Advertisement
ಯಾವುದೇ ಸರಕಿಗೂ ಒಂದು ಮಾರುಕಟ್ಟೆ ಇದ್ದರೆ ಅದರ ಮೌಲ್ಯದ ಸಂಪೂರ್ಣ ಲಾಭ ಪಡೆಯಬಹುದು. ಅಂತಹ ಒಂದು ಮಾರುಕಟ್ಟೆ ಇದ್ದರೇನೇ ಒಂದು ವಸ್ತುವಿನ ಆಂತರಿಕ ಮೌಲ್ಯವು ಮಾರುಕಟ್ಟೆ ಬೆಲೆಯಾಗಿ ಪರಿವರ್ತಿತವಾಗುವುದು. ಒಂದು ವ್ಯವಸ್ಥಿತವಾದ ಪ್ರಬುದ್ಧ ಮಾರುಕಟ್ಟೆ ಎಲ್ಲಾ ಕೊಡು-ಕೊಳ್ಳುವವರಿಗೂ ಅತ್ಯಗತ್ಯ.
Related Articles
Advertisement
ಮೊದಲೆಲ್ಲಾ ದಲಾಲಿಗಳೇ ಮಾರುಕಟ್ಟೆಯಲ್ಲಿ ಕೂಗಾಡಿ, ಚೀರಾಡಿ ಶೇರುಗಳ ವ್ಯಾಪಾರ ಮಾಡುತ್ತಿದ್ದರೆ ಈಗ ನೂರಕ್ಕೆ ನೂರು ಶೇರು ಮಾರಾಟ ಕಂಪ್ಯೂಟರ್‌ಗಳ ಮೂಲಕ ವಿದ್ಯುನ್ಮಾನ ಮಾಧ್ಯಮದಲ್ಲೆ ನಡೆಯುತ್ತದೆ.
ಪ್ರತಿಬಾರಿ ಟಿ.ವಿ ನೋಡುತ್ತಿರುವಾಗಲೂ ಸ್ಕ್ರೀನ್ ಕೆಳಗಡೆ ಬೇರೆ ಬೇರೆ ಕಂಪೆನಿಗಳ ಶೇರು ಬೆಲೆಗಳು ನಾಗಾಲೋಟದಲ್ಲಿ ಓಡುತ್ತಾ ಇರುತ್ತವೆ. ಆ ಸ್ಟ್ರಿಪYಗಳ ಮೊದಲಿಗೆ ಅವು ಯಾವ ಮಾರುಕಟ್ಟೆಯ (ಬಿ.ಎಸ್.ಇ ಅಥವಾ ಎನ್.ಎಸ್.ಇ) ಬೆಲೆಗಳು ಎಂದು ಬರೆದಿರುತ್ತವೆ. ಉದಾಹರಣೆಗೆ, ರಿಲಾಯನ್ಸ್ ಇಂಡ್ 1060(1050) ಎಂದಿರುತ್ತದೆ. ಇದರ ಅರ್ಥ, ಈ ಸಮಯದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಶೇರು ಬೆಲೆ ರೂ 1060 ಆಗಿದೆ. ಬ್ರಾಕೆಟ್ಟಿನಲ್ಲಿ ಕೊಟ್ಟ ಬೆಲೆ ರೂ 1050 ಹಿಂದಿನ ದಿನಾಂತ್ಯದ ಬೆಲೆ. ಇವಿಷ್ಟೇ ಅಲ್ಲದೆ, ಇಂಡೆಕ್ಸ್ ಎಂಬ ಪದವೂ ಒಂದು ಮೂಲೆಯಲ್ಲಿ ಕಾಣಬರುತ್ತದೆ. ಅದರ ಜೊತೆಗೆ ಒಂದು ಸಂಖ್ಯೆಯೂ ಮೇಲ್ಮುಖ ಅಥವ ಕೆಳಮುಖದ ಪ್ರಮಾಣವೂ, ಒಂದು ಬಾಣವೂ!
ಶೇರು ಸೂಚ್ಯಂಕ ಅಥವಾ ಇಂಡೆಕ್ಸ್ಇತ್ತೀಚೆಗಂತೂ ಎಲ್ಲಾ ಮಾರುಕಟ್ಟೆಗಳಲ್ಲೂ ಎಲ್ಲಾ ಸರಕುಗಳ ಬಗ್ಗೆಯೂ ಇಂಡೆಕ್ಸ… ಅಥವಾ ಸೂಚ್ಯಂಕ ಎಂಬ ಪದದ ಬಳಕೆ ಆಗುತ್ತದೆ. ಉದಾ: ಶೇರು ಸೂಚ್ಯಂಕ, ಡಾಲರ್ ಸೂಚ್ಯಂಕ, ಬೆಲೆಯೇರಿಕೆಯ ಸೂಚ್ಯಂಕ, ಇತ್ಯಾದಿ.
