Advertisement

ಗೃಹರಕ್ಷಕದಳದ “ಕಾಸ್‌’ಬಾತ್‌

11:47 AM Jan 25, 2020 | Naveen |

ಬೀದರ: ತುರ್ತು ಸಂದರ್ಭದಲ್ಲಿ ರಕ್ಷಣೆ ಮತ್ತು ಸಮಾಜ ಸೇವೆ ಮಾಡುತ್ತಿರುವ ಗೃಹ ರಕ್ಷಕರಿಗೆ “ಡ್ನೂಟಿ’ ಹಾಕಲು ಯೂನಿಟ್‌ ಹೆಡ್‌ಗಳು ಸತಾಯಿಸುತ್ತಾರೆಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

ಶಿಸ್ತುಬದ್ಧ, ಸಮವಸ್ತ್ರಧಾರಿ ಸ್ವಯಂ ಸೇವಕರ ಪಡೆಯಾಗಿರುವ ಗೃಹ ರಕ್ಷಕ ದಳ ಮೂರ್‍ನಾಲ್ಕು ವರ್ಷಗಳಿಂದ ಸಿಬ್ಬಂದಿಗಳ ಜೀವನಕ್ಕೆ ಆಸರೆಯಾಗಿ ಬದಲಾಗುತ್ತಿದೆ. ವರ್ಷದಲ್ಲಿ ಏಳೆಂಟು ತಿಂಗಳು ಕೆಲಸ, ಉತ್ತಮ ಗೌರವ ಧನವೂ ಸಿಗುತ್ತಿದೆ. ಹಾಗಾಗಿ ಮಹಿಳೆಯರು-ಪುರುಷರು ತಮ್ಮ ಬಿಡುವಿನ ದಿನಗಳಲ್ಲಿ ಗೃಹ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಯೂನಿಟ್‌ ಹೆಡ್‌ನ‌ವರು ಸೇವೆ ಮಾಡಲು ಅವಕಾಶ ನೀಡಲು ಸತಾಯಿಸುತ್ತಾರೆಂಬ ಆರೋಪಗಳು ಕೇಳಿ ಬರುತ್ತಿವೆ.

ಗಡಿ ಜಿಲ್ಲೆ ಬೀದರನಲ್ಲಿ ಸುಮಾರು 952 ಜನರು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 200 ಮಂದಿ ಮಹಿಳೆಯರು ಸಹ ಸೇರಿದ್ದಾರೆ.
ಬೀದರ ನಗರದಲ್ಲೇ ಸುಮಾರು 200 ಗೃಹ ರಕ್ಷಕರು ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 12,000 ರೂ. ಗೌರವ ಧನ ಪಡೆಯುತ್ತಿದ್ದಾರೆ. ಗೃಹ ರಕ್ಷಕರು ತಮ್ಮ ಕರ್ತವ್ಯನಿಷ್ಠೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌, ಭದ್ರತಾ ಸಿಬ್ಬಂದಿಗೆ ಸಾಥ್‌ ನೀಡುತ್ತಿದ್ದಾರೆ.

