ರಾಮನಗರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಇದನ್ನು ಕಂಡ ಇಲ್ಲಿನ ನಿವಾಸಿಗಳಿಗೆ ಒಂದೆಡೆ ಆಶ್ಚರ್ಯವಾದರೆ ಇನ್ನೊಂದೆಡೆ ಆತಂಕವೂ ಮನೆಮಾಡಿದೆ.
Advertisement
ಗ್ರಾಮದ ಸಿದ್ದಪ್ಪಾಜಿ ದೇವಾಲಯದ ನಿತ್ಯ ಕಾಣಿಸಿಕೊಳ್ಳುವ ಕರಡಿ ದೇವಾಲಯದ ಮುಂಭಾಗ ಬಂದು ಬಾಗಿಲು ಬಡಿಯುವ ದೃಶ್ಯ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾದಲ್ಲಿ ಕರಡಿ ಕೈ ಮುಗಿದು ನಿಂತಂತೆ ಕಾಣುತ್ತಿದ್ದು ಇದರ ವಿಡಿಯೋ ಕಂಡು ಇಲ್ಲಿನ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.