ಬೆಂಗಳೂರು: ಎರಡನೇ ಪತ್ನಿ ಜತೆ ಸೇರಿಕೊಂಡು ತನ್ನ ಮೂವರು ಮಕ್ಕಳ ಮೇಲೆ ತಂದೆಯೇ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೃತ್ಯ ಎಸಗಿದ ರಾಗಿಗುಡ್ಡ ನಿವಾಸಿ ತಮಿಳುಸೆಲ್ವನ್(45) ಮತ್ತು 2ನೇ ಪತ್ನಿ ಸತ್ಯಾ(35) ಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಮಕ್ಕಳಾದ ಸೌಮ್ಯ(3), ರಾಘವನ್ (4), ನಿತೇಶ್(6) ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಪ್ರಾಣಾಪಾಯವಿಲ್ಲ ಎಂದು ಪೊಲೀಸರು ಹೇಳಿದರು. ತಮಿಳುನಾಡು ಮೂಲಕ ತಮಿಳುಸೆಲ್ವನ್ ಕ್ರೂಸರ್ ವಾಹನ ಚಾಲಕನಾಗಿದ್ದು, 8 ವರ್ಷಗಳ ಹಿಂದೆ ಅಂಜಲಿ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ಸೌಮ್ಯ, ರಾಘವನ್, ನಿತೇಶ್ ಎಂಬ ಮೂರು ಮಕ್ಕಳಿದ್ದಾರೆ. ದಂಪತಿ ಮಕ್ಕಳ ಜತೆ ರಾಗಿಗು ಡ್ಡದಬಾಡಿಗೆಮನೆಯಲ್ಲಿವಾಸವಾಗಿದ್ದರು.ಮೂರು ತಿಂಗಳ ಹಿಂದಷ್ಟೇ ಅಂಜಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಈ ಮಧ್ಯೆ ತಮಿಳುಸ್ವೆಲ್ವನ್, ಸತ್ಯಾ ಜತೆ ಮೂರು ವರ್ಷಗಳ ಹಿಂದೆಯೇ ಮದುವೆಯಾ ಗಿದ್ದು, ಆಕೆಯೊಂದಿಗೆ ಬೇರೆಡೆ ಸಂಸಾರ ನಡೆಸುತ್ತಿದ್ದ. ಈಕೆಗೂ ಇಬ್ಬರು ಮಕ್ಕಳಿದ್ದಾರೆ. ಈ ವಿಚಾರ ಅಂಜ ಲಿಗೆ ಗೊತ್ತಿರಲಿಲ್ಲ. ಅಂಜಲಿ ಮೃತಪಟ್ಟ ಬಳಿಕ ಸತ್ಯಾ ಳನ್ನು ಮನೆಗೆ ಕರೆ ತಂದಿದ್ದ. ಆದರೆ, ಸತ್ಯಾ ತನ್ನ ಇಬ್ಬರು ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟಿದ್ದಳು ಎಂದು ಪೊಲೀಸರು ಹೇಳಿದರು.
ಮೂವರು ಚಿಕ್ಕಮಕ್ಕಳಾದ್ದರಿಂದ ತುಂಟಾಟ. ಹಠ ಮಾಡುತ್ತಿದ್ದರು. ಅದರಿಂದ ಆಕ್ರೋಶಗೊಂಡಿದ್ದ ಸತ್ಯಾ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದಳು. ಜತೆಗೆ ಪ್ರತಿನಿತ್ಯ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಪತಿಗೆ ಚಾಡಿ ಹೇಳಿ ಮಕ್ಕಳಿಗೆ ಹೊಡೆಸುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಸ್ಥಳೀಯರಿಂದ ಪ್ರಕರಣ ಬೆಳಕಿಗೆ: ಪ್ರತಿನಿತ್ಯ ಮಕ್ಕಳ ಚಿರಾಟ, ಕೂಗಾಟ ಕೇಳುತ್ತಿತ್ತು. ಈ ಬಗ್ಗೆ ದಂಪ ತಿಯನ್ನು ಕೇಳಿದರೆ, ಮಗನೊಬ್ಬ ಬಿಸಿ ನೀರನ್ನು ಕಾಲಿನ ಮೇಲೆ ಹಾಕಿಕೊಂಡು ಚಿರಾಡಿದ್ದಾನೆ ಎಂದು ಹೇಳುತ್ತಿದ್ದರು. ಮಕ್ಕಳು ಶ್ವೆಟರ್ ಹಾಕಿಕೊಂಡು ಓಡಾ ಡುತ್ತಿದ್ದರು, ಅನುಮಾನಗೊಂಡು ಶ್ವೆಟರ್ ಬಿಚ್ಚಿದಾಗ ಸುಟ್ಟ ಗಾಯಗಳಿದ್ದವು. ಇದರಿಂದ ಸತ್ಯ ಬೆಳಕಿಗೆ ಬಂದಿದೆ. ಈ ಮಧ್ಯೆ ಸೋಮ ವಾರ ರಾತ್ರಿ 9 ಗಂಟೆ ಸುಮಾರಿಗೆ ಮೂವರು ಮಕ್ಕಳಿಗೆ ಬರೆ ಎಳೆದು ಕ್ರೌರ್ಯ ಮೆರೆದಿ¨ರ ª ು. ಈನೋವು ಸಹಿಸಲಾಗದೇ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದವು.
ಈ ವೇಳೆ ಪಕ್ಕದ ಮನೆಯವರು ಬಂದು ನೋಡಿದಾಗ ನಿತೇಶ್ ಕಾಲಿನಲ್ಲಿ ರಕ್ತ ಸುರಿಯುತ್ತಿತ್ತು. ಇನ್ನಿಬ್ಬರು ಮಕ್ಕಳ ಭುಜ ಮತ್ತು ಮೊಣಕೈ ಮೇಲೆ ಸುಟ್ಟ ಗಾಯಗಳಿ¨ವು ª . ಅವರನ್ನು ಹಿಂಬಾಲಿಸಿಕೊಂಡು ಬಂದ ಸೆಲ್ವನ್ ಕೈನಲ್ಲಿ ಆಕ್ಸಾ ಬ್ಲೇಡ್ ಕಂಡು ಬಂದಿತ್ತು. ಆಗ ಸ್ಥಳೀಯರು ಆತನನ್ನು ಹಿಡಿದು ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದಾನೆ. ಆತನ ಪತ್ನಿಯೂ ಕೂಗಾಡಿದ್ದಳು ಎಂದು ಪೊಲೀಸರು ಹೇಳಿದರು.