ಜಿಲ್ಲೆಯ ಐದು ತಾಲೂಕಿನಲ್ಲಿ ತಲಾ ಒಂದು ಯುನಿಟ್‌ ಮತ್ತು ವಿವಿಧ ವೃತ್ತಗಳಲ್ಲಿ 10 ಸಬ್‌
ಯೂನಿಟ್‌ಗಳನ್ನು ಸ್ಥಾಪಿಸಿ ಮುಖ್ಯಸ್ಥರನ್ನು ನೇಮಿಸಲಾಗಿದೆ. ಇಲ್ಲಿಯೇ ತಿಂಗಳಲ್ಲಿ 4 ಬಾರಿ ಪರೇಡ್‌ಗಳು ನಡೆಸಿ ಗೃಹ ರಕ್ಷಕರಿಗೆ ಹಾಜರಾತಿ ಮತ್ತು ಡ್ನೂಟಿ ಹಾಕುವುದು ನಿಯಮ. ಆದರೆ
ಡ್ನೂಟಿ ಹಾಕಿಸಿಕೊಳ್ಳಲು ಮತ್ತು ಇಂಥದ್ದೇ ಜಾಗದಲ್ಲಿ ಸೇವೆ ಸಲ್ಲಿಸಬೇಕಾದರೆ ಯೂನಿಟ್‌ ಹೆಡ್‌ಗಳು ಸೇವೆಗೆ ಅವಕಾಶ ಕಲ್ಪಿಸದೇ ಸತಾಯಿಸುತ್ತಾರೆಂಬ ದೂರುಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಇರುವ ಗೃಹ ರಕ್ಷಕರು ಮುಖ್ಯವಾಗಿ ಸುಗಮ ಸಂಚಾರ ವ್ಯವಸ್ಥೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವರು ಪೊಲೀಸ್‌ ಠಾಣೆ, ಬ್ರಿಮ್ಸ್‌, ರೈಲು ನಿಲ್ದಾಣ, ಕಾರಾಗೃಹದ ಸೇವೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇನ್ನುಳಿದಂತೆ ಜಾತ್ರಾ ಮಹೋತ್ಸವ, ಚುನಾವಣೆ ಕೆಲಸ, ಮುಖ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ದುಡಿಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ರಾಜ್ಯದ ವಿವಿಧ ಜಿಲ್ಲೆ ಮಾತ್ರವಲ್ಲ ನೆರೆಯ ರಾಜ್ಯಗಳಲ್ಲೂ ಚುನಾವಣೆ ಕರ್ತವ್ಯಕ್ಕೂ ಹಾಜರಾಗುತ್ತಾರೆ. ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಿಬ್ಬಂದಿಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ.

ಡ್ಯೂಟಿ ಹಾಕಿಸುವ ನೆಪದಲ್ಲಿ ಯೂನಿಟ್‌ಗಳಲ್ಲಿ ಗೃಹ ರಕ್ಷಕರಿಂದ ಹಣ ಪಡೆಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಹಿಂದೆ ಭಾಲ್ಕಿ ಮತ್ತು ಮಂಠಾಳ ಯೂನಿಟ್‌ನಲ್ಲಿ ಆರೋಪ ಕೇಳಿ ಬಂದಾಗ ಮುಖ್ಯಸ್ಥರನ್ನು ಅಮಾನತು ಮಾಡಲಾಗಿದೆ. ಪಾಳಿ ಆಧಾರದಲ್ಲಿ ಸಿಬ್ಬಂದಿಗಳನ್ನು ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಹಣ ಪಡೆಯುತ್ತಿರುವ ಬಗ್ಗೆ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
ಮನೋಜಕುಮಾರ, ಜಿಲ್ಲಾ
ಸಮಾದೇಷ್ಟ, ಬೀದರ ಗೃಹ ರಕ್ಷಕ ದಳ.

Advertisement

ಸಮಾಜ ಸೇವೆಯ ಹಂಬಲದೊಂದಿಗೆ ಬಿಡುವಿನ ದಿನಗಳಲ್ಲಿ ಗೃಹ ರಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವರ್ಷದಲ್ಲಿ 5-6 ತಿಂಗಳು ಮಾತ್ರ ಗೃಹ ರಕ್ಷಕನಾಗಿ ಸೇವೆಗೆ ಅವಕಾಶ ಸಿಗುತ್ತದೆ. ಡ್ನೂಟಿ ಹಾಕಿಸಿಕೊಳ್ಳಲು ಯೂನಿಟ್‌ ಹೆಡ್‌ಗಳು ಸತಾಯಿಸುತ್ತಾರೆ.
ಹೆಸರು ಹೇಳಲಿಚ್ಚಿಸದ ಗೃಹ ರಕ್ಷಕ ಸಿಬ್ಬಂದಿ.

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next