Advertisement

ಆಧಾರ್‌ ತಿದ್ದುಪಡಿಗೆ ಬೀಡಿ ಕಾರ್ಮಿಕರ ಪರದಾಟ

12:15 AM Aug 15, 2021 | Team Udayavani |

ಮಂಗಳೂರು: ಆಧಾರ್‌ ಕಾರ್ಡ್‌ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಲು ಅವಿದ್ಯಾವಂತ ಬೀಡಿ ಕಾರ್ಮಿಕರು ಪರದಾಡುತ್ತಿದ್ದು ಪಿಎಫ್ ಹಣ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

Advertisement

ಪಿಎಫ್ (ಕಾರ್ಮಿಕರ ಭವಿಷ್ಯನಿಧಿ) ಕಚೇರಿಯಲ್ಲಿರುವ ದಾಖಲೆಗಳು ಮತ್ತು ಬೀಡಿ ಕಾರ್ಮಿಕರ ಆಧಾರ್‌ ಕಾರ್ಡ್‌ ನಲ್ಲಿರುವ ಹುಟ್ಟಿದ ದಿನಾಂಕದಲ್ಲಿ ವ್ಯತ್ಯಾಸ ಇರುವುದರಿಂದ ಸಮಸ್ಯೆ ಉಂಟಾಗಿದೆ. ನೋಂದಣಿ ಮಾಡಿಕೊಳ್ಳುವಾಗ ಅನೇಕ ಮಂದಿ ಅಂದಾಜಿಗೆ ಜನ್ಮದಿನಾಂಕ ದಾಖಲಿಸಿದ್ದರು. ಬಳಿಕ ಆಧಾರ್‌ನಲ್ಲಿ ಇನ್ನೊಂದು ಜನ್ಮದಿನಾಂಕ ನಮೂದಿಸಿದ್ದರು. ಇದೀಗ ಪಿಎಫ್ ಖಾತೆಯ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ.

ತಿದ್ದುಪಡಿಗೆ ಅಲೆದಾಟ :

ಶಾಲೆಯ ದಾಖಲೆಗಳಿದ್ದರೆ ಅದರ ಆಧಾರದಲ್ಲಿ ಗೆಜೆಟೆಡ್‌ ಅಧಿಕಾರಿಗಳು ನೀಡುವ ದೃಢೀಕರಣ ಪತ್ರಗಳನ್ನು ಆಧಾರ್‌ ಕೇಂದ್ರಗಳಿಗೆ ನೀಡಿದರೆ ಆಧಾರ್‌ ತಿದ್ದುಪಡಿಯಾಗುತ್ತದೆ. ಆದರೆ ಬೀಡಿ ಕಾರ್ಮಿಕರಲ್ಲಿ ಅನೇಕ ಮಂದಿ ಅವಿದ್ಯಾವಂತರು. ಅಂಥವರು ಆಧಾರ್‌ ತಿದ್ದುಪಡಿಗಾಗಿ ಕಚೇರಿಯಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪಿಎಫ್ ಕಚೇರಿಯಲ್ಲಿರುವ ದಾಖಲೆಗಳಲ್ಲಿ ಇರುವಂತೆ ತಿದ್ದುಪಡಿ ಮಾಡಿದ ಆಧಾರ್‌ಗಳನ್ನು ನೀಡಲು ಆಗಸ್ಟ್‌ ಗಡುವು ನೀಡಲಾಗಿದೆ. ಇದು ಬೀಡಿ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆ.

ದಾಖಲೆ ನೀಡಿದರೆ ತಿದ್ದುಪಡಿ :

Advertisement

ಗೆಜೆಟೆಡ್‌ ಅಧಿಕಾರಿಗಳಿಂದ ದೃಢೀಕೃತ ದಾಖಲೆ ನೀಡಿದವರಿಗೆ ಆಧಾರ್‌ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಿಕೊಡಲಾಗುತ್ತಿದೆ. ಕೆಲವರು ಈ ಹಿಂದೆ ಬೇರೆ ಕಾರಣಕ್ಕಾಗಿ ಜನ್ಮದಿನಾಂಕ ತಿದ್ದುಪಡಿ ಮಾಡಿಸಿಕೊಂಡಿದ್ದು ಮತ್ತೆ ತಿದ್ದುಪಡಿಗೆ ಅವಕಾಶವಿಲ್ಲ. – ರಾಮಕೃಷ್ಣ , ನೋಡೆಲ್‌ ಅಧಿಕಾರಿ, ದಕ್ಷಿಯ ಕನ್ನಡ ಜಿಲ್ಲೆ 

ಗಡುವು ವಿಸ್ತರಿಸಿ  :

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಬೀಡಿಕಾರ್ಮಿಕರಿದ್ದು ಸಾವಿರಾರು ಮಂದಿಗೆ ಸಮಸ್ಯೆಯಾಗಿದೆ. ಕೊನೆಯ ದಿನಾಂಕವನ್ನು ಡಿಸೆಂಬರ್‌ ವರೆಗೆ ವಿಸ್ತರಿಸಿದರೆ ಹೆಚ್ಚಿನವರ ಸಮಸ್ಯೆ ಬಗೆಹರಿಯಬಹುದು. ಬೀಡಿ ಕಟ್ಟುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಧಾರವಾಗಿಟ್ಟು ಅಧಿಕಾರಿಗಳು ದೃಢೀಕರಣ ಪತ್ರ ನೀಡಿದರೆ ಸಮಸ್ಯೆ ಬಗೆಹರಿಯಬಹುದು. – ಬಾಲಕೃಷ್ಣ ಶೆಟ್ಟಿ ,  ಪ್ರಧಾನ ಕಾರ್ಯದರ್ಶಿ, ದ.ಕ. ಬೀಡಿ ವರ್ಕರ್ ಫೆಡರೇಶ‌ನ್‌

Advertisement

Udayavani is now on Telegram. Click here to join our channel and stay updated with the latest news.

Next