ನಾವೆಲ್ಲಾ ಸಾಮಾನ್ಯವಾಗಿ ಹೇಳುತ್ತೇವೆ, ನಾವು ಚಿಕ್ಕವರಿ¨ªಾಗ ಅಷ್ಟು ರೂಪಾಯಿಗಳಿಗೆ ಸಿಗುತ್ತಿದ್ದ ಈ ಸರಕಿಗೆ ಈಗ ಇಷ್ಟು ರೂಪಾಯಿಯಾಗಿದೆ ಅಂತ. ಆವಾಗ ರೂ 250 ಇರುವ ಯಾವುದೋ ಒಂದು ಸೀಮೆಯ ಅಂಬಟೆಕಾಯಿಗೆ ಈಗಿನ ಬೆಲೆ ರೂ 2500. ಅಂದಿನ ರೂ 250 ಅನ್ನು 100 ಅಂಕಗಳು ಎಂದು ಪರಿಗಣಿಸಿದಲ್ಲಿ ಇಂದಿನ ರೂ 2500 ಎಷ್ಟು ಅಂಕಗಳಾಗುತ್ತದೆ ಎಂಬುದೇ ಸೂಚ್ಯಂಕದ ಲೆಕ್ಕಾಚಾರ. ಅದು (2500/250)*100=1000. ಅಂದರೆ ಅಂಬಟೆಕಾಯಿಯ ಇಂದಿನ ಸೂಚ್ಯಂಕ 1000. ಸೂಚ್ಯಂಕದ ಲೆಕ್ಕದಲ್ಲಿ ಯಾವುದೋ ಒಂದು ಸರಕಿನ ಯಾವುದೇ ಒಂದು ಸಮಯದ ತಳಹದಿಯ ಆಧಾರದಲ್ಲಿ ಇಂದಿನ ಬೆಲೆ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಲಾಗುತ್ತದೆ. ಶೇರುಗಳ ಆಟ
ಪತ್ರಿಕೆಗಳಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಶೇರುಗಳನ್ನೂ ಅವುಗಳ ಬೆಲೆಗಳನ್ನೂ ಬೇರೆ ಬೇರೆ ಗುಂಪುಗಳಲ್ಲಿ ಕೊಟ್ಟಿರುತ್ತಾರೆ. ಕೆಲವು ಶೇರುಗಳು ಎ ಗ್ರೂಪ್ ಕೆಳಗಡೆ ಬಂದರೆ ಇನ್ನು ಕೆಲವು ಬಿ, ಇನ್ನೂ ಕೆಲವು ಜೆಡ್‌ಗೂÅಪ್. ಏನೀ ಗ್ರೂಪ್‌ಗ್ಳು ? ಅವುಗಳ ಅರ್ಥವೇನು? ಅವನ್ನು ನಾವು ಯಾವ ರೀತಿ ಬಳಸಿಕೊಳ್ಳಬಹುದು? ವಾಸ್ತವದಲ್ಲಿ, ಈ ಗ್ರೂಪ್‌ಗ್ಳು ಕಂಪೆನಿಗಳ ಗಾತ್ರ, ಸಾಧನೆ, ಲಿಕ್ವಿಡಿಟಿ, ಕಾರ್ಪೋರೇಟ್ ನಡವಳಿಕೆ, ಮಾರುಕಟ್ಟೆಯ ಅಗತ್ಯ ಹಾಗೂ ಹೂಡಿಕೆದಾರರ ಅನುಕೂಲಕ್ಕಾಗಿಯೇ ಮಾಡಲ್ಪಟ್ಟಿವೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಎಂಬಲ್ಲಿ ಶೇರುಗಳ 6 ಗುಂಪುಗಳಿವೆ. ಅವುಗಳ ಲಕ್ಷಣಗಳನ್ನು ಅರಿತು ವ್ಯವಹರಿಸಿದರೆ ಹೆಚ್ಚು ಸಹಾಯಕ. ಎ ಗ್ರೂಪ್: ಇದು