Advertisement

ಚುನಾವಣಾ ಮತ ಎಣಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ಪೇದೆ ಮೇಲೆ ಕರಡಿ ದಾಳಿ

12:56 PM Dec 31, 2020 | Team Udayavani |

ಚನ್ನಪಟ್ಟಣ: ಗ್ರಾಪಂ ಚುನಾವಣೆ ಮತ ಎಣಿಕೆಗೆ ತೆರಳುತ್ತಿದ್ದ ಗೃಹರಕ್ಷಕ ಪೇದೆಯೋರ್ವರ ಮೇಲೆ ಎರಡು ಕರಡಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ತಾಲೂಕಿನ ಯಲಚಿಪಾಳ್ಯದಲ್ಲಿ ಬುಧವಾರ ಮುಂಜಾನೆ 4ರ ಸುಮಾರಿನಲ್ಲಿ ನಡೆದಿದೆ.

Advertisement

ಕರಡಿ ದಾಳಿಗೆ ಒಳಗಾದ ಗೃಹ ರಕ್ಷಕ ಪೇದೆ ನಾಗರಾಜು ಎಂದು ಹೇಳಲಾಗಿದ್ದು, ಗ್ರಾಮದ ಸಿದ್ದಬೋವಿ ಎಂಬವರ ಪುತ್ರರು. ಕನಕಪುರಕ್ಕೆ ಚುನಾವಣಾ ಫಲಿತಾಂಶದ ಕರ್ತವ್ಯ ನಿಯೋಜನೆಗೆ ತೆರಳಲು ಸಿದ್ಧತೆ ಮಾಡಿಕೊಂಡು, ಮುಂಜಾನೆ 4 ರ
ಸುಮಾರಿನಲ್ಲಿ ನಡೆದು ತೆರಳುವಾಗ ಮನೆ ಪಕ್ಕದ ಬೇಲಿಯಲ್ಲಿದ್ದ ಜೋಡಿ ಕರಡಿಗಳು ಏಕಾಏಕಿ ದಾಳಿ ಮಾಡಿವೆ.

ತಲೆ ಹಾಗೂ ಮುಖಕ್ಕೆ ಭಾರೀ ಗಾಯವಾಗಿದ್ದು, ಕರಡಿಗಳ ದಾಳಿಯಿಂದ ರಕ್ಷಣೆಗಾಗಿ ಕೂಗಿದ ಆತ, ಸ್ಥಳದಲ್ಲೇ ಇದ್ದ ಮರದ ಕಟ್ಟಿಗೆಯಿಂದ ಕರಡಿಗಳನ್ನು ಓಡಿಸಲು ಯತ್ನ ಮಾಡಿದ್ದಾನೆ. ಈ ವೇಳೆ ಕರಡಿಗಳು ಸ್ವಲ್ಪ ದೂರ ಓಡಿದರೂ ಮತ್ತೆ ಹಿಂತಿರುಗಿ
ದಾಳಿ ಮಾಡಿ ಗಾಯಗೊಳಿಸಿವೆ. ಗಲಾಟೆ ಹೆಚ್ಚಾಗಿದ್ದರಿಂದ ಸ್ಥಳೀಯರು ಆಗಮಿಸುತ್ತಿದ್ದನ್ನು ಗಮನಿಸಿ ಕರಡಿಗಳು
ಓಡಿಹೋಗಿವೆ. ಗಂಭೀರವಾಗಿ ಗಾಯ ಗೊಂಡ ನಾಗರಾಜು ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:ಮುಂದಿನ ಎರಡೂವರೆ ವರ್ಷ ನಾನೇ ಸಿಎಂ:’ಸಂಕ್ರಾಂತಿ ನಂತರದ ಬದಲಾವಣೆ’ ಹೇಳಿಕೆಗೆ ಬಿಎಸ್ ವೈ ಉತ್ತರ

ಈ ಭಾಗದಲ್ಲಿ ಕರಡಿಗಳ ಕಾಟ ವಿಪರೀತವಾಗಿದ್ದು, 2 ದಿನಗಳ ಹಿಂದೆ ಯಲಚಿಪಾಳ್ಯದ ಶನಿದೇವರ ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಮಾರನೇಯ ದಿನ ಅದೇ ಕರಡಿಗಳ ಗುಂಪು ಈತನ ಮೇಲೆ ದಾಳಿ ಮಾಡಿರುವುದರಿಂದ, ಗ್ರಾಮದ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

Advertisement

ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಕರಡಿಗಳ ಹಾವಳಿ ನಿಯಂತ್ರಿಸಿ, ಗ್ರಾಮದ ಜನತೆಯ ಭಯ ಹೋಗಲಾಡಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next