Advertisement

ನಗರದ ಮುಖ್ಯ ರಸ್ತೆಯಲ್ಲೇ ಕರಡಿ ಸಂಚಾರ : ಭೀತಿಯಲ್ಲಿ ಸ್ಥಳೀಯ ನಿವಾಸಿಗಳು

01:00 PM Mar 19, 2022 | Team Udayavani |

ಚಿಕ್ಕಜಾಜೂರು : ಮಾರುತಿ ನಗರದ ಸಮೀಪದ ಸೆಕ್ರೇಟ್ರಿ ರುದ್ರಪ್ಪ ರವರ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಸಮೀಪ ಕರಡಿಯೊಂದು ಕಾಣಿಸಿಕೊಂಡಿದ್ದು, ಭಯವಿಲ್ಲದೆ ಸಾರ್ವಜನಿಕ ಸಂಚಾರ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದೆ, ಸಿಮೆಂಟ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ರೇಷ್ಮಾ ರವರು ಕರಡಿ ಕಂಡು ಭಯಭೀತರಾಗಿ ಅಲ್ಲೆ ಇದ್ದ ರೂಂ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಕರಡಿ ತಿರುಗಾಡುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ,

Advertisement

ಅವರನ್ನು ಕಂಡ ಕರಡಿ ಹೆದರದೆ ಅಲ್ಲೇ ಸುತ್ತಾಡುತ್ತಿದೆ ಎಂದು ಹೇಳಲಾಗಿದೆ, ಚಿಕ್ಕಂದವಾಡಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷ ಕಂಡು, ಮಾರುತಿನಗರದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ,

ದಿನನಿತ್ಯ ಈ ಮಾರ್ಗವಾಗಿ ಶಾಲಾಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ, ಸಂಜೆ 4 ರಿಂದ 4:30 ವೇಳೆಗೆ ವಾರದಲ್ಲಿ ಒಮ್ಮೆ ಈ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತದೆ , ಈ ಮುಂಚೆ ಬಂದಾಗ ತೋಟದ ಮಾಲೀಕರು ಪಟಾಕಿ ಸಿಡಿಸಿ ಬೆದರಿಸಿದ ಹಿನ್ನೆಲೆ ಕರಡಿ ಕಾಲ್ಕಿತ್ತಿದ್ದು ಆ ಬಳಿಕ ಕಾಣಿಸಿಕೊಂಡಿರಲಿಲ್ಲ, ಆದರೆ ಈಗ ಮತ್ತೆ ಕರಡಿ ಕಂಡು ಜನರು ಭಯಭೀತರಾಗಿದ್ದಾರೆ, ಹಲವು ಭಾರೀ ಕರಡಿ ಪ್ರತ್ಯಕ್ಷವಾದ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ವರದಿ ಮಾಡಿದರು ಕೂಡ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರಲ್ಲಿ ಇಲಾಖೆ ಮೇಲೆ ಅಸಮಾಧಾನ ಮಾತು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ನೂರು ಕೋಟಿ ರೂ. ಬಾಚಿದ ವಿವೇಕ್ ಅಗ್ನಿಹೋತ್ರಿಯ ‘ದಿ ಕಾಶ್ಮೀರ್ ಫೈಲ್’

ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಕರಡಿ ಹಿಡಿದು ಸಾರ್ವಜನಿಕರಲ್ಲಿ ಮೂಡಿರುವ ಭಯವನ್ನು ದೂರ ಮಾಡಬೇಕೆಂದು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next