Advertisement

ಮನೆಗಿರಲಿ ಚಂದದೊಂದು ಹಿತ್ತಲು

01:30 AM Aug 03, 2019 | mahesh |

ಮನೆ ಎಂದಾಗ ಹಿತ್ತಲಿರುವುದು ಸಾಮಾನ್ಯ. ಆ ಹಿತ್ತಲು ಕೇವಲ ಜಾಗವಷ್ಟೇ ಅಲ್ಲ, ಅಲ್ಲಿ ಸಾವಿರಾರು ಯೋಚನೆಗಳ ಹುಟ್ಟಿಗೆ ಕಾರಣವಾ ಗುವ ಸ್ಥಳ. ಮನೆಯಲ್ಲೇ ಕೂತು ಬೇಜಾರಾದಾಗ ಸಂಜೆ ಹೊತ್ತು ಹಿತ್ತಲಿ ನಲ್ಲಿ ಕೂತಾಗ ಬೀಸುವ ತಂಗಾಳಿ ಮನಸ್ಸಿಗೆ ಮುದ ನೀಡುತ್ತದೆ.

Advertisement

ಮನೆಯ ಹಿತ್ತಲು, ಪ್ರತಿ ಮನೆಯ ಒಳಾಂಗಣದ ಗುಣವನ್ನು ಹೆಚ್ಚಿಸುತ್ತದೆ. ಒಳಗೇ ಇದ್ದು ಬೇಜಾರಾದಾಗ, ಓಡಾಡಲೂ ಕೂಡ ಹಿಂಬದಿಯ ಖಾಸಗೀ ಸ್ಥಳ ಉಪಯುಕ್ತ. ಎರಡೂ ಬದಿ ಹೂಗಿಡಗಳನ್ನು ನೆಟ್ಟು, ಮಧ್ಯೆ ತರಿ ಟೈಲ್ಸ್ ಹಾಕಿದ ಒಂದು ಪಾದಮಾರ್ಗ ಮಾಡಿಕೊಂಡರೆ, ಗಿಡಗಳ ಆರೈಕೆಗೆ ಉಪಯುಕ್ತ ಆಗುವುದರ ಜೊತೆಗೆ ವಾಯುವಿಹಾರಕ್ಕೂ ಅನುಕೂಲಕರ. ಇನ್ನೂ ಯೋಗ ಇಲ್ಲವೇ, ಇತರೆ ಸರಳ ವ್ಯಾಯಾಮ ಮಾಡಲೂ ಕೂಡ ನಾಲ್ಕಾರು ಅಡಿಗಳ ತೆರೆದ ಸ್ಥಳ ಇದ್ದರೆ, ತಾಜಾ ಹವೆಯಲ್ಲಿ ಕಸರತ್ತು ಮಾಡುವುದು ಹೆಚ್ಚು ಆರೋಗ್ಯಕರವೂ ಆಗಿರುತ್ತದೆ. ಮನೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ, ಸುತ್ತಲೂ, ಅದರಲ್ಲೂ ಹಿಂದೆ ಒಂದಷ್ಟು ಖಾಲಿ ಜಾಗ ಬಿಡದಿದ್ದರೆ, ಒಳಾಂಗಣಕ್ಕೆ ಸಾಕಷ್ಟು ಗಾಳಿ ಬೆಳಕು ಬಾರದೆ, ಕಿಷ್ಕಿಂಧೆಯಂತೆ ಆಗಿಬಿಡುತ್ತದೆ. ಆದುದರಿಂದ, ಮನೆ ದೊಡ್ಡದಾದಷ್ಟೂ ಅದಕ್ಕೊಂದು ಸೂಕ್ತ ಗಾತ್ರದ ಹಿತ್ತಲು ಇರುವುದು ಸೂಕ್ತ

