ಪಣಜಿ: ಗೋವಾಕ್ಕೆ ಬಂದ ಪ್ರವಾಸಿಗರು ಇಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ತ್ಯಾಜ್ಯವಸ್ತುಗಳನ್ನು ಎಸೆದು ಹೋಗುವುದು ಕಂಡುಬರುತ್ತದೆ. ಇಂತದ್ದೊಂದು ಘಟನೆಯಲ್ಲಿ ಟ್ರಾಫಿಕ್ ಪೋಲಿಸರು ಪ್ರವಾಸಿಗರ ವಾಹನದ ಬೆನ್ನಟ್ಟಿ ಬಂದು ದಂಡ ವಿಧಿಸಿದ ಘಟನೆ ಪಣಜಿಯಲ್ಲಿ ನಡೆದಿದೆ.
ಪಣಜಿಯ ಮಾಂಡವಿ ನದಿಯ ಅಟಲ್ ಸೇತುವೆಯ ಮೇಲಿಂದ ವೇಗವಾಗಿ ಬರುತ್ತಿದ್ದ ಪ್ರವಾಸಿಗರ ಕಾರಿನಿಂದ ನದಿಗೆ ಬಿಯರ್ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಟ್ರಾಫಿಕ್ ಪೋಲಿಸರ ಕಣ್ಣಿಗೆ ಬಿದ್ದಿದೆ. ಈ ಕೂಡಲೆ ಆ ಪ್ರವಾಸಿಗರ ಕಾರನ್ನು ಬೆನ್ನಟ್ಟಿ ಬಂದ ಪೋಲಿಸರು ಪ್ರವಾಸಿಗರಿಗೆ ಬುದ್ದಿ ಹೇಳಿ ನಂತರ ದಂಡ ವಿಧಿಸಿದ ಘಟನೆ ನಡೆದಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ಪ್ರವಾಸಿಗರು ಮಾಡಿದ ತಪ್ಪಿಗೆ ದಂಡ ಭರಿಸಿ ತೆರಳುವಂತಾಗಿದೆ.