Advertisement

ಬಿಯರ್‌ ದಾಸ್ತಾನು ಬಿಕರಿಗೆ ಅನುಮತಿ

04:28 AM May 16, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ನಿಂದ ಬಿಕರಿಯಾಗದ ಬಿಯರ್‌ನ ಬಳಕೆ ಅವಧಿ (ಆರು ತಿಂಗಳು) ಮುಗಿದು ವ್ಯರ್ಥವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರ್‌.ವಿ.ಬಿ. ಜತೆಗೆ ಬಾಟಲ್ಡ್‌ ಬಿಯರ್‌ ಮಾರಾಟಕ್ಕೆ ಅನುಮತಿ ಪಡೆದಿರುವ  ಸನ್ನದುದಾರರಿಗೆ ಮೇ 17ರವರೆಗೆ ಹಾಲಿ ಬಿಯರ್‌ ದಾಸ್ತಾನು ಮಾರಾಟಕ್ಕೆ ಅಬಕಾರಿ ಇಲಾಖೆ ಷರತ್ತು ಬದಟಛಿ ಅನುಮತಿ ನೀಡಿದೆ. ಸೀಲ್‌ ಮಾಡಿರುವ ಬಿಯರ್‌ ಬಾಟಲ್‌ಗ‌ಳನ್ನು ಎಂಆರ್‌ಪಿ ದರದಲ್ಲೇ ಮಾರಾಟ ಮಾಡಬೇಕು.

Advertisement

ಆರ್‌.ವಿ.ಬಿ.ಗಳನ್ನು ಹೊಂದಿ ಬಾಟಲ್ಡ್‌ ಬಿಯರ್‌ ಮಾರಾಟ ಅನುಮತಿಯಿರುವ ಸನ್ನದುಗಳಲ್ಲಿನ ಬಾಟಲ್ಡ್‌ ಬಿಯರ್‌ ಸನ್ನದಿನಲ್ಲಿ ಊಟ, ತಿಂಡಿ ಪಾರ್ಸೆಲ್‌ ನೀಡಲು ಅವಕಾಶ ಕಲ್ಪಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.  ಹಾಲಿ  ದಾಸ್ತಾನು ಮಾರಾಟಕ್ಕೆ ಅವಕಾಶವಿದ್ದು, ಹೊಸ ಖರೀದಿಗೆ ಅವಕಾಶವಿಲ್ಲ. ಕಂಟೈನ್‌ಮೆಂಟ್‌ ವಲಯದಲ್ಲಿನ ಸನ್ನದುಗಳಿಗೆ ಈ ಅವಕಾಶ ಅನ್ವಯಿಸುವುದಿಲ್ಲ. ಬೆಳಗ್ಗೆ 9ರಿಂದ ರಾತ್ರಿ 7ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.  ಷರತ್ತು ಉಲ್ಲಂಘನೆ ಇಲ್ಲವೇ ದುರುಪಯೋಗವಾದರೆ ಸನ್ನದುದಾರರೇ ಜವಾಬ್ದಾರರಾಗಲಿದ್ದು, ಸನ್ನದು ಅಮಾನತು ಇಲ್ಲವೇ ರದ್ದುಪಡಿಸುವುದಾಗಿ ಅಬಕಾರಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಪಾರ್ಸೆಲ್‌ಗೆ ಅವಕಾಶ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಎಲ್‌- 2, ಸಿಎಲ್‌- 4, ಸಿಎಲ್‌- 7, ಸಿಎಲ್‌- 6ಎ, ಸಿಎಲ್‌- 7ಎ, ಸಿಎಲ್‌- 9, ಸಿಎಲ್‌- 16, ಸಿಎಲ್‌- 18 ಹಾಗೂ ವೈನ್‌ ಟ್ಯಾವರಿನ್‌ ಸನ್ನದುಗಳಲ್ಲಿ ಮಾರಾಟವಾಗದೆ ಉಳಿದ ಮದ್ಯವನ್ನು  ಮೇ 17ರವರೆಗೆ ಬೆಳಗ್ಗೆ  9ರಿಂದ ರಾತ್ರಿ 7ರವರೆಗೆ ಮಾರಾಟ ಮಾಡಲು ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರೆಸ್ಟೋರೆಂಟ್‌ನಲ್ಲಿ ಊಟ/ ತಿಂಡಿ ಪಾರ್ಸೆಲ್‌ ರೂಪದಲ್ಲಿ ಇತರೆ ರೆಸ್ಟೋರೆಂಟ್‌ಗೆ ನಿಗದಿಪಡಿಸಿರುವ ಕಾಲಮಿತಿಯಂತೆ ಕಾರ್ಯ  ನಿರ್ವಹಿಸಲು  ಅವಕಾಶ ನೀಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next