Advertisement

ನವ ಸಮಾಜ ನಿರ್ಮಾಣದ ಕಾರಣಕರ್ತರಾಗಿ: ಖಾದರ್‌

09:41 AM May 17, 2022 | Team Udayavani |

ಉಳ್ಳಾಲ: ಸರಕಾರಿ ಶಾಲೆಗಳಲ್ಲಿ ಓದುವ ಬಡ ವಿದ್ಯಾರ್ಥಿಗಳು ಜೀವಮಾನವಿಡೀ ಬಡವರಾಗಿಯೇ ಉಳಿಯಬೇಕೆಂದಿಲ್ಲ. ಆದರೆ ಶಿಕ್ಷಣದ ಸಂದರ್ಭದಲ್ಲಿ ನಿಮ್ಮ ಆಯ್ಕೆ ಅತ್ಯಂತ ಪ್ರಮುಖವಾಗಿದ್ದು, ಉನ್ನತ ಶಿಕ್ಷಣ ಪಡೆದು ಈ ದೇಶದ ಆಸ್ತಿ ಯಾಗಿ ನವ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು ಎಂದು ವಿಧಾನಸಭೆ ವಿಪಕ್ಷದ ಉಪನಾಯಕ, ಶಾಸಕ ಯು.ಟಿ. ಖಾದರ್‌ ಹೇಳಿದರು.

Advertisement

ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು, ಬಬ್ಬುಕಟ್ಟೆ ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಎಂಟನೇ ತರಗತಿಗೆ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಶಾಲೆಗೆ ಸ್ವಾಗತಿಸಿ, ಮಾತನಾಡಿದರು. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಅತ್ಯಂತ ಮಹತ್ವದ ಕಾಲಘಟ್ಟವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಯ್ಕೆ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಪೂರಕ ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್‌, ಉಪಾಧ್ಯಕ್ಷ ಅಯೂಬ್‌ ಮಂಚಿಲ, ಮಾಜಿ ಸದಸ್ಯರಾದ ದಿನೇಶ್‌ ರೈ ಉಳ್ಳಾಲಗುತ್ತು, ಸುಹಾಸಿನಿ ಬಬ್ಬುಕಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಎಸ್‌ಡಿಎಂಸಿ ಉಪಾಧ್ಯಕ್ಷೆ ಸರೋಜಿನಿ, ಸಿಆರ್‌ಪಿ ಗೀತಾ ಜ್ಯುಡಿತ್‌ ಸಲ್ದಾನ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಉಪಸ್ಥಿತರಿದ್ದರು.

ಶಾಲಾಮುಖ್ಯ ಶಿಕ್ಷಕ ಮಹೇಶ್‌ ಬಾಬು ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿ ದುರ್ಗಾಲತಾ ಕಾರ್ಯಕ್ರಮ ನಿರ್ವಹಿಸಿದರು. ಶಾಂತಾ ವಂದಿಸಿದರು.

ಶಾಲೆಯ ಕಟ್ಟಡ ದುರಸ್ತಿಗೆ 10 ಲಕ್ಷ ರೂ.

Advertisement

ಪೆರ್ಮನ್ನೂರು ಶಾಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೆಲವು ಆಡಳಿತಾತ್ಮಕ ಸಮಸ್ಯೆಗಳಿದ್ದು, ಶಾಲೆಯ ಭೂಮಿಯ ವಿಚಾರದಲ್ಲಿ ಕುಳಿತು ಬಗೆಹರಿಸಿ ಉತ್ತಮ ಮೂಲ ಸೌಕರ್ಯ ನಿರ್ಮಾಣ ಮಾಡುವ ಕಾರ್ಯ ನನ್ನದು. ಇಲ್ಲಿನ ಸಮಸ್ಯೆಗೆ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸುತ್ತೇನೆ. ಶಿಕ್ಷಕರು ನಿಶ್ಚಿಂತತೆಯಲ್ಲಿ ವಿದ್ಯಾರ್ಥಿ ಗಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯ ನಡೆಸಿ. ತಾತ್ಕಾಲಿಕ ಕ್ರಮವಾಗಿ ಶಾಲೆಯ ಕಟ್ಟಡ ದುರಸ್ತಿಗೆ 10 ಲಕ್ಷ ರೂ. ಅನುದಾನ ನೀಡಲು ಬದ್ಧ. -ಯು.ಟಿ. ಖಾದರ್‌, ಶಾಸಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next