ಮಂಗಳೂರು: ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟ್ರರ್ ಅಸೋಸಿಯೇಶನ್ ಮತ್ತು ಪ್ರಭುದಾಸ್ ಕಿಶೋರ್ ದಾಸ್, ಟೊಬಕ್ಕೊ ಪ್ರೊಡಕ್ಟ್ ಪ್ರೈ.ಲಿ. (ಟೆಲಿಫೋನ್ ಬೀಡೀಸ್) ಪಿ.ಕೆ.ಟಿ.ಪಿ., ಜೆ.ಪಿ.ಟಿ.ಪಿ ನಡುವೆ ನಡೆದ ಒಡಂಬಡಿಕೆಯ ಮೂಲಕ ಈಗ ಚಾಲ್ತಿಯಲ್ಲಿರುವ ಕಮಿಷನ್ 26.75ರೂ.ಗೆ ಹೆಚ್ಚುವರಿಯಾಗಿ 2.25ರೂ. ಸೇರಿಸಿ ಒಟ್ಟು 29 ರೂ. ಮಾಡಲಾಗಿದೆ.
2022 ಎ.1 ರಿಂದ ಇಂದಿನ ದಿನಾಂಕದವರೆಗೆ ಇದು ಅನ್ವಯವಾಗುತ್ತದೆ. ಮತ್ತು ಮುಂದಿನ ಸಾಲಿನ 2023 -24 ಹಾಗೂ 2024-25ಕ್ಕೆ ಸರಿಹೊಂದುವಂತೆ 2 ವರ್ಷಕ್ಕೆ ತಲಾ 2 ರೂ.ಗಳಂತೆ ಹೆಚ್ಚುವರಿಯಾಗಿ ಕಮಿಷನ್ ನೀಡಲು ಒಪ್ಪಂದವಾಗಿರುತ್ತದೆ. ಇದು ಕರಾವಳಿ ಕಂಟ್ರಾಕ್ಟರ್ ಬೀಡಿ ಯೂನಿಯನ್ ಹಾಗೂ ಪಿ.ಕೆ.ಟಿ.ಪಿ., ಜೆ.ಪಿ.ಟಿ.ಪಿ (ಟೆಲಿಫೋನ್ ಬೀಡೀಸ್) ಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಕೃಷ್ಣ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.