Advertisement

ಹಳೆ ವಸ್ತುಗಳಿಂದ ಸುಂದರ ಮನೆ ಆಲಂಕಾರ

09:50 PM Jun 07, 2019 | mahesh |

ಮನೆ ಅಂದವಾಗಿ ಕಾಣಬೇಕು, ವಿನೂತವಾಗಿರಬೇಕು ಎನ್ನುವುದು ಎಲ್ಲರ ಆಸೆ. ಮನೆಯವರ ಅಭಿರುಚಿಗೆ ತಕ್ಕಂತೆ ಮನೆಯನ್ನು ಅಂದಗೊಳಿಸುತ್ತಾರೆ ಮತ್ತು ಅದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ.

Advertisement

ಮನೆಯಲ್ಲಿ ಬಳಸುವ ಆಲಂಕಾರಿಕ ವಸ್ತುಗಳು ಕಲಾತ್ಮಕವಾಗಿ, ಸೃಜನಾತ್ಮಕವಾಗಿರಬೇಕೆಂದು ಬಯಸುವುದು ಸಾಮಾನ್ಯ. ಹಬ್ಬ, ಸಮಾರಂಭಗಳ ಸಮಯಕ್ಕಂತೂ ಆಲಂಕಾರಿಕ ವಸ್ತಗಳು ಹೆಚ್ಚು ಬೇಕಾಗುತ್ತದೆ. ಅದಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸುವ ಬದಲು ಮನೆಯಲ್ಲೇ ಆಲಂಕಾರಿಕ ವಸ್ತುಗಳನ್ನು ತಯಾರಿಸಬಹುದು.

ಅಭಿರುಚಿಗೆ ತಕ್ಕ ಆಲಂಕಾರ
ಮನೆಯಲ್ಲಿರುವ ಹಳೆ ವಸ್ತುಗಳು, ಉಪಯೋಗಕ್ಕೆ ಬಾರದ ವಸ್ತಗಳನ್ನು ಬಳಸಿ ಮನೆಯಲ್ಲಿ ಸುಂದರವಾದ ಆಲಂಕಾರಿಕ ವಸ್ತಗಳನ್ನು ತಯಾರಿಸಬಹುದು. ಇದರಿಂದ ಮನೆಗೆ ಬಂದವರಿಗೆ ಮನೆಯವರ ಅಭಿರುಚಿ, ಸೃಜನಾತ್ಮಕತೆಯ ಪರಿಚಯವಾಗುತ್ತದೆ. ಮನೆಯಲ್ಲಿ ತುಂಬಿರುವ ಕಸ, ಬೇಡದ ವಸ್ತಗಳೂ ಕಡಿಮೆಯಾಗುತ್ತದೆ ಮತ್ತು ಸಾವಿರಾರು ರೂಪಾಯಿ ಹಣ ವ್ಯಯಿಸುವುದು ತಪ್ಪುತ್ತದೆ.

ಹಳೆಯ ಬಾಗಿಲುಗಳು
ಮನೆಯಲ್ಲಿರುವ ಹಳೆಯ ಬಾಗಿಲುಗಳು ಮನೆಯಲ್ಲಿ ವೇಸ್ಟ್‌ ರೀತಿಯಲ್ಲಿ ಬಿದ್ದಿದ್ದರೆ ಅದನ್ನು ಮೊದಲು ತೆಗೆದುಕೊಂಡು ಚೆನ್ನಾಗಿ ಕ್ಲೀನ್‌ ಮಾಡಿ ಅದರಲ್ಲಿ ಚಿತ್ರಗಳನ್ನು ಅಥವಾ ಕ್ರಾಫ್ಟ್ ಮಾಡಿ ಮನೆಯ ಗೋಡೆಯನ್ನು ಆಲಂಕರಿಸಬಹುದು ಅಥವಾ ಇತರೆ ಉಪಯೋಗಗಳಿಗೂ ಬಳಸಬಹುದು. ಬದಿಯಲ್ಲಿ ಕಸದ ರೀತಿಯಲ್ಲಿ ಬಿದ್ದಿರುವುದರಿಂದ ಜಾಗ ವೇಸ್ಟ್‌ ಆಗುವುದು ತಪ್ಪುತ್ತದೆ.

