Advertisement

ಮಾಯಕೊಂಡ ತಾಲೂಕು ಕೇಂದ್ರವಾಗಲಿ

10:32 AM Aug 04, 2019 | Suhan S |

ದಾವಣಗೆರೆ: ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಶನಿವಾರ ಗ್ರಾಮದಲ್ಲಿ ಮಾಯಕೊಂಡ ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆ ನೇತೃತದಲ್ಲಿ ಪ್ರತಿಭಟನೆ ನಡೆಯಿತು.

Advertisement

ದಾವಣಗೆರೆ ತಾಲೂಕಿನ ಮಾಯಕೊಂಡ ದೊಡ್ಡ ಗ್ರಾಮವಾಗಿದ್ದು, 16 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೇ ವಿಧಾನ ಸಭಾ ಕ್ಷೇತ್ರವೂ ಆಗಿದೆ. ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜು, ಖಜಾನೆ, ನಾಡ ಕಚೇರಿ, ಪೊಲೀಸ್‌ ಠಾಣೆ, ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಹುಂಡೇಕಾರ್‌ ಸಮಿತಿ, ಗದ್ದಿಗೌಡರ್‌ ಸಮಿತಿ ಹಾಗೂ ವಾಸುದೇವರಾವ್‌ ಸಮಿತಿ ಸಹ ಮಾಯಕೊಂಡ ತಾಲೂಕು ಕೇಂದ್ರವನ್ನಾಗಿಸಲು ಅರ್ಹತೆ ಹೊಂದಿದೆ ಎಂದು ಉಲ್ಲೇಖೀಸಲಾಗಿದೆ. ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ರಾಮಕೃಷ್ಣ ಹೆಗಡೆಯವರಿಂದ ಹಿಡಿದು ಇಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂಪ್ಪನವರವರೆಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡ ಗ್ರಾಮದ ಸುತ್ತಮುತ್ತ ಎಸ್ಸಿ-ಎಸ್ಟಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕಾರ್ಯ ನಿಮಿತ್ತ ದಾವಣಗೆರೆ ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಆರ್ಥಿಕ ಹೊರೆ ಹಾಗೂ ಸಮಯ ವ್ಯರ್ಥವಾಗಲಿದೆ. 60 ವರ್ಷಗಳಿಂದಲೂ ಈ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆ ಅರಿತು ಈಗಲಾದರೂ ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ರಚಿಸಲು ತಕ್ಷಣ ಕ್ರಮ ವಹಿಸಬೇಕೆಂದು ವೇದಿಕೆಯ ಅಧ್ಯಕ್ಷ ಎಂ.ಎಸ್‌.ಕೆ.ಶಾಸ್ತ್ರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next