Advertisement

ಪ್ಯಾಲೇಸ್‌ ಆಗ್ಬಿಟ್ಟೈತೆ!

01:07 PM Nov 03, 2018 | Team Udayavani |

ಮನೆಮನದ ಹಬ್ಬ ದೀಪಾವಳಿಯನ್ನು ಗರುಡ ಮಾಲ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ, ಮಾಲ್‌ನ ಎದುರು ಮೈಸೂರು ಅರಮನೆಯ ಸೆಟ್‌ ಹಾಕಲಾಗಿದ್ದು, ಮಣ್ಣಿನ ಹಾಗೂ ಎಲೆಕ್ಟ್ರಿಕಲ್‌ ದೀಪಗಳಿಂದ ಝಗಮಗಿಸುತ್ತಿರುವ ಅರಮನೆ ಒಂದು ಕ್ಷಣ ಮೈಸೂರನ್ನು ನೆನಪಿಸುತ್ತದೆ. 10 ಸಾವಿರಕ್ಕೂ ಹೆಚ್ಚು ಗೊಂಬೆಗಳ ಪ್ರದರ್ಶನ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಮಾಲ್‌ನಲ್ಲಿ ಸ್ಥಾಪಿತವಾಗಿರುವ 5 ಅಡಿ ಅಗಲ, 10 ಅಡಿ ಉದ್ದದ ಬೃಹತ್‌ ದೀಪ, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. 

Advertisement

ಮಾಲ್‌ 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗೃಹ ಕೈಗಾರಿಕೆಯ ಹಣತೆಗಳು, ಮಣ್ಣಿನ ಗೊಂಬೆಗಳು, ಸಾವಯವ ಪದಾರ್ಥಗಳು, ಸಾವಯವ ಖಾದ್ಯಗಳು, ಮಣ್ಣಿನ ಕಲಾಕೃತಿಗಳು, ಆಭರಣಗಳು, ಬುಡಕಟ್ಟು ಸಂಪ್ರದಾಯದ ಆಭರಣಗಳು, ಜೈಪುರದ ಕಲಾಕೌತುಕಗಳು, ಚನ್ನಪಟ್ಟಣದ ಗೊಂಬೆಗಳು ಲಭ್ಯವಿದ್ದು, ಸ್ಥಳದಲ್ಲೇ ಗೊಂಬೆಗಳ, ಕಲಾಕೃತಿಗಳ ನಿರ್ಮಾಣ ಮತ್ತು ಪ್ರದರ್ಶನ ಕಾರ್ಯಾಗಾರಗಳೂ ನಡೆಯುತ್ತಿವೆ. ನ. 4 ರವರೆಗೆ ಮಾಲ್‌ನ ಎಲ್ಲ ಮಳಿಗೆಗಳಲ್ಲಿ ಗ್ರಾಹಕರಿಗೆ ಶೇ.50ರಷ್ಟು ರಿಯಾಯಿತಿ ದೊರೆಯಲಿದೆ. 

ಎಲ್ಲಿ?: ಗರುಡಾ ಮಾಲ್‌, ರೆಸಿಡೆನ್ಸಿ ರಸ್ತೆ
ಯಾವಾಗ?: ನ.3 ಮತ್ತು 4

Advertisement

Udayavani is now on Telegram. Click here to join our channel and stay updated with the latest news.

Next