Advertisement

ಬೀಟ್‌ರೂಟ್‌ ಎಂಬ ಬೆಸ್ಟ್‌ ಫ್ರೆಂಡ್‌

12:30 AM Jan 02, 2019 | |

ಬೀಟ್‌ರೂಟ್‌ ಕೇವಲ ತರಕಾರಿಯಲ್ಲ. ಅದು ನಿಮ್ಮ ಅಡುಗೆ ಮನೆಯ ಡಾಕ್ಟರ್‌ ಇದ್ದಂತೆ ಎಂದರೆ ತಪ್ಪಿಲ್ಲ. ಬೀಟ್‌ರೂಟ್‌ ಒಂದರ್ಥದಲ್ಲಿ ಎಲ್ಲರ ಬೆಸ್ಟ್‌ ಫ್ರೆಂಡ್‌ ಅಂದರೂ ಅತಿಶಯೋಕ್ತಿಯಲ್ಲ. ಕೇಳಿ; ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶವು ಹೇರಳವಾಗಿದ್ದು, ರಕ್ತಹೀನತೆ ಬಾರದಂತೆ ತಡೆಯುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ರಕ್ತಪ್ರಸಾರ ಸುಗಮವಾಗುತ್ತದೆ. ರಕ್ತ ಶುದ್ಧಿಯಲ್ಲಿಯೂ ಬೀಟ್‌ರೂಟ್‌ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌, ಒತ್ತಡವನ್ನು ನಿಯಂತ್ರಣದಲ್ಲಿಟ್ಟು ಜೀರ್ಣಕ್ರಿಯೆಯ ವೇಗ ಹೆಚ್ಚಿಸುತ್ತದೆ. ಸೌಂದರ್ಯವರ್ಧಕವಾಗಿಯೂ ಬೀಟ್‌ರೂಟ್‌ ಸಹಕಾರಿ.

Advertisement

1.    ಒಂದು ಚಮಚ ನೆನೆಸಿದ ಅಕ್ಕಿ, ನಾಲ್ಕೈದು ಬೀಟ್‌ರೂಟ್‌ ಚೂರುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ. ಅದಕ್ಕೆ ಒಂದು ಚಮಚ ಜೇನುತುಪ್ಪ, ಸ್ವಲ್ಪ ಹಾಲು ಬೆರೆಸಿ ಮುಖಕ್ಕೆ ಲೇಪಿಸಿ, ಐದು ನಿಮಿಷ ಬಿಟ್ಟು, ಹಾಲಿನಿಂದ ಮುಖಕ್ಕೆ ಮಸಾಜ್‌ ಮಾಡಿ. ಈ ರೀತಿ ಹತ್ತು ನಿಮಿಷಗಳ ಕಾಲ ಮಾಡಿ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಚರ್ಮ ಹೊಳಪು ಪಡೆಯುತ್ತದೆ.

2.    ಬೀಟ್‌ರೂಟ್‌ ರಸವನ್ನು ತಲೆಗೆ ಹಚ್ಚಿ, ಒಂದೆರಡು ಗಂಟೆಗಳ ಕಾಲ ಹಾಗೇ ಬಿಟ್ಟರೆ ಸಹಜವಾದ ಡೈ ಹಾಕಿಕೊಂಡಂತೆ ಬಣ್ಣ ಬರುತ್ತದೆ. ಅದೇ ರೀತಿ ಮದರಂಗಿ ಕಲಸುವಾಗ, ಮೆಹಂದಿ ಪುಡಿಯನ್ನು ಬೀಟ್‌ರೂಟ್‌ ರಸದಲ್ಲಿ ಕಲಸಿ, ಕೇಶಕ್ಕೆ ಲೇಪಿಸಿದರೆ ಉತ್ತಮ ಬಣ್ಣ ಪಡೆಯಬಹುದು.

3.    ಬೀಟ್‌ರೂಟ್‌ ರಸಕ್ಕೆ ಒಂದು ಚಮಚ ಬಾದಾಮಿ ಎಣ್ಣೆ, ಒಂದು ಹನಿ ಜೇನು ಸೇರಿಸಿ ತುಟಿಗಳಿಗೆ ಲೇಪಿಸಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ, ಕಪ್ಪಗಿರುವ ತುಟಿ ಗುಲಾಬಿ ಬಣ್ಣ ಪಡೆಯುತ್ತದೆ. 

4.    ಒಣಗಿದ ತುಟಿಯ ಮೇಲಿರುವ ಸತ್ತ ಚರ್ಮ ದೂರ ಮಾಡಲು, ರುಬ್ಬಿದ ಬೀಟ್‌ರೂಟ್‌ಗೆ ಚಿಟಿಕೆ ಸಕ್ಕರೆ ಸೇರಿಸಿ, ಆ ಮಿಶ್ರಣವನ್ನು ತುಟಿಗಳ ಮೇಲೆ ಉಜ್ಜಬೇಕು. 

Advertisement

5.    ಸದಾ ದಣಿವಾಗುತ್ತಿದ್ದರೆ ಪ್ರತಿನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಸಕ್ಕರೆ ದೊರೆತು, ದಣಿವು ದೂರಾಗುತ್ತದೆ. 

ಸುಮಾ

Advertisement

Udayavani is now on Telegram. Click here to join our channel and stay updated with the latest news.

Next