Advertisement

ಮಹಿಳೆಯರ ಸಾಧನೆಯೇ ಪ್ರೇರಣೆಯಾಗಲಿ

08:41 PM Mar 26, 2021 | Team Udayavani |

ಹುಣಸಗಿ : ದೇಶದಲ್ಲಿ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಎಲ್ಲ ರಂಗಗಳಲ್ಲಿಯೂ ಅಪ್ರತಿಮ ಸಾಧನೆ ಮಾಡಿದ್ದಾಳೆ ಎಂದು ರಾಯಚೂರ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಲೀಲಾ.ಎಂ.ಕಾರಟಗಿ ಹೇಳಿದರು.

Advertisement

ಪಟ್ಟಣದ ಮಾತೋಶ್ರೀ ಸುಬ್ಬಮ್ಮಗೌಡತಿ ಮಂಗಲ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಮಹಿಳಾ ಶಿಕ್ಷಕಿ ಹಾಗೂ 21ನೇ ಶತಮಾನದ ಅಗತ್ಯತೆಗಳು ಎನ್ನುವ ಶೈಕ್ಷಣಿಕ ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದು, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಕೂಡಾ ಒಬ್ಬ ಮಹಿಳೆ ಎಂಬುದು ವಿಷಯ ಎಂದರು. ಭಾರತ ದೇಶದ ಪ್ರಧಾನ ಮಂತ್ರಿಗಳಲ್ಲಿ ದಿ| ಇಂದಿರಾಗಾಂ ಧಿ ಹಾಗೂ ಅಂತರಿಕ್ಷಯಾನ ಮಾಡಿದ ಕಲ್ಪನಾ ಚಾವ್ಲಾ, ಗಣಿತ ತಜ್ಞೆ ಶಕುಂತಲಾ, ಸಾವಿತ್ರಿಬಾಯಿ ಫುಲೆ ಅವರು ಕೂಡಾ ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಇವರ ಆದರ್ಶಗಳೇ ನಮಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ಮಹಾದೇವರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾ ಧಿಕಾರಿ ಅಮರೇಶ ಕುಂಬಾರ, ಅಜೀಂ ಪ್ರೇಮ್‌ಜೀ ಸಂಯೋಜಕ ಸುರೇಶ ಗೌಡರ್‌, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸೋಮರಡ್ಡಿ ಮಂಗಿಹಾಳ, ಸುರಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ಟನಿಕೇದಾರ, ಹುಣಸಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೊಕ್ರಾಣಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಾಘವೇಂದ್ರ ಕಾಮನಟಗಿ, ಬಸನಗೌಡ ವಠಾರ, ಶೋಭಾ ವಾಲ್ಮೀಕಿ, ಖಾದರ ಪಟೇಲ್‌, ರಮೇಶ ಪಾಟೀಲ್‌, ಶಿವುಕುಮಾರ, ನೀಲಾ ನಾಗರಬೆಟ್ಟ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next