ಸಾಕು ನಾಯಿಯಿಂದ ಇರುವ ಅನುಕೂಲಗಳು, ಅದರಿಂದ ದೊರೆಯುವ ಪ್ರೀತಿ, ವಿಶ್ವಾಸ ಮುಂತಾದವುಗಳನ್ನು ನಾವು ಅರಿತುಕೊಳ್ಳಬೇಕು
ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ| ಪ್ರಾಣೇಶ ಜಹಾಗಿರದಾರ ಹೇಳಿದರು.
Advertisement
ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ವಾನಗಳ ಪ್ರದರ್ಶನ, ಶ್ವಾನಗಳಿಗೆ ಉಚಿತ ರೆಬಿಸ್ ಲಸಿಕೆ ಹಾಗೂ ರೆಬಿಸ್ ರೋಗದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದರೊಟ್ಟಿಗೆ ಪಶು ಸಂಗೋಪನೆ, ಹೈನುಗಾರಿಕೆಯೂ ಅಭಿವೃದ್ಧಿ ಆಗಬೇಕು. ನಾಯಿ ಸಾಕಣೆ ಹೆಚ್ಚಾಗಬೇಕು. ಬರುವ ದಿನಗಳಲ್ಲಿ ಇಲಾಖೆಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಮುದ್ದೇಬಿಹಾಳದಲ್ಲಿ ಬೇಟೆ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇರಾನ್ ದೇಶದ ನಾಯಿಯ ತಳಿಗಳನ್ನು ಹೋಲುವ ಮಾದರಿಯ ನಾಯಿಗಳು ಈ ಭಾಗದಲ್ಲಿವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಶ್ವಾಸಕ್ಕೆ ಪಾತ್ರವಾಗಿರುವ ನಾಯಿ ನಿಯತ್ತಿನ
ಪ್ರಾಣಿ. ತನ್ನನ್ನು ಸಾಕಿದವರಿಗೆ ಅದು ಎಂದೂ ಬೊಗಳುವುದಿಲ್ಲ. ಆದರೆ ಮನುಷ್ಯ 10 ಬಾರಿ ನಮ್ಮಿಂದ ಸಹಾಯ ಪಡೆದುಕೊಂಡರೂ ಒಂದು ಬಾರಿ ಸಹಾಯ ಮಾಡದಿದ್ದರೆ ಆ ಹತ್ತೂ ಸಹಾಯ ಮರೆತು ನಮ್ಮನ್ನು ಟೀಕಿಸುತ್ತಾನೆ, ವಿರೋಧಿ ಸುತ್ತಾನೆ. ಇದು ಮನುಷ್ಯ
ಮನುಷ್ಯನಿಗೆ ವಿರೋಧಿ ಯಾದರೆ, ನಾಯಿ ತನ್ನ ಸಾಕಿದ ಮನುಷ್ಯನಿಗೆ ಎಂದೂ ವಿರೋಧಿಯಾಗೊಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ.
ನಾಯಿಯಂತೆ ಅಲೆದಾಡುವವನು ಬಡವ, ನಾಯಿಯೊಂದಿಗೆ ತಿರುಗಾಡುವವನು ಶ್ರೀಮಂತ ಎನ್ನುವ ಮಾತು ಚಾಲ್ತಿಯಲ್ಲಿದೆ. ನಾಯಿಗೆ
ಇರುವಂಥ ನಿಯತ್ತು ಮನುಷ್ಯರ ಬಳಿ ಇಲ್ಲ. ನಾಯಿ ಸಾಯುವವರೆಗೂ ಸಾಕಿದವರಿಗೆ ಬೊಗಳುವುದಿಲ್ಲ. ಅದು ಅದರ ನಿಯತ್ತು. ಈ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
Related Articles
ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ದೇವೇಂದ್ರ ವಾಲೀಕಾರ, ಇಲಾಖೆಯ ಸಹಾಯಕ
ನಿರ್ದೇಶಕ ಶಿವಾನಂದ ಮೇಟಿ, ಮುಖ್ಯ ಪಶು ವೈದ್ಯಾ ಧಿಕಾರಿ ರಮೇಶ ರಾಠೊಡ, ಡಾ| ಸತೀಶ ಮುಂಡಾಸ, ಡಾ| ಎಸ್.ಬಿ.
ಕುಂಬಾರ, ಗುರುಸಂಗಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.
Advertisement
ಬಿ.ಜಿ. ಹಿರೇಮಠ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು. ಮುಖ್ಯ ಪಶು ವೈದ್ಯಾ ಧಿಕಾರಿ ಡಾ|ಸುರೇಶ ಭಜಂತ್ರಿ ವಂದಿಸಿದರು.
ಓದಿ : ‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?