Advertisement
ಇದರ ಜತೆಗೆ ದೀಪಾವಳಿ ಸಂಭ್ರಮ ಯಾವುದೇ ಅನಾಹುತಕ್ಕೆ ಕಾರಣವಾಗದಿರಲಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜಾಗೃತಿ ಮೂಡಿಸಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಸಹ ಹಲವು ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಜತೆಗೆ, ಸಾರ್ವಜನಿಕರಿಗೆ ಸಲಹೆ-ಸೂಚನೆಯನ್ನೂ ಕೊಟ್ಟಿದೆ. ಈ ಹಿಂದಿನ ವರ್ಷಗಳಲ್ಲಿ ಹಬ್ಬದ ದಿನವೇ ಪಟಾಕಿಯಿಂದಾಗಿ ಹಲವರ ಬದುಕಿನಲ್ಲಿ ಕತ್ತಲು ಆವರಿಸಿದೆ.
Related Articles
Advertisement
ಮುಂಜಾಗ್ರತಾ ಕ್ರಮಗಳು-ಪಟಾಕಿ ಹಚ್ಚಲು ಮಕ್ಕಳಿಗೆ ಉದ್ದದ ಅಗರಬತ್ತಿ ನೀಡುವುದು
-ಕನ್ನಡಕ ಇಲ್ಲವೇ ಹೆಲ್ಮೆಟ್ ಧರಿಸಿ ಪಟಾಕಿ ಸಿಡಿಸಿ
-ಪಟಾಕಿ ಸಿಡಿತದ ಸಮಯದಲ್ಲಿ ಕಿವಿಗೆ ಹತ್ತಿ ಅಥವಾ ಇಯರ್ ಪ್ಲೆಗ್ ಬಳಕೆ
-ರೋಗಿಗಳಿರುವ ಕೊಠಡಿಗಳ ಬಾಗಿಲು ಹಾಕಿಕೊಳ್ಳುವುದು ಕಣ್ಣಿಗೆ ಪಟಾಕಿ ಕಿಡಿ ಸಿಡಿದರೇನು ಮಾಡಬೇಕು?
-ಪಟಾಕಿ ಕಿಡಿ ಕಣ್ಣಿಗೆ ಬಡಿದಾಗ ಯಾವುದೇ ಕಾರಣಕ್ಕೂ ಉಜ್ಜಿಕೊಳ್ಳಬಾರದು
-ತಕ್ಷಣ ತಣ್ಣಿರಿನಿಂದ ತೊಳೆಯುವುದು
-ಸ್ವಚ್ಛವಾದ ಬಟ್ಟೆ ಅಥವಾ ಹತ್ತಿಯನ್ನು ಕಣ್ಣಿಗೆ ಒತ್ತಿಕೊಳ್ಳುವುದು
-ಕೂಡಲೇ ಸಮೀಪದ ಚಿಕಿತ್ಸೆ ಪಡೆಯವುದು. ದುರಂತ ಸಂಭವಿಸಿದರೆ ಮನೆ ಮದ್ದು ಬೇಡ: ಕಿವಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಸಿಡಿಯುವ ಪಟಾಕಿ ಕವಿಯೊಳಗಿನ ತಮಟೆಗೆ ಹೆಚ್ಚು ಹಾನಿ ಮಾಡುತ್ತದೆ. ಕೆಲವು ಬಾರಿ ತಮಟೆ ಚಿದ್ರಗೊಂಡು ಶಾಶ್ವತ ಕಿವುಡಾಗುವ ಸಾಧ್ಯತೆ ಇರುತ್ತದೆ. ಇಂತಹ ಶಬ್ದ ಮಾಲಿನ್ಯ ಸಂಬಂಧಿ ಕಿವುಡುತನಕ್ಕೆ ಯಾವುದೇ ಔಷಧಿ ಇಲ್ಲ. ಪಟಾಕಿ ಸಿಡಿಸಿದ ವೇಳೆ ಕಿವಿಯೊಳಗೆ ಗುಂಯ್ ಗುಡುವ ಅಥವಾ ಶಬ್ದ ಅಸ್ಪಷ್ಟವಾಗಿ ಕೇಳುವ ಸಮಸ್ಯೆಯಾದರೆ, ಎಣ್ಣೆ, ನೀರು ಹಾಕುವಂತಹ ಮನೆ ಮದ್ದುಗಳಿಗೆ ಮುಂದಾಗದೆ ಕೂಡಲೇ ಆಸ್ಪತ್ರೆಗೆ ತೋರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಕ್ಕೆ: ದೀಪಾವಳಿ ಸಂದರ್ಭದಲ್ಲಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ವಿವಿಧ ಆಸ್ಪತ್ರೆ ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ತುರ್ತು ಚಿಕಿತ್ಸೆ ನೀಡಲಾಗುತ್ತದೆ. -ಮಿಂಟೋ ಆಸ್ಪತ್ರೆ (ಕಲಾಸಿಪಾಳ್ಯ) ಸಹಾಯವಾಣಿ -080-26707176
-ನಾರಾಯಣ ನೇತ್ರಾಲಯ ಸಹಾಯವಾಣಿ
-ರಾಜಾಜಿನಗರ 91 80 66121641/1643
-ಹೊಸೂರು ರಸ್ತೆ 91 80 66660655
-ಬನ್ನೇರುಘಟ್ಟ (ಬೆಳಗ್ಗೆ 8ರಿಂದ ಸಂಜೆ 7.30): 91 80 61222400/40 ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?: ಕಾಡುಗೋಡಿ ಸಂತೆ ಮೈದಾನ, ವೆಂಗಯ್ಯನ ಕೆರೆ ಮೈದಾನ ಕೆ.ಆರ್.ಪುರ, ಕಾವೇರಿ ಆಟದ ಮೈದಾನ ವಿಜಿನಾಪುರ, ಐಟಿಐ ಮೈದಾನ, ಕೈಕೊಂಡ್ರಹಳ್ಳಿ ಮೈದಾನ, ದೊಡ್ಡಕನಹಳ್ಳಿ ಮೈದಾನ, ಹೂಡಿ ಮೈದಾನ, ವರ್ತೂರು ಹೊಸ ಸಂತೆ ಮೈದಾನ, ಕುಂದಲಹಳ್ಳಿ ಬಡಾವಣೆಯ ಮೈದಾನ, ಶ್ರೀರಾಮಮಂದಿರ ಆಟದ ಮೈದಾನ, ಎಂಇಎಸ್ ಆಟದ ಮೈದಾನ, ವಿಲ್ಸನ್ ಗಾರ್ಡ್‌ನ ಆಟದ ಮೈದಾನ, ಶಂಕರ್‌ನಾಗ್ ಆಟದ ಮೈದಾನ, ಪದ್ಮನಾಭ ನಗರ ಕಾರ್ಮೆಲ್ ಸ್ಕೂಲ್ ಸಮೀಪ, ಉದಯಭಾನು (ಬಸವನಗುಡಿ) ಮೈದಾನ, ಹಂಪಿನಗರ ಮೈದಾನ, ಭುವನಗಿರಿ ಆಟದ ಮೈದಾನ, ಯಲಹಂಕದ ಬಸ್ ನಿಲ್ದಾಣದ ಸಮೀಪ ಹಾಗೂ ಯಲಹಂಕ ಉಪನಗರ ಕರ್ನಾಟಕ ಗೃಹ ಮಂಡಳಿ ವಾಣಿಜ್ಯ ಸಂಕೀರ್ಣ ಮುಂಭಾಗ ಸೇರಿದಂತೆ ವಿವಿಧ ಭಾಗಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ದೀಪಾವಳಿ ಸಂಭ್ರಮಾಚರಣೆ ದೃಷ್ಟಿ ಇಲ್ಲದವರಿಗೆ, ಅಲ್ಪ ದೃಷ್ಟಿ ಇರುವವರಿಗೆ ಹಾಗೂ ಅಸಹಾಯಕರಿಗೆ ತೊಂದರೆ ಆಗದಂತೆ ಆಚರಿಸಿ. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ.
-ಸ್ನೇಹದೀಪ್ ಟ್ರಸ್ಟ್‌ನ ಸಂಸ್ಥಾಪಕ, ಪಾಲ್ ಮುದ್ದ. * ಹಿತೇಶ್ ವೈ