Advertisement

ವರುಣನ ಆರ್ಭಟಕ್ಕೆ ಹೆದರಿ ಮನೆಯ ಬೆಡ್ ರೂಂ ಸೇರಿದ ಕರಡಿ : ಗಾಬರಿಗೊಂಡ ಯಜಮಾನ

03:13 PM Aug 03, 2022 | Team Udayavani |

ಪಾವಗಡ : ತಾಲೂಕಿನ ನಿಡಗಲ್ಲು ಹೋಬಳಿ ದೇವಲಕೆರೆ ಗ್ರಾಮದಲ್ಲಿ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಬೆಡ್ ರೂಮಿನೊಳಗೆ ಬಂದ ಕರಡಿ ಆರಾಮವಾಗಿ ಮಲಗಿದೆ.

Advertisement

ಮಂಜುಳಾ ಪುಟ್ಟರಾಜುರವರ ಮನೆಯ ಕೆಲಸ ನಡೆಯುತ್ತಿದ್ದು ಬುಧವಾರ ಮನೆಯ ಯಜಮಾನ ಬಂದು ನೋಡಿದಾಗ ಬೆಡ್ ರೂಮಿನಲ್ಲಿ ಕರಡಿ ಮಲಗಿರುವುದು ಗೊತ್ತಾಗಿದೆ ಈ ವೇಳೆ ಮನೆ ಮಾಲೀಕ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ಬಳಿಕ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಗ್ರಾಮದಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗ್ರಾಮದೊಳಗೆ ಏಕಾಏಕಿ ಕರಡಿ ಬಂದಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಇದನ್ನೂ ಓದಿ : ಅಥ್ಲೆಟಿಕ್‌ ನಲ್ಲಿ ಬೆಳ್ಳಿ ಗೆದ್ದ ರಿಲೇ ತಂಡಕ್ಕೆ 5 ಲಕ್ಷ ರೂ. ನಗದು: ಸಚಿವ ಡಾ.ನಾರಾಯಣ ಗೌಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next