Advertisement
ಕೆಮ್ಮಣ್ಣು ನಿವಾಸಿ ಸಂಪಾ (53) ಮೃತಪಟ್ಟ ಮಹಿಳೆ. ಅವರು ಕುದ್ರುವಿನಲ್ಲಿರುವ ವಾಜೀದ್ ಅವರ ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಜೇನು ಕಡಿದಿದೆ ಎನ್ನಲಾಗಿದೆ. ತೀವ್ರಅಸ್ವಸ್ಥಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿ: ಏಣಗುಡ್ಡೆ ರಾಜರತ್ನ ರಸ್ತೆಯ ಬಳಿ ಹಲವು ಮಂದಿಗೆ ಹೆಜ್ಜೇನು ದಾಳಿ ನಡೆಸಿದ್ದು, ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲುಗೊಂಡ ಘಟನೆ ನಡೆದಿದೆ. ಈ ರಸ್ತೆ ತಿರುವಿನ ಹುಣಸೆ ಹುಳಿ ಮರದಲ್ಲಿ ಹೆಜ್ಜೇನು ಬೃಹತ್ ಗಾತ್ರದ ಗೂಡು ಕಟ್ಟಿತ್ತು. ಗಿಡುಗ ಬಂದು ಗೂಡಿಗೆ ದಾಳಿ ನಡೆಸಿದ ಕಾರಣ ಕೆರಳಿದ ಹೆಜ್ಜೇನು ದಾರಿಯಲ್ಲಿ ಸಾಗುತ್ತಿದ್ದ ಜನರ ಮೇಲೆ ದಾಳಿ ನಡೆಸಿದೆ.
Related Articles
Advertisement
ಇದನ್ನೂ ಓದಿ :ಸಕ್ರಬೈಲು: ಅನಾರೋಗ್ಯದಿಂದ ಬಳಲುತ್ತಿದ್ದ “ದಾವಣಗೆರೆಯ ಗಣೇಶ’ ಆನೆ ಸಾವು