ನಮ್ಮ ಸಂಸ್ಕೃತಿಯಲ್ಲಿ ಹಿತ್ತಲಿಗೆ ವಿಶೇಷ ಸ್ಥಾನಮಾನ ಇದೆ. ಹಿತ್ತಲಿನಲ್ಲಿ ಒಂದೆರಡಲ್ಲ, ಹಲಬಗೆಯ ಬಳ್ಳಿಗಳು ಹಬ್ಬಿರುತ್ತಿದ್ದವು. ಅವುಗಳಲ್ಲಿ ಹೆಚ್ಚಿನವು ಮದ್ದಾಗಿ ಬಳಕೆಯಾಗುತ್ತಿದ್ದವು. ಸಣ್ಣಪುಟ್ಟ ನೆಗಡಿ, ಕೆಮ್ಮು, ಹೊಟ್ಟೆನೋವಿಗೂ ದಿಢೀರ್‌ ಶಮನ ಸಿಗಲಿ ಎಂದು ಮಾತ್ರೆ ನುಂಗುವ ಈ ಕಾಲಕ್ಕೂ ಹಿಂದೆ, ಕಡ್ಡಾಯವಾಗಿ ಹಿತ್ತಲಿನಲ್ಲಿ ನಿತ್ಯ ಆರೋಗ್ಯಕ್ಕೆ ಉಪಯುಕ್ತವಾದ ನಾಲ್ಕಾರು ಹಸಿರು ಔಷಧದ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಹೀಗೆ, ನಾನಾ ರೀತಿಯಲ್ಲಿ ಉಪಯುಕ್ತವಾದ ಸ್ಥಳ ಈ ಹಿತ್ತಲು. ಮೂಲ ರೂಪದಲ್ಲಿ ಬಳಸಲು ಸ್ವಲ್ಪ ಕಷ್ಟ. ಆದರೂ ನಮ್ಮ ಅನುಕೂಲಕ್ಕೆ, ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಳ್ಳಬಹುದು!

ದೊಡ್ಡ ನಿವೇಶನಗಳಲ್ಲಿ ರಸ್ತೆ ಬದಿಯ ಮಾಲಿನ್ಯ ಹೆಚ್ಚಿದ್ದರೆ, ಮುಂದೆ ಹೆಚ್ಚು ತೆರೆದ ಸ್ಥಳ ಬಿಡದೆ, ಹಿಂಬದಿಗೆ ಬಿಟ್ಟರೆ ಹೆಚ್ಚು ಅನುಕೂಲಕರ. ಸೈಟಿನ ಉದ್ದಕ್ಕೂ ನಾಲ್ಕಾರು ಅಡಿ ಅಗಲ ಇರುವ ಸ್ಥಳದಲ್ಲೂ ಸಣ್ಣ ಪುಟ್ಟ ಮರಗಿಡಗಳನ್ನು ಬೆಳೆಸಬಹುದು, ಸಂಜೆ ಅಥವಾ ರಾತ್ರಿ ಕೂತು ಓದು ಮತ್ತಿತರ ಕೆಲಸ ಮಾಡಲು ಅನುಕೂಲಕರ. ಸಣ್ಣದೊಂದು ಹೂ ಚಪ್ಪರ ಹಾಕಿ ಸುಂದರ ಹೂಗಳ ಬಳ್ಳಿಗಳನ್ನು ಹಬ್ಬಿಸಬಹುದು. ಮಿಕ್ಕ ಸ್ಥಳವನ್ನು ಒಂದಷ್ಟು ವಿಭಜಕಗಳಿಂದ ಪ್ರತ್ಯೇಕಿಸಿ, ಸಾಕಷ್ಟು ಖಾಸಗಿತನವನ್ನು ಉಳಿಸಿಕೊಳ್ಳಬಹುದು.

ಹೆಚ್ಚು ಸ್ಥಳ ಇದೆಯಾ?
ಮನೆಯ ಹಿತ್ತಲು, ಪ್ರತಿ ಮನೆಯ ಒಳಾಂಗಣದ ಸೊಗಸನ್ನು ಹೆಚ್ಚಿಸುತ್ತದೆ. ಒಳಗೇ ಇದ್ದು ಬೇಜಾರಾದಾಗ, ಓಡಾಡಲೂ ಕೂಡ ಹಿಂಬದಿಯ ಖಾಸಗೀ ಸ್ಥಳ ಉಪಯುಕ್ತ. ಎರಡೂ ಬದಿ ಹೂಗಿಡಗಳನ್ನು ನೆಟ್ಟು, ಮಧ್ಯೆ ತರಿ ಟೈಲ್ಸ್ ಹಾಕಿದ ಒಂದು ಪಾದಮಾರ್ಗ ಮಾಡಿಕೊಂಡರೆ, ಗಿಡಗಳ ಆರೈಕೆಗೆ ಉಪಯುಕ್ತ ಆಗುವುದರ ಜೊತೆಗೆ, ವಾಯುವಿಹಾರಕ್ಕೂ ಅನುಕೂಲಕರ.

