Advertisement

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಫ್ಯಾಬ್‌ಅಲಿ ಮಳಿಗೆ ಆರಂಭ

12:19 PM Jun 06, 2018 | Team Udayavani |

ಬೆಂಗಳೂರು: ಇಂಡ್ಯಾ ಸ್ಟೋರ್‌ಗಳ ಯಶಸ್ಸಿನ ನಂತರ ಹೈ ಸ್ಟ್ರೀಟ್‌ ಎಸೆನ್ಷಿಯಲ್ಸ್‌ ಪ್ರೈ. ಲಿ., (ಎಚ್‌ಎಸ್‌ಇ) ಈಗ ಫ್ಯಾಬ್‌ಅಲಿಗಾಗಿ ತನ್ನ ಮೊದಲ ಪ್ರತ್ಯೇಕ ಬ್ರ್ಯಾಂಡ್‌ ಮಳಿಗೆ ಮತ್ತು ಇಂಡ್ಯಾಗಾಗಿ ತನ್ನ 7ನೇ ಮಳಿಗೆಯನ್ನು ಕಮರ್ಷಿಯಲ್‌ ಸ್ಟ್ರೀಟ್‌ನಲಿ ಆರ‌ಂಭಿಸಿದೆ.

Advertisement

ಬೆಂಗಳೂರು ನಗರ ಫ್ಯಾಷ‌ನ್‌ನ‌ಲ್ಲಿ ಮುಂಚೂಣಿಯಲ್ಲಿದ್ದು, ಫ್ಯಾಬ್‌ಅಲಿಗೆ ಇದು ಪ್ರಮುಖ ನಗರವಾಗಿರುವುದರಿಂದ ಕಂಪನಿಯ ಅತ್ಯಂತ ದೊಡ್ಡ ಮಳಿಗೆ ಇದಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆ ಸಹಸ್ಥಾಪಕ ತನ್ವಿ ಮಲಿಕ್‌ ಮತ್ತು ಶಿವಾನಿ ಪೊದ್ದಾರ್‌ ಮಾತನಾಡಿದರು. ಸಿಲಿಕಾನ್‌ ಸಿಟಿಯಲ್ಲಿ ನಮ್ಮ 7ನೇ ಮಳಿಗೆ ಆರಂಭದಿಂದ ಬಹಳ ಉತ್ಸುಕರಾಗಿದ್ದೇವೆ.

ಇನ್ನು ಆಫ್‌ಲೈನ್‌ ವ್ಯಾಪಾರದ ಮೂಲಕ ದೇಶದೆಲ್ಲೆಡೆ ನಮ್ಮ ಹಾಜರಿಯನ್ನು ವಿಸ್ತರಿಸುವತ್ತ ಗಮನ ಹರಿಸಿದ್ದೇವೆ ಎಂದರು. 2019ರ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಸ್ಥೆಯ ಅಂದಾಜು ಆಫ್‌ಲೈನ್‌ ಆದಾಯದ ಪಾಲು ಶೇ.30 ರಷ್ಟು ಹೆಚ್ಚುವ ನಿರೀಕ್ಷೆಯಿದೆ.

ಈ ವರ್ಷಾಂತ್ಯದ ವೇಳೆಗೆ ಇನ್ನು 18 ಮಳಿಗೆಗಳನ್ನು ತೆರೆಯುವುದರೊಂದಿಗೆ 25 ಮಳಿಗೆಗಳಿಗೆ ತಲುಪುವ ಗುರಿ ಹೊಂದಿದ್ದೇವೆ. ಇಲ್ಲಿ ಗ್ರಾಹಕರು ಬ್ರ್ಯಾಂಡ್‌ಗಳು ಹಾಗೂ ಅವುಗಳ ಕೊಡುಗೆಯನ್ನು ಸ್ವತಃ ತಿಳಿದುಕೊಳ್ಳುವ ಅವಕಾಶವಿದೆ. ಮೂರು ಅಂತಸ್ತುಗಳಲ್ಲಿ ಹರಡಿರುವ ಮಳಿಗೆ ಇಂಡ್ಯಾ ಸಂಗ್ರಹವನ್ನು ಮೊದಲ ಅಂತಸ್ತಿನಲ್ಲಿ ಫ್ಯಾಬ್‌ ಸಂಗ್ರಹ ಹಾಗೂ 2ನೇ ಮಹಡಿಯಲ್ಲಿ ಲಾಂಜ್‌ ಪ್ರದೇಶವಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next