ಅತ್ಯಂತ ಹೆಚ್ಚು ಮಾರಾಟವಾಗುವ ಶೇರುಗಳ ಗುಂಪು. ಯಾವಾಗ ಬೇಕಾದರೂ ಕೊಡು-ಕೊಳ್ಳುವ ಅವಕಾಶ ಈ ಶೇರುಗಳಲ್ಲಿ ಇದೆ. ಅಂದರೆ ಇವು ತುಂಬಾ ಲಿಕ್ವಿಡ್ ಶೇರುಗಳು; ಯಾವಾಗ ಬೇಕಾದರೂ ಮಾರಾಟ ಮಾಡಿ ಹಣಮ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದಾದ ಶೇರುಗಳು. ಸದಾ ಬೇಡಿಕೆ ಇರುವಂತವು. ಈ ಕಂಪೆನಿಗಳು ಹೂಡಿಕೆದಾರರೊಡನೆ ಉತ್ತಮವಾಗಿ, ಪಾರದರ್ಶಕವಾಗಿ ವ್ಯವಹರಿಸುವ ದಾಖಲೆ ಉಳ್ಳವುಗಳು. ಸುಮಾರಾಗಿ ಈ ಕಂಪೆನಿಗಳನ್ನು ಉತ್ತಮ ಗುಣಮಟ್ಟದ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಶೇರುಗಳು ರೋಲಿಂಗ್ ಸೆಟಲ್ಮೆಂಟ್ ಅಂದರೆ ಸೆಶನ್ ನಡೆಯುತ್ತಿದ್ದಂತೆ ಯಾವಾಗ ಬೇಕಾದರೂ ಸೆಟಲ್ (ಸ್ಕ್ವಾರ್ ಅಪ್) ಮಾಡಿಕೊಳ್ಳಬಹುದಾಗಿದೆ. ಇಂದು ಬೆಳಗ್ಗೆ ಕೊಂಡದ್ದನ್ನು ಮಧ್ಯಾಹ್ನ ಅಥವಾ ನಾಳೆ ಕೊಟ್ಟು ಸೆಟಲ್ ಮಾಡಿಕೊಳ್ಳಬಹುದು. ಶೇರಿನ ಡೆಲಿವರಿ ತೆಗೆದುಕೊಳ್ಳಬೇಕೆಂದೇನೂ ಕಡ್ಡಾಯವಿಲ್ಲ. ಇದರಿಂದಾಗಿ ಅ ಗ್ರೂಪ್ ಶೇರುಗಳಲ್ಲಿ ಡೇ-ಟ್ರೇಡಿಂಗ್ ಅಥವಾ ದಿನದೊಳಗಿನ ಮಾರಾಟ ಸಾಧ್ಯ. ಡೆಲಿವರಿ ಬೇಕಾದವರು ನಿಗದಿತ ಅವಧಿಯ ಅಂತ್ಯಕ್ಕೆ (ಟಿ+2, ಅಂದರೆ ಟ್ರೇಡ್ ಆದ 2 ನೇ ದಿನ) ಶೇರುಗಳನ್ನು ಡೆಲಿವರಿ ತೆಗೆದುಕೊಳ್ಳಲೂ ಬಹುದು. ಬಿ ಗ್ರೂಪ್- ಇವೂ ಎ ಗ್ರೂಪಿನಂತೆ ಉತ್ತಮ ಶೇರುಗಳೇ. ಆದರೆ ಎ ಗ್ರೂಪಿನಿಂದ ಚಿಕ್ಕ ಕಂಪೆನಿಗಳು. ಮಿಡ್-ಕಾಪ್ ಮತ್ತು ಸ್ಮಾಲ್-ಕಾಪ್ ಎಂಬ ಮಧ್ಯಮ ಮತ್ತು ಸಣ್ಣ ಬಂಡವಾಳದ ಕಂಪೆನಿಗಳು ಇದರಲ್ಲಿ ಬರುತ್ತವೆ. ಇಲ್ಲೂ ಎ ಗ್ರೂಪಿನಂತೆ ರೋಲಿಂಗ್ ಸೆಟಲ್ಮೆಂಟ್ ಇದ್ದು ದೈನಂದಿನ ಡೇ ಟ್ರೇಡಿಂಗ್ ಸಾಧ್ಯ. ಟಿ ಗ್ರೂಪ್ -ಈ ಗ್ರೂಪ್ ಶೇರುಗಳನ್ನು ಟ್ರೇಡ್-ಟು-ಟ್ರೇಡ್ ಸೆಟಲ್ಮೆಂಟ… ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಪ್ರತಿಯೊಂದು ಟ್ರೇಡ್ ಅಥವಾ ಡೀಲ… ಅನ್ನು ಅದರ ನಿಗದಿತ ಸಮಯದ ಕೊನೆಗೆ ಸೆಟಲ್ ಮಾಡಿಕೊಳ್ಳಬೇಕು. ರೋಲಿಂಗ್ ಸೆಟಲ್ ಮೆಂಟಿನಂತೆ ದಿನದೊಳಗೇ ಕೊಂಡು ಮಾರುವಂತಿಲ್ಲ. ಕೊಂಡವರು ಕಡ್ಡಾಯವಾಗಿ ದುಡ್ಡುಕೊಟ್ಟು ಶೇರುಗಳ ಡೆಲಿವರಿ ತೆಗೆದುಕೊಳ್ಳಬೇಕು ಹಾಗೂ ಕೊಟ್ಟವರು ಕಡ್ಡಾಯವಾಗಿ ಶೇರು ಕೊಟ್ಟು ದುಡ್ಡು ಪಡೆದುಕೊಳ್ಳಬೇಕು. ಈ ಶೇರುಗಳಿಗೆ ಟ್ರೇಡಿಂಗ್ ನಡೆದ ಎರಡನೇ ದಿನ (ಟಿ+2) ಸೆಟಲ್ಮೆಂಟ್ ನಡೆಯುತ್ತದೆ. ಶೇರುಗಳ ಬೆಲೆಯಲ್ಲಿ ಅತಿಹೆಚ್ಚಿನ ಏರಿಳಿತ ಹಾಗೂ ಜೂಜಾಟವನ್ನು ತಡೆ ಹಿಡಿಯಲು ಅವುಗಳನ್ನು ಈ ಗ್ರೂಪಿನೊಳಕ್ಕೆ ತುರುಕುತ್ತಾರೆ. ಇವುಗಳ ಸೆಟಲ್ಮೆಂಟ್ ರೀತಿಯಿಂದಾಗಿ ಇವುಗಳಲ್ಲಿ ಊಹಾತ್ಮಕ ಹೂಡಿಕೆ (ಸ್ಪೆಕ್ಯುಲೇಶನ್) ಸುಲಭವಲ್ಲ. ಎಸ್ ಗ್ರೂಪ್-ಮೂಲತಃ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಲಿಸ್ಟ್ ಆದ ಚಿಕ್ಕ ಮತ್ತು ಮಧ್ಯಮ ಗಾತ್ರದ ಕಂಪೆನಿಗಳ ಶೇರುಗಳನ್ನು ಈ ಸಮೂಹದಲ್ಲಿ ಇಡಲಾಗಿದೆ. ಇವುಗಳ ಬಿಸಿನೆಸ್ ರೂ 5 ಕೋಟಿಯ ಒಳಗೆ ಹಾಗೂ ಹೂಡಿಕೆ ರೂ 3 ಕೋಟಿಯ ಒಳಗೆ ಇರುತ್ತವೆ. ಈ ಕಂಪೆನಿಯ ದೊಡ್ಡ ಪ್ರಮಾಣದ (75% ರಷ್ಟರ ಮಟ್ಟಿಗೂ) ಶೇರುಗಳನ್ನು ತಮ್ಮಲ್ಲೆ ಇಟ್ಟುಕೊಂದಿದ್ದು ಬಹಳ ಕಡಿಮೆ ಶೇರುಗಳು ಸಾರ್ವಜನಿಕವಾಗಿ ಲಭ್ಯವಾಗಿರಬಹುದು. ಹಾಗಾಗಿ ಬೆಲೆ ಯದ್ವಾತದ್ವಾ ಏರಿಳಿಯಬಹುದು. ಈ ಗ್ರೂಪಿನ ಶೇರುಗಳಲ್ಲಿ ಜಾಸ್ತಿ ಎಚ್ಚರ ಅಗತ್ಯ. ಟಿ.ಎಸ್ ಗ್ರೂಪ್-ಟಿ.