Advertisement

ಚಿತ್ರಪಟಗಳ ಸಂರಕ್ಷಣೆ ತಿಳಿದಿರಲಿ

11:16 PM Jul 05, 2019 | Team Udayavani |

ಚೆಂದದ ಚಿತ್ರವೊಂದು ಕಂಡರೆ ಸಾಕು ಅದನ್ನು ಎಷ್ಟು ಹಣ ಕೊಟ್ಟಾದರೂ ಕೊಂಡುಕೊಳ್ಳಬೇಕು ಎನ್ನುವುದು ಹಲವರ ಮನಸ್ಥಿತಿ. ಚೆಂದದ ಚಿತ್ರಕಲೆಗಳನ್ನು ಸಂಗ್ರಹಿಸುವುದು ಒಂದು ಉತ್ತಮ ಹವ್ಯಾಸವೆ. ಆದರೆ ಇವುಗಳು ಹಾಳಾಗದಂತೆ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುವುದಿದೆಯಲ್ಲ ಅದೇ ಕೊಂಚ ಕಷ್ಟ.

Advertisement

ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ. ಈ ಕುರಿತು ಕೆಲವು ಸಲಹೆಗಳು ಇಲ್ಲಿವೆ.

•ಗೋಡೆಗಳಿಗೆ ಚಿತ್ರಗಳನ್ನು ತೂಗು ಬಿಡುವಾಗ ಕೇವಲ ಫ್ರೇಮ್‌ನ ಮೇಲ್ಭಾಗದಲ್ಲಿ ಮಾತ್ರ ಮೊಳೆಗಳನ್ನು ಹೊಡೆಯಬೇಡಿ. ಬದಲಾಗಿ ಫ್ರೇಮ್‌ನ ಕೆಳಭಾಗದಲ್ಲಿಯೂ ಒಂದು ಮೊಳೆ ಹೊಡೆಯಿರಿ. ಹೀಗೆ ಮಾಡುವುದರಿಂದ ಚಿತ್ರ ಪಠದ ಭಾರಕ್ಕೆ ಫ್ರೇಮ್‌ ಬಿರುಕು ಬಿಡುವುದನ್ನು ತಪ್ಪಿಸಬಹುದು.

•ಚಿತ್ರಪಟಗಳ ಮೇಲೆ ಕುಳಿತಿರುವ ಧೂಳು, ಬಲೆ ಮುಂತಾದವುಗಳನ್ನು ಆಗಾಗ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಲು ಯಾವುದೇ ಕಾರಣಕ್ಕೂ ಬ್ರಶ್‌ಗಳನ್ನು ಬಳಸಬೇಡಿ. ಬ್ರಶ್‌ಗಳು ಚಿತ್ರಗಳ ಮೇಲೆ ಗೆರೆ ಬೀಳಲು ಕಾರಣವಾಗುತ್ತವೆ. ಹಾಗಾಗಿ ಚಿಕ್ಕದಾದ ವೆಲ್ವೆಟ್ ಮಾದರಿಯ ಬಟ್ಟೆಗಳನ್ನೇ ಬಳಸಿ.

•ಯಾವುದೇ ಕಾರಣಕ್ಕೂ ಚಿತ್ರಪಟಗಳನ್ನು ಮನೆಯ ಹೊರ ಭಾಗದಲ್ಲಿ ತೂಗು ಹಾಕಬೇಡಿ. ಮನೆಯ ಒಳವಾತಾವರಣಕ್ಕಿಂತ ಹೊರ ಪ್ರದೇಶ ಹೆಚ್ಚು ತೇವಾಂಶದಿಂದ ಕೂಡಿರುವ ಕಾರಣ ಚಿತ್ರಗಳು ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.

Advertisement

• ಹಾಗೆಯೇ ಮನೆಯ ಮೇಲಂತಸ್ತಿನಲ್ಲಿಯೂ ಚಿತ್ರಪಟಗಳನ್ನು ಇಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅತಿಯಾದ ಬಿಸಿಯಿಂದಲೂ ಚಿತ್ರ ಪಟದ ಬಣ್ಣಗಳು ಮತ್ತು ಕ್ಯಾನ್ವಾಸ್‌ ಹಾಳಾಗುತ್ತವೆ.

•ಕನಿಷ್ಠ ಎರಡು ವರ್ಷಗಳಿಗಾದರೂ ಒಮ್ಮೆ ಗೋಡೆಗೆ ತೂಗು ಹಾಕಿರುವ ಚಿತ್ರಪಟಗಳನ್ನು ತೆಗೆದು ಅವುಗಳ ಸದ್ಯದ ಸ್ಥಿತಿಯನ್ನು ಪರೀಕ್ಷಿಸಿ.

•ಚಿತ್ರಗಳನ್ನು ಸಂಗ್ರಹಿಸುವುದಾದರೆ ಅವುಗಳನ್ನು ಪ್ಲಾಸ್ಟಿಕ್‌ ಶೀಟ್‌ನಲ್ಲಿ ಕವರ್‌ ಮಾಡಬೇಡಿ. ಬದಲಾಗಿ ಹತ್ತಿಯ ಬಟ್ಟೆಗಳಲ್ಲಿ ಅವುಗಳನ್ನು ಸುತ್ತಿಡಿ. ಈ ಕ್ರಮ ಚಿತ್ರದ ಗುಣಮಟ್ಟ ಉಳಿಸಲು ಸಹಕಾರಿ.

•ಮಳೆಗಾಲದ ಸಂದರ್ಭದಲ್ಲಿ ಚಿತ್ರಪಟಗಳಿಗೆ ಫ‌ಂಗಸ್‌ ಬರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಅವುಗಳನ್ನು ನೀವು ಸ್ವಚ್ಛ ಮಾಡದೇ ಪರಿಣತರನ್ನು ಕರೆಸಿ ಮಾಡಿಸಿ.

•ಚಿತ್ರಪಟಗಳನ್ನು ಯಾವುದೇ ಕಾರಣಕ್ಕೂ ಬರಿಗೈಯಿಂದ ಮುಟ್ಟಬೇಡಿ. ನಮ್ಮ ದೇಹದಲ್ಲಿನ ಎಣ್ಣೆ ಅಂಶಗಳಿಂದಲೂ ಕೆಲವು ಪೈಂಟಿಂಗ್‌ಗಳು ಹಾಳಾಗುವುದುಂಟು.

•ಬಾತ್‌ರೂಮ್‌ ಮತ್ತು ಅಡುಗೆ ಕೋಣೆಗಳಲ್ಲಿ ಚಿತ್ರಪಟಗಳನ್ನು ತೂಗುಹಾಕಬೇಡಿ. ನೀರು ಮತ್ತು ಹೊಗೆಯ ಸಂಪರ್ಕದಲ್ಲಿ ಚಿತ್ರಪಟಗಳು ಬೇಗ ಹಾಳಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next