ಹೊಸಪೇಟೆ: ನಗರದ ಹೃದಯ ಭಾಗದಲ್ಲಿರುವ ರಾಣಿಪೇಟೆ ಬಡಾವಣೆಗೆ ಸೋಮವಾರ ಬೆಳ್ಳಂಬೆಳಗ್ಗೆ ಕರಡಿಯೊಂದು ನುಗ್ಗಿದ ಘಟನೆ ನಗರದಲ್ಲಿ ನಡೆದಿದ್ದು, ಕೆಲ ಕಾಲ ಆತಂಕ ಸೃಷ್ಠಿಯಾಗಿತ್ತು.
ರಾಣಿಪೇಟೆ ಏರಿಯಾಕ್ಕೆ ಹೊಂದಿಕೊಂಡಿರುವ ಹೊಲ-ಗದ್ದೆಗಳ ಅಂಚಿನಿಂದ ನಸುಕಿನಲ್ಲಿ ಊರು ಒಳಗೆ ಎಂಟ್ರಿ ಕೊಟ್ಟಿರುವ ಕರಡಿ, ಮನೆಯೊಂದರ ಕಿಟಿಕಿಯ ಆಸರೆಯ ಸಿಮೆಂಟ್ ಪರದೆಯ ಮೇಲೆ ಅವಿತು ಕುಳಿತಿದೆ.
ದಿವಂಗತ ಸತ್ಯನಾರಾಯಣ ಸಿಂಗ್, ಹಿಂಭಾಗದ ಮನೆ ಕಿಟಕಿಯ ಮೇಲೆ ಕುಳಿತುಕೊಂಡಿದೆ. ನಸುಕಿನಲ್ಲಿ ಕರಡಿ ನಾಡಿಗೆ ಬಂದಿರುವುದರಿಂದ ಬಹುತೇಕ ಎಲ್ಲಾ ಮನೆಗಳ ಬಾಗಿಲು ಮುಚ್ಚಿ ಭದ್ರವಾಗಿರುವುದರಿಂದ ಕರಡಿ ಮನೆಯೊಳಗೆ ಹೋಗಲು ಸಾಧ್ಯವಾಗಿಲ್ಲ. ಇಲ್ಲವಾದಲ್ಲಿ ಬಾಗಿಲು ತೆರೆದ ಮನೆಯೊಳಗೆ ನುಗ್ಗಿ ದಾಳಿ ಮಾಡುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿ ಬಂದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ದಂದಿಗಳು ಬೋನ್ ಇರಿಸಿ, ಕರಡಿ ಸೆರೆ ಹಿಡಿಯವಲ್ಲಿ ಯಶ್ವಸಿಯಾದರು.