Advertisement
ಐದು ವರ್ಷದ ಬಾಲಕಿಯಾಗಿರುವಾಗಲೇ ಆದಿತಿ ಗಾಲ್ಫ್ ಸ್ಟಿಕ್ ಹಿಡಿದು ತರಬೇತಿ ಆರಂಭಿಸಿದ್ದಾಳೆ. ತಂದೆ ಕೂಡ ಗಾಲ್ಫ್ ಆಟಗಾರನಾಗಿರುವುದರಿಂದ ತಂದೆಯೇ ಮೊದಲ ಗುರುವಾಗಿದ್ದಾರೆ. ಏಷ್ಯನ್ ಯೂತ್ ಗೇಮ್ಸ್, ಯೂತ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಸ್ಪರ್ಧಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಎರಡೂ ಗೇಮ್ಸ್ ಆಡಿದ ಭಾರತದ ಮೊದಲ ಮತ್ತು ಏಕೈಕ ಯುವತಿ ಎನ್ನುವ ಪ್ರಶಂಸೆಯ ಪಟ್ಟವೂ ಈಕೆಯದ್ದು.
2016 ಮತ್ತು 2017ರ ಅವಧಿಯಲ್ಲಿ ಒಟ್ಟು ಮೂರು ಮಹಿಳಾ ಯೂರೋಪ್ ಟೂರ್ ಪ್ರಶಸ್ತಿ, 2 ಇತರೆ ಪ್ರಮುಖ ಪ್ರಶಸ್ತಿಯನ್ನು ಈಕೆ ಗೆದ್ದಿದ್ದಾರೆ. ಮೂರು ಯೂರೋಪ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಅನ್ನಿಸಿಕೊಂಡಿದ್ದಾರೆ. ಎಲ್‌ಪಿಜಿಎ ಟೂರ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಸಾಧನೆ ಮಾಡಿದ್ದಾರೆ. ಯಾಕೆಂದರೆ ಇಲ್ಲಿಯವರೆಗೂ ಭಾರತೀಯ ಮಹಿಳಾ ಗಾಲ#ರ್ ಯಾರೂ ಇಂತಹ ಕೂಟದಲ್ಲಿ ಸ್ಪರ್ಧಿಸುವ ಅರ್ಹತೆಯನ್ನೇ ಪಡೆದಿರಲಿಲ್ಲ. ಹೀಗಾಗಿ ಈಕೆಯ ಸಾಧನೆ ವಿಶೇಷವಾದದ್ದು.
Related Articles
ಈಗಾಗಲೇ ವೃತ್ತಿಪರ ಗಾಲ್ಫ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಆದಿತಿ, ವಿಶ್ವ ಮಟ್ಟದಲ್ಲಿ ಅನೇಕ ಟೂರ್ನಿಗಳಲ್ಲಿ ತಾರಾ ಆಟಗಾರ್ತಿಯರಿಗಿಂತ ಹೆಚ್ಚಿನ ಅಂಕ ಪಡೆದು ಮಿಂಚಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಬೆಂಗಳೂರಿನ ಈ ಯುವತಿ ಮುಂದಿನ ದಿನಗಳಲ್ಲಿ ದೊಡ್ಡ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ.
Advertisement