Advertisement

ಸೌಂದರ್ಯ ಸಮರ

06:00 AM Sep 26, 2018 | |

ಬಸ್‌ನಲ್ಲಿ ಕುಳಿತಿರುತ್ತೀರಿ. ಪಕ್ಕದಲ್ಲಿ ಕುಳಿತವನ ಕೈ ಬೇಕಂತಲೇ ಉದ್ದವಾಗುತ್ತದೆ. ನಿದ್ದೆಯಲ್ಲಿರುವಂತೆ ನಟಿಸಿ, ಉದ್ದೇಶಪೂರ್ವಕವಾಗಿ ಭುಜ ತಾಗಿಸುತ್ತಾನೆ. ಸಂಜೆ ಆಫೀಸು ಮುಗಿಸಿ ಬರುವಾಗ ಯಾರೋ ಒಬ್ಬ ಹಿಂಬಾಲಿಸಿಕೊಂಡು ಬರುತ್ತಾನೆ. ಇಂಥ ಸಂದರ್ಭಗಳು ಆಗಾಗ ಹೆಣ್ಣನ್ನು ಕಾಡುವುದು ಸಾಮಾನ್ಯ. ಆಗೇನು ಮಾಡಬೇಕು ಗೊತ್ತಾ? ನಿಮ್ಮ ಬಳಿ ಇರುವ ವಸ್ತುಗಳನ್ನೇ ಆಯುಧವನ್ನಾಗಿಸಿ, ಪೋಕರಿಗಳಿಗೆ ಬಿಸಿ ಮುಟ್ಟಿಸಬೇಕು. ದಿನನಿತ್ಯ ಅಲಂಕಾರದ ಭಾಗವಾಗುವ ಹಲವು ವಸ್ತುಗಳು, ಆತ್ಮರಕ್ಷಣೆಯ ಸಾಧನಗಳಾಗಬಲ್ಲವು. 

Advertisement

1. ಡಿಯೋಡ್ರೆಂಟ್‌ ಮತ್ತು ಪರ್ಫ್ಯೂಮ್‌
ಹೆಣ್ಮಕ್ಕಳ ಬ್ಯಾಗ್‌ನಲ್ಲಿ ಕಾಯಂ ಜಾಗ ಗಿಟ್ಟಿಸಿರುವ ಡಿಯೋಡ್ರೆಂಟ್‌ ಕೇವಲ ಸುವಾಸನೆಯನ್ನಷ್ಟೇ ಅಲ್ಲ, ಸುರಕ್ಷೆಯನ್ನೂ ನೀಡಬಲ್ಲದು. ಸರಗಳ್ಳರು, ಪುಂಡುಪೋಕರಿಗಳು ಛೇಡಿಸಲು ಬಂದರೆ ಅವರ ಕಣ್ಣಿಗೆ ಗುರಿಯಿಟ್ಟು ಡಿಯೋಡ್ರೆಂಟ್‌ ಸ್ಪ್ರೆ ಮಾಡಿದರಾಯ್ತು.

2. ಹೈ ಹೀಲ್ಡ್‌ ಶೂಸ್‌
ಹೈ ಹೀಲ್ಡ್‌ ಶೂಸ್‌ಗಳನ್ನು ಸ್ಟೈಲ್‌ಗಾಗಷ್ಟೇ ಅಲ್ಲ, ರಕ್ಷಣಾ ತಂತ್ರವನ್ನಾಗಿಯೂ ಬಳಸಬಹುದು. ಬಸ್‌ನಲ್ಲಿ, ಉದ್ದದ ಕ್ಯೂನಲ್ಲಿ ಪಕ್ಕ ನಿಂತವರ ಚೇಷ್ಟೆ ಮಿತಿಮೀರಿದರೆ ಹೈ ಹೀಲ್ಡ್‌ ಚಪ್ಪಲಿಯಿಂದ ತುಳಿದರೆ ಸಾಕು. ಚಪ್ಪಲಿಯನ್ನು ಕೈಗೆತ್ತಿಕೊಳ್ಳಬೇಕಾಗಿಯೂ ಇಲ್ಲ. 

