Advertisement
ನಾಯಿಗಳನ್ನು ಸಾಕುವುದರ ಕಷ್ಟಗಳೇನೇ ಇರಲಿ, ಅವುಗಳು ಮರಳಿ ನೀಡುವ ಮಮತೆ, ವಾತ್ಸಲ್ಯವಂತೂ ಹತ್ತು ಪಟ್ಟು ಹೆಚ್ಚಿನದು ಹಾಗೂ ಅವುಗಳು ನಿಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತವೆ ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ.
Related Articles
Advertisement
ನಾಯಿಗಳಿಗೆ ಒಮ್ಮೆ ಪ್ರೀತಿ ತೋರಿಸಿದರೆ ಸಾಕು, ಅವುಗಳು ಮತ್ತೆ ತಾವಾಗಿಯೇ ಆಪ್ತವಾಗುತ್ತವೆ. ಅವುಗಳಲ್ಲಿ ತನಗೆ ಒಳಿತನ್ನು ಬಯಸುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣಗಳಿವೆ. ಹಾಗಾಗಿ ಇತರೆಲ್ಲಾ ಪ್ರಾಣಿಗಳಿಗಿಂತ ನಾಯಿಗಳು ಮನುಷ್ಯನಿಗೆ ಬೇಗ ಹತ್ತರಿವಾಗುತ್ತವೆ.
ಯಾವುದೇ ನಿರೀಕ್ಷೆ ಇಲ್ಲದೆ ತನ್ನವರ ಗಾಗಿ ಎಲ್ಲವನ್ನೂ ಮಾಡುವ ಈ ಶ್ವಾನಕ್ಕೆ ಒಮ್ಮೊಮ್ಮೆ ಎಷ್ಟು ಪ್ರೀತಿ ತೋರಿಸಿದರೂ ಕಮ್ಮಿನೆ ಅಂತ ಅನ್ನಿಸುತ್ತದೆ.
ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು, ಬೆಟ್ಟದಷ್ಟು ಪ್ರೀತಿ ನೀಡುತ್ತದೆ. ಯಜಮಾನಿಕೆ ಮಾಡಲು ಸಾಧ್ಯ ಎಂದು ತೋರಿದಾಗ ಅವನೂ ಇವನೂ ಇಬ್ಬರೂ ಸಮಾನರು ಎಂದು ಬಿಡುತ್ತೇವೆ. ಒಬ್ಬರು ಮತ್ತೊಬ್ಬರ ಮೇಲೆ ಯಜಮಾನಿಕೆ ಮಾಡಬಾರದೆಂದೇ ಸಮಾನತೆಯನ್ನು ಸಾರುವುದು. ಯಾವತ್ತೂ ನಾಯಿ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ತೊಂದರೆಯಾದರೇ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡುವುಕ್ಕೂ ಹಿಂದೆ ಮುಂದೆ ನೋಡಲ್ಲ. ಅದು ನಾಯಿಗಳಿಗೆ ಇರುವ ಕೃತಜ್ಙತ ಗುಣಗಳು.
ಸಂಬಂಧಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಆ ಸಂಬಮಧಗಳಿಗೆ ವಿದೇಯರಾಗಿರುವ ಗುಣ ಮನುಷ್ಯರಿಗಿಂತ ನಾಯಿಗಳಲ್ಲೇ ಹೆಚ್ಚಿದೆ ಎಂದರೇ ತಪ್ಪಿಲ್ಲ.