Advertisement
ಮೈಸೂರು ತಾಪಂ ಕಾರ್ಯಾಲಯದ ಮಿನಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ತಾಪಂ ಇಒ ಕೃಷ್ಣಕುಮಾರ್, ತಾಪಂನ 37 ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭ ಗ್ರಾಪಂ ಕಚೇರಿ ಕಟ್ಟಡ ಹಾಗೂ ಆವರಣ ತೀರ ಹದಗೆಟ್ಟಿದೆ. ಇತರೆ ತಾಲೂಕು ಪಂಚಾಯಿತಿಗಳಿಗೆ ಹೋಲಿಕೆ ಮಾಡಿಕೊಂಡರೆ ಮೈಸೂರು ತಾಲೂಕು ಪಂಚಾಯಿತಿ ಬಹಳ ಹಿಂದುಳಿದಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Related Articles
Advertisement
ತಾಲೂಕಿನಲ್ಲಿ ಖಾಲಿ ಇರುವ ಸಿಎ ನಿವೇಶನ ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಇದನ್ನು ನಿಯಂತ್ರಿಸಲು ಖಾಲಿ ನಿವೇಶನಗಳನ್ನು ಸಾಮಾಜಿಕ ಅರಣ್ಯ ಯೋಜನೆಯಡಿ ಉದ್ಯಾನ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.
ಆದ್ಯತೆ: ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್ಗಳಲ್ಲಿ ಪ್ರವೇಶ ಪಡೆಯಲು ಅಂಕ ಆಧಾರಿತವಾಗಿ ಪ್ರವೇಶ ನೀಡಲಾಗುತ್ತಿದ್ದು, ಕುಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಬೇಕು. ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಹತ್ತಿರವಾಗ ಲಿದೆ ಎಂದು ತಾಲೂಕಿನ ಬಿಸಿಎಂ ಹಾಸ್ಟೆಲ್ಗೆ ಸೇರಲು ಇಚ್ಛಿಸುತ್ತಾರೆ. ಆದರೆ, ಅದಕ್ಕೆ ಮೇರಿಟ್ ತೊಡಕ್ಕಾಗಿದೆ. ನಿಯಮ ದಂತೆ ಮೇರಿಟ್ ಆಧಾರಿತದ ಮೇಲೆ ಪ್ರವೇಶಾತಿ ನೀಡಿ ಎಂದು ಬಿಎಂಸಿ ಅಧಿಕಾರಿಗೆ ಸಲಹೆ ನೀಡಿದರು.
ಹುಣಸೂರಿಗಿಂತ ಮೈಸೂರು ತಾಲೂಕಿನಲ್ಲಿ ಹೆಚ್ಚು ಹಾಸ್ಟೇಲ್ಗಳಿವೆ. ಆದರೆ ಅಲ್ಲಿ 4-6 ಲಕ್ಷ ರೂ. ನೀಡಲಾಗುತ್ತಿತು. ಇಲ್ಲಿ 2 ಲಕ್ಷ ರೂ. ನೀಡಲಾಗುತ್ತದೆ. ಇದು ಸಾಲದು. ಹೆಚ್ಚು ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದರು.