Advertisement

ಮಳೆಗಾಲಕ್ಕೂ ಮುನ್ನವೇ ಶ್ರಮಬಿಂದು ಅರ್ಧದಷ್ಟು ಭರ್ತಿ

03:27 PM Jun 07, 2022 | Team Udayavani |

ಜಮಖಂಡಿ: ಚಿಕ್ಕಪಡಸಲಗಿ ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ದಿ| ಸಿದ್ದು ನ್ಯಾಮಗೌಡ ಶ್ರಮಬಿಂದು ಸಾಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಳೆಗಾಲಕ್ಕೂ ಮುನ್ನವೇ 2.5 ಟಿಎಂಸಿ ನೀರು ಸಂಗ್ರಹವಾಗಿದ್ದು, ಶ್ರಮಬಿಂದು ಅರ್ಧದಷ್ಟು ನೀರು ಭರ್ತಿಯಾಗಿ ಹೊಸ ದಾಖಲೆ ನಿರ್ಮಿಸಿದೆ.

Advertisement

ಕಳೆದ 15 ವರ್ಷಗಳಲ್ಲಿ ಪ್ರತಿ ವರ್ಷ ಮೇ-ಜೂನ್‌ ತಿಂಗಳಲ್ಲಿ ನೀರಿನ ಅಭಾವ ಎದುರಿಸುವ ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ 2.5 ಟಿಎಂಸಿ ನೀರು ಸಂಗ್ರಹದಿಂದ ಮಳೆಗಾಲಕ್ಕೂ ಮುನ್ನವೇ ಚಿಕ್ಕಪಸಲಗಿ ಬ್ಯಾರೇಜ್‌ ಅರ್ಧದಷ್ಟು ಭರ್ತಿಯಾಗುವ ಮೂಲಕ ಮತ್ತೂಂದು ಹೊಸ ದಾಖಲೆ ನಿರ್ಮಿಸಿದೆ.

ಚಿಕ್ಕಪಡಸಲಗಿ ಬ್ಯಾರೇಜ್‌ ಅಂದಾಜು 4.3 ಟಿಂಎಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿ ರುವ ಬ್ಯಾರೇಜಿನಲ್ಲಿ ಸೋಮವಾರ 2.5 ಟಿಎಂಸಿ ಹೆಚ್ಚು ನೀರು ಸಂಗ್ರಹವಾಗಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 5 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಬ್ಯಾರೇಜ್‌ಗೆ ಅಳವಡಿಸಲಾಗಿರುವ 124 ಕಮಾನ್‌ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ.

ಕಳೆದ 15 ವರ್ಷಗಳಲ್ಲಿ ಜೂನ್‌ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶ್ರಮಬಿಂದು ಸಾಗರಕ್ಕೆ ನೀರು ಹರಿದು ಬಂದಿಲ್ಲ. ಪ್ರಸಕ್ತ ವರ್ಷ 2.5 ಟಿಂಎಸಿ ನೀರು ಸಂಗ್ರಹವಾಗಿದೆ. ಸದ್ಯ ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. –ಮಹಾವೀರ ಪಾಟೀಲ, ಇಂಜಿನಿಯರ್‌ ಚಿಕ್ಕಪಡಸಲಗಿ ಬ್ಯಾರೇಜ್‌

ಚಿಕ್ಕಪಡಸಲಗಿ ದಿ. ಸಿದ್ದು ನ್ಯಾಮಗೌಡ ಬ್ಯಾರೇಜಿಗೆ ಮಳೆಗಾಲಕ್ಕೂ ಮುನ್ನವೇ ಅರ್ಧದಷ್ಟು ನೀರು ಸಂಗ್ರಹವಾಗಿದ್ದು ಸಂತಸ ಮೂಡಿಸಿದೆ. ಪ್ರತಿವರ್ಷ ಮೇ-ಜೂನ್‌ ತಿಂಗಳಲ್ಲಿ ತಾಲೂಕಿನಲ್ಲಿ ನೀರಿನ ತೊಂದರೆ ಅನುಭವಿಸುತ್ತಿದ್ದ ಜನರು ನಿರಾಳವಾಗಿದ್ದಾರೆ. ಮಳೆಗಾಲಕ್ಕೂ ಮುನ್ನ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಸಂತಸ ತಂದಿದೆ. –ಆನಂದ ನ್ಯಾಮಗೌಡ, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next