ಎಸ್ ಗ್ರೂಪ್ ಎಂದರೆ ಎಸ್ ಕೂಡಾ ಹೌದು; ಟಿ ಯೂ ಹೌದು. ಎರಡರ ಹೈಬ್ರಿಡ್! ಇವು ಎಸ್‌ಗೆÅàಡ್ ಶೇರುಗಳು ಕಡ್ಡಾಯವಾಗಿ ಟಿ ಗ್ರೂಪಿನಂತೆ ಟ್ರೇಡ್-ಟು-ಟ್ರೇಡ್ ರೀತಿಯಲ್ಲೆ ಸೆಟಲ್ಮೆಂಟ್ ಆಗುವಂತಹದ್ದು. ದಿನದೊಳಗಿನ ಡೇ ಟ್ರೇಡ್ ಇದರಲ್ಲಿ ಇಲ್ಲದ ಕಾರಣ, ಹಾಗೂ ಶೇರುಗಳ ಸಂಖ್ಯೆಯೂ ಅತಿಕಡಿಮೆ ಇರುವ ಕಾರಣ ಇದರಲ್ಲಿ ಲಿಕ್ವಿಡಿಟಿಯ ಕೊರತೆ ಕಾಣುವ ಅಪಾಯ ಇದೆ. ಅಂದರೆ, ಮನಬಂದಂತೆ ಕೊಡ-ಕೊಳ್ಳುವ ಅವಕಾಶಗಳು ಕಡಿಮೆ. ಜೆಡ್ ಗ್ರೂಪ್- ಇದು ಅಪಾಯದ ಗ್ರೂಪ್. ಅಂದರೆ ಯಾವುದೋ ಕಾರಣಕ್ಕೆ ಮಾರುಕಟ್ಟೆಯ ಕಾಯಿದೆಗಳನ್ನು ಮುರಿದ ಹಿನ್ನೆಲೆಯಿರುವ ಅಥವಾ ಹೂಡಿಕೆದಾರರ ಸಮಸ್ಯೆಗಳಿಗೆ ಕಿವಿಕೊಡದ ಕಂಪೆನಿಗಳನ್ನು ಈ ಸಮೂಹದಲ್ಲಿ ಕೂಡಿ ಹಾಕಲಾಗುತ್ತದೆ. ಈ ಕಂಪೆನಿಗಳ ಬಗ್ಗೆ ಮಾಹಿತಿಯ ಕೊರತೆಯೂ ಇರಬಹುದು. ಈ ಶೇರುಗಳ ಬೆಲೆಗಳ
ಹಿಂದೆ ದ್ರವ ವ್ಯವಹಾರಗಳ ಕೈವಾಡ ಇರುವ ಸಾಧ್ಯತೆಗಳೂ ಇವೆ. ಬಹಳ ಕಡಿಮೆ ಬೆಲೆಗೆ ಬಿಕರಿಯಾಗುವ ಕಾರಣ ಇಲ್ಲಿನ ಬಹುತೇಕ ಶೇರುಗಳನ್ನು ಪೆನ್ನಿ ಸ್ಟಾಕ್ಸ್ ಎಂದೇ ಕರೆಯುತ್ತಾರೆ. ಈ ಗ್ರೂಪಿನಲ್ಲಿ ವ್ಯವಹರಿಸುವ ಮುನ್ನ ಸರಿಯಾದ ಮಾಹಿತಿಯನ್ನು ಪಡೆದು ಎಚ್ಚರಿಕೆಯಿಂದಲೇ ವ್ಯವಹರಿಸಬೇಕು. ಶೇರು ಮಾರುಕಟ್ಟೆಯ ಕೆಲವು ಸೂಚ್ಯಂಕಗಳು ಈ ರೀತಿಇವೆ:
1. ಬಾಂಬೆ ಸೆನ್ಸೆಕ್ಸ್- 1986 ರಲ್ಲಿ 30 ಆಯ್ದ ಶೇರುಗಳ 1978-1979 ರ ಸರಾಸರಿ ಬೆಲೆಯನ್ನು 100 ಎಂದಿಟ್ಟುಕೊಂಡು ಆರಂಭಗೊಂಡದ್ದು. 1996 ರಲ್ಲಿ ಇನ್ನೊಂದು ಇಂಡೆಕ್ಸ್ 100 ಶೇರುಗಳ ಬಿ.ಎಸ್.ಇ-100 ಆರಂಭಗೊಂಡಿತು. 2. ನ್ಯಾಶನಲ್ ಇಂಡೆಕ್ಸ್ -1983-84 ರ 100 ಶೇರುಗಳ ಸರಾಸರಿ ಬೆಲೆಯನ್ನು 100 ಎಂದಿಟ್ಟುಕೊಂಡು 1989 ರಲ್ಲಿ ಆರಂಭಗೊಂಡಿದ್ದು. – ಜಯದೇವ ಪ್ರಸಾದ ಮೊಳೆಯಾರ