Advertisement
ಹೌದು! ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು, ತಾಲ್ಲೂಕಿನ ಕಮಲಾಪುರ ಸಮೀಪದ ದರೋಜಿ ಕರಡಿಧಾಮಕ್ಕೆ ಭೇಟಿ ನೀಡಿ, ಸಫಾರಿ ಮೂಲಕ ಕರಡಿಗಳ ಚಲನವಲನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
Related Articles
Advertisement
ಈ ಹಿಂದೆ ತಮ್ಮ ಸ್ವಂತ ವಾಹನಗಳಲ್ಲಿ ಕರಡಿಧಾಮ ಭೇಟಿಗೆ ಪ್ರವಾಸಿಗರಿಗೆ ಅವಕಾಶವಿತ್ತಾದರೂ ಸಫಾರಿ ವ್ಯವಸ್ಥೆ ಇರಲ್ಲಿಲ್ಲ. ಆದರೆ ಇದೀಗ ಅರಣ್ಯ ಇಲಾಖೆ ಸಫಾರಿ ವಾಹನ ವ್ಯವಸ್ಥೆಯನ್ನು ಮಾಡಿದೆ.
ಈ ಮೂಲಕ ಕರಡಿಧಾಮದ ಒಟ್ಟು ವಾತಾವರಣವನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯಗೈಯಲು ಅರಣ್ಯ ಇಲಾಖೆ ಮುಂದಾಗಿದೆ.
ನೈಸರ್ಗಿಕ ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವ, ನೈಸರ್ಗಿಕವಾಗಿ ಲಭ್ಯವಾಗುವ ಹಣ್ಣು ಹಂಪಲಗಳಿಂದ ಆಹಾರ ಪೂರೈಕೆ ಸೇರಿದಂತೆ ಜೀವವೈವಿಧ್ಯತೆಯನ್ನು ಪರಿಚಯಿಸುವ ಕಾರ್ಯ ಈ ಕರಡಿಧಾಮದ ಸಫಾರಿಯಲ್ಲಿ ನಡೆಯಲಿದೆ. ಸುಮಾರು 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ದರೋಜಿ ಕರಡಿ ಧಾಮದಲ್ಲಿ ಸುಮಾರು 120 ಕ್ಕೂ ಹೆಚ್ಚು ಕರಡಿಗಳು ವಾಸವಾಗಿವೆ.ಸಂಪೂರ್ಣ ದರೋಜಿ ಕರಡಿಧಾಮ, ಕಲ್ಲು-ಬಂಡೆಗಳಿಂದ ಆವೃತ್ತವಾದ ಬೆಟ್ಟ-ಗುಡ್ಡಗಳ ಮಧ್ಯ ಗುಹೆಗಳು ಕರಡಿ, ಚಿರತೆ, ಕತ್ತೆ ಕಿರುಬ, ಕಾಡು ಹಂದಿ, ಮುಳ್ಳಹಂದಿ, ನರಿ, ಗುಳ್ಳೆನರಿ, ತೊಳ ಚುಕ್ಕೆ ಪುನಗು, ಮುಂಗುಸಿ, ಮೊಲ, ಬಾವಲಿಗಳು ಸೇರಿದಂತೆ ನಾನಾ ಪ್ರಬೇಧಗಳ ಆವಾಸ ಸ್ಥಾನವಾಗಿದೆ. ಇನ್ನು ಉತ್ತರ ಕರ್ನಾಟಕದ ವಿಶಿಷ್ಠ ಮರ-ಗಿಡ ಪೊದೆ, ಮೂಲಿಕೆ, ನವಿಲು, ಕಲ್ಲುಕೋಳಿ, ಬುರ್ಲ, ಹದ್ದು, ಪಾರಿವಾಳ, ಗಿಳಿ, ಬೆಳ್ಳಕ್ಕಿ, ಗೂಬೆ ಉಡಾ, ಆಮೇ, ಚಿಟ್ಟೆಗಳು 150 ಹೆಚ್ಚು ವಿವಿಧ ಪ್ರಕಾರದ ಹಕ್ಕಿಗಳ ಆವಾಸಕ್ಕೆ ಯೋಗ್ಯಸ್ಥಾನವಾಗಿದೆ. ಈ ಎಲ್ಲವನ್ನು ಪರಿಚಯಿಸುವ ಕಾರ್ಯವನ್ನು ದರೋಜಿ ಕರಡಿಧಾಮದ ಸಿಬ್ಬಂದಿಗಳು ತಮ್ಮ ತಜ್ಞರೊಂದಿಗೆ ಸಫಾರಿಯಲ್ಲಿ ಬರುವ ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಮಾಡಲಿದ್ದಾರೆ. – ಪಿ.ಸತ್ಯನಾರಾಯಣ, ಹೊಸಪೇಟೆ.