3. ಪೆಪ್ಪರ್‌ ಸ್ಪ್ರೆ
ಮೊದಲೆಲ್ಲ ಹುಡುಗಿಯರು ಹ್ಯಾಂಡ್‌ಬ್ಯಾಗ್‌ನಲ್ಲಿ ಪೆಪ್ಪರ್‌ ಸ್ಪ್ರೆ ಇಟ್ಟುಕೊಳ್ಳುತ್ತಿದ್ದರು. ಈಗ ಆ ಕಷ್ಟವೂ ಇಲ್ಲ. ಯಾಕಂದ್ರೆ, ಪೆಪ್ಪರ್‌ ಸ್ಪ್ರೆà ಕೀ ಚೈನ್‌ಗಳು ಲಭ್ಯ ಇವೆ. ಗಾಡಿಯ, ರೂಮಿನ ಕೀಯನ್ನು ಪೆಪ್ಪರ್‌ ಸ್ಪ್ರೆà ಕೀ ಚೈನ್‌ಗೆ ತೂಗುಬಿಟ್ಟು, ಧೈರ್ಯದಿಂದಿರಿ. 

4. ಹ್ಯಾಂಡ್‌ ಬ್ಯಾಗ್‌
ಅನಿರೀಕ್ಷಿತ ದಾಳಿಯಿಂದ ರಕ್ಷಿಸಿಕೊಳ್ಳಲು, ಕೈಯಲ್ಲಿ ಇರುವ ಬ್ಯಾಗ್‌, ಪರ್ಸ್‌ ಅನ್ನೂ ಆಯುಧವನ್ನಾಗಿ ಬಳಸಬಹುದು. ಉದ್ದ ಹ್ಯಾಂಡಲ್‌ನ ಬ್ಯಾಗ್‌ನಿಂದ ಎದುರಾಳಿಯನ್ನು ಕಟ್ಟಿ ಹಾಕಬಹುದು, ಕುತ್ತಿಗೆ ಬಿಗಿಯಬಹುದು. 

Advertisement

5. ಸೇಫ್ಟಿ ಪಿನ್‌
ತುಂಬಿದ ಬಸ್‌, ಮೆಟ್ರೋ, ಆಟೋದಲ್ಲಿ ಪ್ರಯಾಣಿಸುವಾಗ ಸೇಫ್ಟಿ ಪಿನ್‌ ಕೂಡ ರಕ್ಷಣೆಯ ತಂತ್ರವಾಗುತ್ತದೆ. ಪರ್ಸ್‌ನಲ್ಲಿ ಯಾವಾಗಲೂ ಒಂದೆರಡು ಸೇಫ್ಟಿ ಪಿನ್‌ ಇಟ್ಟುಕೊಳ್ಳುವುದು ಒಳಿತು. 

6. ಮೆಟಾಲಿಕ್‌ ಜಂಕ್‌ ಜ್ಯುವೆಲ್ಲರಿ
ಈಗ ಚಿನ್ನದ ಆಭರಣಗಳಿಗಿಂತ, ನೋಡಲು ಫ‌ಂಕಿ ಇರುವ ಮೆಟಲ್‌ ಜ್ಯುವೆಲರಿಗಳನ್ನು ಇಷ್ಟಪಡುವವರೇ ಹೆಚ್ಚು. ಕೆಲವು ಮೆಟಲ್‌ ಆಭರಣಗಳು ಎದುರಾಳಿಗೆ ಗಾಯ ಮಾಡುವಷ್ಟು ಹರಿತವಾಗಿರುತ್ತವೆ. ಅಂಥ ಆಭರಣಗಳನ್ನು ಆತ್ಮರಕ್ಷಕವನ್ನಾಗಿ ಉಪಯೋಗಿಸಬಹುದು.

7. ಹೇರ್‌ ಪಿನ್‌
ಕೇಶಾಲಂಕಾರಕ್ಕೆ ಬಳಸುವ ಥರಹೇವಾರಿ ಹೇರ್‌ಪಿನ್‌ಗಳು ಎಷ್ಟು ಆಕರ್ಷಕವೋ, ಅಷ್ಟೇ ಭಯಾನಕವೂ ಹೌದು. ಕೈ, ಕುತ್ತಿಗೆ ಮುಂತಾದ ಮೃದು ಜಾಗಕ್ಕೆ ಚುಚ್ಚಿದರೆ ರಕ್ತ ಸೋರುವಷ್ಟು ಗಾಯವಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next