Advertisement

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಜಗತ್ತು ಎದುರಿಸುವ ಉತ್ಸಾಹವಿರಲಿ

01:12 PM Jan 06, 2020 | Lakshmi GovindaRaj |

ಕೆ.ಆರ್‌.ನಗರ: ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತೀವ್ರ ಪೈಪೋಟಿಯಿದೆ. ಎಲ್ಲರೂ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ  ಉತ್ಸಾಹ ಹೊಂದಬೇಕು ಎಂದು ಕೆ.ಆರ್‌.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ಚಂದ್ರ ಹೇಳಿದರು. ತಾಲೂಕಿನ ಸಾಲಿಗ್ರಾಮ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿ ಕೋತ್ಸವದಲ್ಲಿ ಮಾತನಾಡಿದರು.

Advertisement

ಪಠ್ಯಪುಸ್ತಕಗಳನ್ನು  ಅಭ್ಯಾಸ ಮಾಡಿ, ಗರಿಷ್ಠ ಅಂಕ ಗಳನ್ನು ಪಡೆಯುವುದರ ಜತೆಗೆ ನಾನಾ ವಲಯದ ವಿದ್ಯಮಾನಗಳ ಬಗ್ಗೆ ಸಮಗ್ರ ಅಧ್ಯಯನ ಅಗತ್ಯ ವಾಗಿದೆ. ಅಲ್ಲದೆ  ವಿದ್ಯಾರ್ಥಿ ದಿಸೆಯಲ್ಲಿಯೇ ಸಮಾಜಕ್ಕೆ ಮಾದರಿಯಾಗುವಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಅಭ್ಯಾಸ ಯೋಜನಾಬದ್ಧವಾಗಿರಲಿ: ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಉತ್ತಮ ಸಾಧನೆಗೈ ಯ್ಯಬೇಕಾದರೆ ವಿದ್ಯಾರ್ಥಿಗಳು ಯೋಜನಾಬದ್ಧ ವಾಗಿ  ಸತತ ಅಭ್ಯಾಸದಲ್ಲಿ ತೊಡಗ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಿ ಮಾನವೀಯ ಮೌಲ್ಯಗಳು ರೂಪುಗೊಳ್ಳಬೇಕು. ಆಗ ಮಾತ್ರ ತಾವು ನಿರೀಕ್ಷಿಸಿದ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಉತ್ತಮ ಸಾಧನೆ ಮಾಡಿ ಮಾದರಿಯಾಗಿ: ಕಾಲೇಜು  ಪ್ರಾಂಶುಪಾಲ ಎಚ್‌.ಕೆ.ಕೃಷ್ಣಯ್ಯ ಮಾತ ನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ಪಠ್ಯ ವಸ್ತುಗಳ ಅಧ್ಯಯನದಲ್ಲಿ ಮಗ್ನರಾಗಬೇಕು. ಆಗ  ಮಾತ್ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬಹುದು. ಅಲ್ಲದೆ ಅಂತಹ ಸಾಧನೆ ತೋರುವ ಎಲ್ಲಾ ವಿದ್ಯಾರ್ಥಿಗಳಿಗೂ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಭರವಸೆ ನೀಡಿದರು.

ಸಾಂಸ್ಕೃತಿಕ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳು ಲವಲಕೆಯಿಂದ  ಕಲಿಕೆಯಲ್ಲಿ ತೊಡಗಲು ಪ್ರೇರೇಪಿಸುವುದರ ಜತೆಗೆ ಮಾನಸಿಕ ಹಾಗೂ ದೈಹಿಕವಾಗಿ  ಸದೃಢರಾಗಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹ ಮತ್ತು ಆಸಕ್ತಿಯಿಂದ  ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಸಾಂಸ್ಕೃತಿಕ, ಕ್ರೀಡೆ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Advertisement

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌.ಆರ್‌. ದಿನೇಶ್‌, ಸದಸ್ಯ  ಎಸ್‌.ಕೆ.ಮಧುಚಂದ್ರ, ರಾಜೇಂದ್ರ ಪ್ರಸಾದ್‌ಜೈನ್‌, ನಿವೃತ್ತ ಉಪನ್ಯಾಸಕ ಎಸ್‌.ಆರ್‌. ರಾಮೇಗೌಡ, ತಾಪಂ ಮಾಜಿ ಸದಸ್ಯ ಶ್ರೀನಿವಾಸ ಗೌಡ,  ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯರಾಮ್‌, ಉಪನ್ಯಾಸಕ ಅಶೋಕ್‌, ಲಿಂಗರಾಜು, ಕುಮಾರ್‌, ಶಿವಪ್ರಸಾದ್‌, ರಾಜಭಕ್ಷಿ,  ಶಶಿಕುಮಾರ್‌, ಲತಾ, ಲಕ್ಷ್ಮೀಬಾಯಿ, ಕುಮಾರಿ, ಆಶಾ, ನಾಗರತ್ನಾ, ಪ್ರಮೀಳಾ, ರಕ್ಷಿತಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next