Advertisement

ಮನೆಗಳಿಗೆ ಹಿತ್ತಲು ಇರುವುದು ಸಾಮಾನ್ಯ ಆಗಿದ್ದಾಗ ಅದಕ್ಕೊಂದು ಬಾಗಿಲು ಇರುವುದೂ ಸಾಮಾನ್ಯ ಆಗಿರುತ್ತಿತ್ತು, ಮನೆ ಎಂದಮೇಲೆ ಒಂದಷ್ಟು ಹಿತ್ತಲ ಕೆಲಸಗಳು ಇದ್ದೇ ಇರುತ್ತವೆ. ಆದುದರಿಂದ ನಮ್ಮ ಮನೆಗೊಂದು ದೊಡ್ಡ ಹಿತ್ತಲು ಇರದಿದ್ದರೂ ಅದಕ್ಕೊಂದು ಬಾಗಿಲಿದ್ದರೆ ಸಾಕಷ್ಟು ಉಪಯುಕ್ತ ಆಗುತ್ತದೆ. ನಗರ ಪ್ರದೇಶಗಳಲ್ಲಿ ರಸ್ತೆಬದಿಯ ಮನೆಗಳ ಮುಂದೆ ಸಾಕಷ್ಟು ಶಬ್ದ ಹಾಗೂ ಇತರೆ ಮಾಲಿನ್ಯ ಇದ್ದರೆ, ಮನೆಯ ಹಿಂಭಾಗ ಹೆಚ್ಚು ಶಾಂತಿಯುತವಾಗಿ ಇರುತ್ತದೆ. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಮುಖ್ಯ ದ್ವಾರ ಲಿಫ್ಟ್ ಇತ್ಯಾದಿ ಸಾರ್ವಜನಿಕ ಎನಿಸುವ ಸ್ಥಳದಿಂದ ಪ್ರವೇಶ ಇರುವುದರಿಂದ, ಅದರ ಎದುರು ಬದಿ, ಹೆಚ್ಚು ಖಾಸಗಿಯಾಗಿದ್ದು, ಇಲ್ಲೊಂದು ಹಿತ್ತಲು, ಬಾಗಿಲು, ಬಾಲ್ಕನಿ ಇಲ್ಲವೇ ಸಿಟ್ಔಟ್ ಮಾದರಿಯಲ್ಲಿ ನೀಡಿದರೆ, ಸಾಂಪ್ರದಾಯಿಕ ಮಾದರಿಯ ಮನೆಯ ಹಿತ್ತಲಿನಂತೆಯೇ ಕಾರ್ಯ ನಿರ್ವಹಿಸಬಲ್ಲದು. ನಾನಾ ಕಾರಣಗಳಿಂದಾಗಿ, ಮನೆಗಳಿಗೆ ಹೆಚ್ಚುವರಿಯಾಗಿ ಮುಖ್ಯ ಬಾಗಿಲಿನ ಜೊತೆಗೆ ಮತ್ತೂಂದೂ ಇರುವುದು ಸೂಕ್ತ.

ರಕ್ಷಣೆ ಹೇಗೆ?

