Advertisement

“ರೆಪ್ಪೆ’ಇದ್ದರೆ ಸಾಕೇ!

06:00 AM Jun 20, 2018 | |

ಕಣ್ಣುಗಳೆರಡು ಮಾತನಾಡಿದಾಗ ಭಾವನೆಗಳು ಸ್ಪುಟಿಸುವುದಂತೆ. ಮುಖದ ಅಂದಕ್ಕೆ ಕಣ್ಣುಗಳೇ ರೂವಾರಿ. ಅಂಥ ಅಂದದ ಕಣ್ಣುಗಳನ್ನು ಸಿಂಗರಿಸಲು ಈಗ ಬರೀ ಕಾಡಿಗೆಯಷ್ಟೇ ಅಲ್ಲ ಕೃತಕ ರೆಪ್ಪೆಗೂದಲೂ ಮಾರುಕಟ್ಟೆಗೆ ಬಂದಿವೆ. ವೈವಿಧ್ಯಮಯ ಕಣ್ರೆಪ್ಪೆಗಳು ಹೀಗಿವೆ ನೋಡಿ… 

Advertisement

1. ಸಹಜ ಕಣ್ರೆಪ್ಪೆ 
ಇದು ಹೆಂಗಳೆಯರಿಗೆ ಅಚ್ಚುಮೆಚ್ಚು. ಕಾರಣ, ನೈಸರ್ಗಿಕ ರೆಪ್ಪೆಯಂತೆ ಕಂಡು ಜನರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಇದಕ್ಕಿದೆ. ಇವು ಅತ್ಯಂತ ನಾಜೂಕಾಗಿದ್ದು, ಧರಿಸುವಾಗ ಎಚ್ಚರವಹಿಸಬೇಕು. ಸಾಂಪ್ರದಾಯಕ ಸಮಾರಂಭಗಳಿಗೆ ಧರಿಸಬಹುದು.

2. ಒತ್ತೂತ್ತಾದ ಕಣ್ರೆಪ್ಪೆ 
ಇದು ಕೃತಕ ಎಂದು ನೋಡಿದ ಕೂಡಲೇ ಗೊತ್ತಾಗುತ್ತದೆ. ಕಣ್ಣಿನ ನೋಟವನ್ನು ಮತ್ತಷ್ಟು ಹರಿತಗೊಳಿಸುವ ಈ ರೆಪ್ಪೆಗಳು ಮುಖಕ್ಕೆ ಮತ್ತಷ್ಟು ಗ್ಲಾಮರಸ್‌ ಲುಕ್‌ ಕೊಡುತ್ತವೆ. ನಾಟಕಗಳಲ್ಲಿ ಅಭಿನಯಿಸುವಾಗ, ಪಾರ್ಟಿ, ಫೋಟೋಶೂಟ್‌ಗಳಿಗೆ ಧರಿಸಬಹುದು. 

3. ಉದ್ದ ಗಿಡ್ಡ ಕಣ್ರೆಪ್ಪೆ 
ಈ ರೀತಿಯ ಕಣ್ರೆಪ್ಪೆಯಲ್ಲಿ ಉದ್ದ ಗಿಡ್ಡನೆಯ ಕೂದಲುಗಳು ಸುಂದರವಾಗಿ ಮೇಳೈಸಿರುತ್ತವೆ. ಜಿಗ್‌ಜ್ಯಾಗ್‌ ವಿನ್ಯಾಸದಲ್ಲೂ ಲಭ್ಯ. 

4. ಏಕರೂಪ ಕಣ್ರೆಪ್ಪೆ 
ಇವು ಒಂದೇ ಪಟ್ಟಿಯಲ್ಲಿ ಬರದೆ, ಪ್ರತ್ಯೇಕ ಎಳೆಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಂಟಿಸಲು ಹೆಚ್ಚು ಸಮಯ ಬೇಕಾದರೂ, ನೈಸರ್ಗಿಕ ಕಣ್ರೆಪ್ಪೆಯಂತೆ ಕಾಣುತ್ತದೆ. 

Advertisement

5. ಬಹುವರ್ಣದ ಕಣ್ರೆಪ್ಪೆ
ರೆಪ್ಪೆಗಳು ಕಲರ್‌ ಕಲರ್‌ ಆಗಿ ಕಾಣಲು ಯಾವ ಬಣ್ಣಗಳ ಅವಶ್ಯಕತೆ ಇನ್ನಿಲ್ಲ. ಯಾಕೆಂದರೆ, ಬಣ್ಣ ಬಣ್ಣದ ರೆಪ್ಪೆಗಳೇ ಮಾರುಕಟ್ಟೆಗೆ ಬಂದಿವೆ.

ಯಾವ ಕೃತಕ ಕಣ್ರೆಪ್ಪೆ ಚೆಂದ?
ಕೃತಕ ಕಣ್ರೆಪ್ಪೆ ತಯಾರಿಸುವಲ್ಲಿ ಅರ್ಡೆಲ್‌ ಹಾಗೂ ಬುಲ್ಸ್‌ ಐ ಕಂಪನಿಗಳು ಮುಂಚೂಣಿಯಲ್ಲಿವೆ. ಈ ಕಂಪನಿಗಳು ತಯಾರಿಸುವ ಕಣ್ರೆಪ್ಪೆ ಉತ್ತಮ ಗುಣಮಟ್ಟದ ಕೂದಲೆಳೆಗಳಿಂದ ಮಾಡಲ್ಪಟ್ಟಿದ್ದು, ಹೆಚ್ಚು ಅಂಟನ್ನೂ ನಿರೀಕ್ಷಿಸದೆ ಧರಿಸಲು ಸುಲಭವಾಗಿವೆ. 

ದೀಪ್ತಿ ಚಾಕೋಟೆ, ಹನುಮಗಿರಿ

Advertisement

Udayavani is now on Telegram. Click here to join our channel and stay updated with the latest news.

Next