ಒಣಗಿದ ಎಲೆಗಳು
ಒಣಗಿದ ಎಲೆಗಳಿಂದಲೂ ಮನೆಯನ್ನು ಸುಂದರವಾಗಿಸಬಹುದು. ದೊಡ್ಡದಾದ ಎಲೆಗಳನ್ನು ಪುಸ್ತಕದ ಮಧ್ಯದಲ್ಲಿಟ್ಟು ಒಣಗಿಸಬೇಕು. ನಂತರ ಅವುಗಳನ್ನು ಮನೆಯ ಅಲಂಕಾರಕ್ಕೆ ಬಳಸಬಹುದು. ಒಣಗಿದ ಎಲೆಗಳಿಗೆ ಗೋಲ್ಡನ್‌, ಸಿಲ್ವರ್‌ ಬಣ್ಣ ನೀಡಿ ಮನೆಯ ಅಂದಕ್ಕಾಗಿ ಬಳಸಬಹುದು.

Advertisement

ಹಳೆಯ ಏಣಿಗಳು
ಹಳೆಯ ಮನೆಗಳಲ್ಲಿ ಸಾಮಾನ್ಯವಾಗಿ ಏಣಿಗಳಿರುತ್ತವೆ. ಅವುಗಳನ್ನು ಬದಿಯಲ್ಲಿರಿಸಿ ಅಥವಾ ಉಪಯೋಗಕ್ಕೆ ಬಾರದ ವಸ್ತು ಎಂದು ಮೂಲೆಗೆ ಸರಿಸುತ್ತೇವೆ. ಆದರೆ ಏಣಿಯನ್ನು ಬಳಸಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಬಹುದು. ಏಣಿಗೆ ಚೆನ್ನಾಗಿ ಗೋಲ್ಡನ್‌ ಕವರ್‌ ಅಥವಾ ಬಟ್ಟೆ ಸುತ್ತಿ ಕವರ್‌ ಮಾಡಬೇಕು. ಅದರಲ್ಲಿ ಫೋಟೋ, ನೇತಾಡುವ ಆಲಂಕಾರಿಕ ವಸ್ತಗಳನ್ನು ಕಟ್ಟುವ ಮೂಲಕ ಸುಂದರಗೊಳಿಸಬಹುದು.

ಹಳೆಯ ಪುಸ್ತಕಗಳು
ಹಳೆಯ ಪುಸ್ತಕಗಳನ್ನು , ಪೇಪರ್‌ಗಳನ್ನು ಬಳಸಿ ಸುಂದರವಾಗಿ ಅಲಂಕರಿಸಬಹುದು. ಹಳೆಯ ಪೇಪರ್‌ಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅದನ್ನು ಆಲಂಕಾರಕಾಗಿ ಬಳಸಬಹುದು.

ಹಳೆಯ ಬಟ್ಟೆಗಳು
ಹಳೆಯ ಬಟ್ಟೆಗಳನ್ನು ಎಸೆಯುವ ಬದಲು ಅದನ್ನು ಮನೆಯ ಉಪಯೋಗಕ್ಕಾಗಿ ಬಳಸಬಹುದು. ಹಳೆಯ ಚೆನ್ನಾಗಿರುವ ಬಟ್ಟೆಗಳನ್ನು ಟೇಬಲ್‌ಗೆ ಕವರ್‌ ಆಗಿ ಬಳಸಬಹುದು, ಮ್ಯಾಟ್‌ ಮಾಡಿ ಬಳಸಬಹುದು.

ಮನೆಯಲ್ಲಿಯೇ ವೇಸ್ಟ್‌ ವಸ್ತುಗಳನ್ನು ಬಳಸಿಕೊಂಡು ಮನೆಯನ್ನು ಸುಂದರಗೊಳಿಸಬಹುದು. ಇರುವ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಮೂಲಕ ಮನೆಯನ್ನು ಸರಳವಾಗಿ ಅಂದಗೊಳಿಸಬಹುದು.

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next