ರಸ್ತೆ ಬದಿ ಬಾಗಿಲಿಗೆ ಯಾರಾದರೂ ಬಂದರೆ ತಕ್ಷಣ ಹೊರಗಿನವರಿಗೂ, ಎದುರುಬದಿರು ಮನೆಯವರಿಗೂ ಕಂಡು ಬರುತ್ತದೆ. ಆದರೆ ಯಾರೂ ಹೆಚ್ಚು ಬಳಸದ ಹಿತ್ತಲು, ಎಲ್ಲರ ಕಣ್ಣಿಗೆ ಸುಲಭದಲ್ಲಿ ಬೀಳುವುದಿಲ್ಲ. ಇಡೀ ಹಿತ್ತಲನ್ನು ಗ್ರಿಲ್- ಜಾಲರಿ ಮಾದರಿಯಲ್ಲಿ ಕಬ್ಬಿಣದ ಸರಳುಗಳಿಂದ ಮುಚ್ಚುವ ಅಗತ್ಯ ಇರುವುದಿಲ್ಲ. ನಾವು ಹೆಚ್ಚು ಬಳಸುವ ಅದರಲ್ಲೂ, ರಾತ್ರಿಯ ಹೊತ್ತು ಬಳಸುವ ಒಂದಷ್ಟು ಸ್ಥಳವನ್ನು ಕವರ್‌ ಮಾಡಿಕೊಂಡರೆ ಸಾಕು. ಇನ್ನು ಮಳೆಗಾಲದಲ್ಲೂ ಬಳಸಬೇಕು ಎಂದರೆ, ಪಾರದರ್ಶಕ ಇಲ್ಲವೇ ಅರೆಪಾರದರ್ಶಕ ಹಾಳೆಗಳನ್ನು ಮೇಲೆ ಹಾಕಿ, ರಕ್ಷಣೆ ಪಡೆಯಬಹುದು.

ಸಣ್ಣ ನಿವೇಶನದಲ್ಲಿ ಹಿತ್ತಲ ಬಾಗಿಲು

ಬಾಗಿಲು ಎಂದರೆ ಅದಕ್ಕೊಂದಷ್ಟು ಸ್ಥಳ ಅನಿವಾರ್ಯವಾಗಿ ಬೇಕಾಗುತ್ತದೆ. ಏನಿಲ್ಲವೆಂದರೂ ಅದನ್ನು ತೆಗೆದು ಮುಚ್ಚಲಾದರೂ ಒಂದಷ್ಟು ಸ್ಥಳಾವಕಾಶ ಬೇಕಾಗುತ್ತದೆ. ಇನ್ನೂ ಅದು ಎಲ್ಲಿ ತೆರೆದುಕೊಳ್ಳುತ್ತದೆ? ಎಂಬುದು ಮುಂದಿನ ಪ್ರಶ್ನೆ ಆಗುತ್ತದೆ. ನಿವೇಶನ ಎಷ್ಟೇ ಸಣ್ಣದಾದರೂ ಅದಕ್ಕೂ ಗಾಳಿ ಬೆಳಕು ಧಾರಾಳವಾಗಿ ಬರುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಅಕ್ಕ ಪಕ್ಕದವರು ಒತ್ತರಿಸಿಕೊಂಡು ನಿವೇಶನ ತಗಲುವಂತೆ ಕಟ್ಟಿಕೊಂಡಿರುವುದರಿಂದ, ನಾವೇಕೆ ತೆರೆದಸ್ಥಳ ಬಿಡಬೇಕು? ಎಂದು ಓಪನ್‌ ಸ್ಪೇಸ್‌ ಬಿಡದೆ ಕಟ್ಟಿಕೊಂಡರೆ, ಇಡೀ ಮನೆಗೆ, ನಿವೇಶನದ ಮುಂಭಾಗದಿಂದ ಮಾತ್ರ ಗಾಳಿ ಬೆಳಕಿಗೆ ದಾರಿ ಆಗಬಹುದು, ಆದರೆ ಅದು ಇಡೀ ಮನೆಗೆ ಸಾಕಾಗುವುದಿಲ್ಲ. ಹಾಗಾಗಿ, ಅನಿವಾರ್ಯವಾಗಿ ಒಂದಷ್ಟು ಸ್ಥಳವನ್ನು ಗಾಳಿ ಬೆಳಕಿಗೆ, ಲೈಟ್ ವೆಲ್’ ಬೆಳಕು- ಬಾವಿ ಮಾದರಿಯಲ್ಲಿ ಮೇಲಿನಿಂದ ಕೆಳಗಿನವರೆಗೂ ಮೂರು ನಾಲ್ಕು ಅಡಿ ಅಗಲವಾದರೂ ಇರುವಂತೆ ಖಾಲಿ ಜಾಗವನ್ನು ಬಿಡಬೇಕಾಗುತ್ತದೆ. ಈ ಸ್ಥಳ ಗಾಳಿ ಬೆಳಕಿನ ಜತೆಗೆ ನೀರಿನ ಕೊಳವೆಗಳ ಅಳವಡಿಕೆಗೂ ಅನುವು ಮಾಡಿಕೊಡುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next