ಹಾಸನ: ಜಿಲ್ಲೆಯಲ್ಲಿರುವ ಖಾಸಗಿ ಕೋಳಿ ಫಾರಂಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಒಳ ಮತ್ತು ಹೊರ ಆವರಣವನ್ನು ರಾಸಾಯನಿಕ ರೋಗ ನಿರೋಧಕ ಔಷಧಿಗಳಿಂದ ಸ್ವತ್ಛಗೊಳಿಸಿ, ಜೈವಿಕ ಸಂರಕ್ಷಣಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಪ್ರಾಣಿಜನ್ಯ ರೋಗದ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳಿಗೆ ಸಲಹೆ: ಸಾಕು ಪಕ್ಷಿ ಮತ್ತು ಕೋಳಿ ಮಾರಾಟದ ಅಂಗಡಿ ಮಾಲಿಕರ ಸಭೆ ಕರೆದು ಹಕ್ಕಿಜ್ವರದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸ್ವತ್ಛತೆ ಕಾಪಾಡುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇ ಶನ ನೀಡಿದರು.
ಕೆರೆ-ಹೊಂಡ, ಪಕ್ಷಿಧಾಮಗಳು ಮತ್ತು ಜಲಾಶಯ ಹಿನ್ನೀರಿನಲ್ಲಿ ವಲಸೆ ಹಕ್ಕಿಗಳ ಚಲನ ವಲನದ ಮೇಲೆ ನಿಗಾ ವಹಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಕೋಳಿ ಗಳ ಸಾಗಾಣಿಕೆ ಬಗ್ಗೆ ನಿಗಾವಹಿಸಬೇಕು ಎಂದು ಪ್ರಾದೇ ಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ:- ಕೋಟೆನಾಡಲ್ಲಿ ಖರೀದಿ ಭರಾಟೆ ಜೋರು
ಗ್ರಾಮ ಪಂಚಾಯ್ತಿ ವ್ಯಾಪ್ತಿಯೊಳಗೆ ಪರವಾನಗಿ ಹೊಂದಿರುವ ಕೋಳಿ ಅಂಗಡಿಗಳ ವಿವರ ಪಡೆಯಬೇಕು ಎಂದು ತಾಕೀತು ಮಾಡಿದರು. ಅಸಹಜವಾಗಿ ಕೋಳಿ ಮತ್ತು ಇತರೆ ಹಕ್ಕಿಗಳು ಮರಣ ಹೊಂದಿದ್ದಲ್ಲಿ ಕೂಡಲೇ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡ ಬೇಕು. ಕೋಳಿ ಮಾರಾಟ ಅಂಗಡಿಗಳ ತ್ಯಾಜ್ಯವಸ್ತುಗಳ ವ್ಯವಸ್ಥಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಬಿ.ಎ. ಪರಮೇಶ್, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು