ಗಂಗಾವತಿ: ಬಯಲು ಬಹಿರ್ದೆಸೆಗೆ ತೆರಳಿದ್ದ ಯುವಕನೋರ್ವನ ಮೇಲೆ ಕರಡಿ ದಾಳಿ ನಡೆಸಿ, ಮಾರಣಾಂತಿಕ ಗಾಯಗೊಳಿಸಿದ ಘಟನೆ ತಾಲೂಕಿನ ವೆಂಕಟಗಿರಿಯಲ್ಲಿ ಶುಕ್ರವಾರ ಬೆಳಗಿನ ಜಾವ ಜರುಗಿದೆ.
ವೆಂಕಟಗಿರಿ ಗ್ರಾಮದ ನಿವಾಸಿ ಯಮನೂರ ತಂದೆ ಈರಪ್ಪ (21) ಗಾಯಗೊಂಡವರು.
ಈರಪ್ಪ ಬೆಳಗಿನ ಜಾವ ಬಯಲು ಬಹಿರ್ದೆಸೆಗೆ ಗ್ರಾಮದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕರಡಿ ಏಕಾಏಕಿ ದಾಳಿ ಮಾಡಿದೆ. ಕರಡಿಯಿಂದ ಕಸಿದುಕೊಳ್ಳಲು ಯತ್ನಿಸಿದರೂ ಕರಡಿ ಕೈ ಮತ್ತು ದೇಹದ ಇತರ ಭಾಗದಲ್ಲಿ ಕಚ್ಚಿದ ಪರಿಣಾಮ ಮಾರಣಾಂತಿಕ ಹಲ್ಲೆಗಳಾಗಿವೆ. ಯುವಕ ಒಯ್ಪನೆಯಿಂದ ಸುತ್ತಮುತ್ತಲಿನವರು ಆಗಮಿಸಿ ಕರಡಿಯನ್ನು ಓಡಿಸಿದ್ದು, ಗಾಯಗೊಂಡ ಯುವಕನನ್ನು ಗಂಗಾವತಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.