಿ 2017-18ನೇ ಸಾಲಿನಲ್ಲಿ ಚಾಮರಾಜನಗರ ಸರ್ಕಾರಿ ಕಾನೂನು ಕಾಲೇಜು ಮಂಜೂರಾಯಿತು. ಇದಕ್ಕಾಗಿ ಸಿದ್ದರಾಮಯ್ಯಅವರು ಬಜೆಟ್‌ನಲ್ಲಿ 1 ಕೋಟಿ ರೂ.ನೀಡಿದ್ದರು. ಇನ್ನೇನು ಲಾ ಕಾಲೇಜು ಆರಂಭವಾಗುವ ಹಂತದಲ್ಲಿತ್ತು. ಆದರೆ, ಬಾರ್ ಕೌನಿಲ್ಸ್ ಆಫ್ ಇಂಡಿಯಾ ದೇಶದಲ್ಲಿ 3 ವರ್ಷಗಳ ಕಾಲ ಯಾವುದೇ ಹೊಸ ಕಾನೂನು ಕಾಲೇಜು ಸ್ಥಾಪನೆ ಬೇಡ ಎಂದು ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಇದುವರೆಗೆ ಕಾನೂನು ಕಾಲೇಜು ಆರಂಭಿಸಲು ಸಾಧ್ಯವಿರಲಿಲ್ಲ. ಆದರೆ ಇತ್ತೀಚಿಗಷ್ಟೇ ಬಾರ್ ಕೌನ್ಸಿಲ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದ್ದರಿಂದ ಕಾನೂನು ಕಾಲೇಜು ಆರಂಭಿಸಲು ಇದ್ದ ತಡೆ ನಿವಾರಣೆಯಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಮುಂಬರುವ2021ರ ಸಾಲಿನಲ್ಲಿಯೇ ಚಾಮರಾಜನಗರ ದಲ್ಲಿ ಕಾನೂನು ಕಾಲೇಜು ಪ್ರಾರಂಭ ಮಾಡಬೇಕು ಎಂದರು.
Related Articles
Advertisement
ಚಾಮರಾಜನಗರದಲ್ಲಿ ಆರಂಭವಾಗಿರುವ ಕೃಷಿ ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕೆ ನರ್ಬಾರ್ಡ್ ಅನುದಾನ 25 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ಕಾಮಗಾರಿಗೆ ನೀಡಲು ಸಚಿವ ಸಂಪುಟ ಸಮ್ಮತಿ ನೀಡಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದರು.
ಚಾಮರಾಜನಗರಕ್ಕೆ ಕೃಷಿ ಕಾಲೇಜು ಮಂಜೂರಾಗಿ 3 ವರ್ಷವಾಗಿದೆ. ಕಾಲೇಜು ಪ್ರಸ್ತುತ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ಯಡಬೆಟ್ಟದ ತಪ್ಪಲಿನಲ್ಲಿ 75 ಎಕರೆ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗಗುರುತಿಸಲಾಗಿದ್ದು, ನರ್ಬಾರ್ಡ್‌ನಿಂದ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಸಭೆಯ ಅನುಮತಿ ನೀಡಬೇಕು ಎಂದು ತಿಳಿಸಿದರು.ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಈಗಾಗಲೇ 5
ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕಾಲೇಜು ಕಟ್ಟಡದ ಆರಂಭದ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೇ ಡಾ. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.