Advertisement

ಜವಾಬ್ದಾರಿ ಅರಿತು ಕ್ರಿಯಾಶೀಲರಾಗಿ: ಚಿಂತಕ ಲಕ್ಷ್ಮೀಶ ತೋಳ್ಪಾಡಿ

11:50 PM Aug 02, 2019 | mahesh |

ಬೆಳ್ತಂಗಡಿ: ಲೋಕದ ಆಗುಹೋಗು ಗಳಲ್ಲಿ ನಾನೂ ಒಬ್ಬ ಜವಾಬ್ದಾರಿ ಎಂದು ಅರಿತು ಕ್ರಿಯಾಶೀಲರಾಗಬೇಕು ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

Advertisement

ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿ, ಸಮಾಲೋಚನ ವೇದಿಕೆಯ ಸಂಯುಕ್ತ ಸಭೆಯಲ್ಲಿ ಅವರು ಮಾತನಾಡಿ, ನೀರು ಉಳಿಸಿ- ಪ್ರಕೃತಿ ಉಳಿಸಿ- ಧರ್ಮ ಉಳಿಸಿ ಅಭಿಯಾನವನ್ನು ತೀವ್ರಗೊಳಿಸಬೇಕು. ಸಾಮಾಜಿಕ ನ್ಯಾಯದ ಬದ್ಧತೆಯಿಂದ ನಿರಂತರವಾಗಿ ಕಾರ್ಯನಿರತವಾಗಿರುವುದ ರಿಂದಲೇ ನಾಗರಿಕ ಸೇವಾ ಟ್ರಸ್ಟ್‌ ಜತೆಗೆ ನಾನು 35 ವರ್ಷದ ಒಡನಾಟದಲ್ಲಿದ್ದೇನೆ ಎಂದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು, ಟ್ರಸ್ಟ್‌ನ ಎಲ್ಲ ಹೋರಾಟಗಳಿಗೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು.

ಪ್ರಜಾಧಿಕಾರ ವೇದಿಕೆಯ ರಾಜ್ಯ ಸಂಚಾಲಕ, ಸಮೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವರಾಜೇಗೌಡ ಅವರು, ಮೈಕ್ರೋಫೈನಾನ್ಸ್‌ ಹೆಸರಿನಲ್ಲಿ ಬಡವರ ಸುಲಿಗೆ ಮಾಡುವ ಶಕ್ತಿಯ ವಿರುದ್ಧ ರಾಜ್ಯಾದ್ಯಂತ ಸಮಿತಿಗಳನ್ನು ರಚಿಸಿ ಸಂಘಟಿತವಾಗಿ ಜನಜಾಗೃತಿ ಮಾಡಿ, ರಾಜಕೀಯ ಒತ್ತಡ ಹೇರಬೇಕು, ಇದಕ್ಕಾಗಿ ರಾಜ್ಯಮಟ್ಟದ ಕಾರ್ಯಾಗಾರ ನಡೆಸಬೇಕು ಎಂದರು.

ಭಾರತೀಯ ಮಜ್ಜೂರ್‌ ಸಂಘದ ರಾಜ್ಯಾ ಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಮಾತನಾಡಿ, ಎನ್‌ಎಸ್‌ಟಿ ನಡೆಸುವ ಶೋಷಣೆ ವಿರುದ್ಧ ಸತತವಾಗಿ ಮಾಡಿದ ಹೋರಾಟ ತಡವಾದರೂ ಅಂತಿಮ ಹಂತಕ್ಕೆ ಬರುತ್ತಿದೆ. ಸತ್ಯದ ಅರಿವಾಗಿ ಜನರು ಪರಿವರ್ತನೆಯಾಗುತ್ತಿದ್ದಾರೆ ಎಂದರು.

Advertisement

ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ಅಧ್ಯಕ್ಷ ಡಾ| ನರೇಂದ್ರ ನಾಯಕ್‌, ಮಹಿಳಾ ಕಟ್ಟಡ ಕಾರ್ಮಿಕರ ರಾಜ್ಯ ಯೂನಿಯನ್‌ ಮುಖಂಡ ಎಸ್‌. ಕುಮಾರ್‌ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎನ್‌ಎಸ್‌ಟಿ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ಎನ್‌ಎಸ್‌ಟಿಯ ದೀರ್ಘಾವಧಿ ಕಾರ್ಯಯೋಜನೆಯನ್ನು ಅಗತ್ಯಾನುಸಾರ ರೂಪಿಸಲಾಗುತ್ತಿದೆ ಎಂದರು.ಮಾಜಿ ಜಿ.ಪಂ. ಸದಸ್ಯೆ ಸಿ.ಕೆ. ಚಂದ್ರಕಲಾ, ಆದಿವಾಸಿ ಹೋರಾಟಗಾರ ಎಲ್ಯಣ್ಣ ಮಲೆ ಕುಡಿಯ, ಹಿಂದೂ ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಟ್ರಸ್ಟ್‌ ಉಪಾಧ್ಯಕ್ಷ ಕೆ. ರಮಾನಂದ ಸಾಲ್ಯಾನ್‌ ಮತ್ತು ವಿದ್ಯಾ ನಾಯಕ್‌ ಉಪಸ್ಥಿತರಿದ್ದರು.

ರಬ್ಬರ್‌ ಸೊಸೈಟಿ ಅಧ್ಯಕ್ಷ ಶ್ರೀಧರ ಭಿಡೆ, ಮಾಜಿ ಜಿ.ಪಂ. ಸದಸ್ಯ ಬಾಬು ಎರ್ನೋಡಿ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ ಕೋಟ್ಯಾನ್‌, ಸೌಜನ್ಯಾಳ ತಾಯಿ ಕುಸುಮಾವತಿ, ಟ್ರಸ್ಟಿಗಳಾದ ಸೋಮ ಕೆ., ಸದಾಶಿವ ಹೆಗ್ಡೆ, ಬಾಲಕೃಷ್ಣ ನಾಯಕ್‌, ಮಲ್ಲಿಕಾ ಆರ್‌., ವನಿತಾ ಜೈನ್‌, ಸಾಮಾಜಿಕ ಕಾರ್ಯಕರ್ತ ರಾಜೀವ ಸಾಲ್ಯಾನ್‌ ಮತ್ತಿತರರಿದ್ದರು. ಟ್ರಸ್ಟ್‌ನ ಮುನ್ನಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಸ್ಟ್‌ನ ಕಾರ್ಯದರ್ಶಿ ಜಯಪ್ರಕಾಶ್‌ ಭಟ್ ಸಿ.ಎಚ್. ಸ್ವಾಗತಿಸಿ, ಜತೆ ಕಾರ್ಯದರ್ಶಿ ನಾರಾಯಣ ಕಿಲಂಗೋಡಿ ವಂದಿಸಿದರು. ಸಲಹಾ ಸಮಿತಿಯ ಮತ್ತು ಸಮಾಲೋಚನ ವೇದಿಕೆಯ ಸದಸ್ಯರು ಹಾಗೂ ಟ್ರಸ್ಟಿಗಳು 48 ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next