ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪ್ರತಿಷ್ಠಿತ ಬಡಾವಣೆಗಳ ವಿವಿಧ ಬಡಾವಣೆಗಳಲ್ಲಿ ಸುಮಾರು 402 ಮೂಲೆ ನಿವೇಶನಗಳನ್ನು ಹರಾಜಿಗಿಡಲಾಗಿದೆ.
ಇ-ಹರಾಜು ಮೂಲಕ ನಿವೇಶನಗಳ ವಿಲೇವಾರಿ ನಡೆಯಲಿದ್ದು, ಅರ್ಕಾವತಿ ಬಡಾವಣೆ, ಎಚ್‌ಎಸ್‌ಆರ್ ಬಡಾವಣೆ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, ಜೆ.ಪಿ. ನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ ಒಟ್ಟು 402 ನಿವೇಶನಗಳನ್ನು ಹರಾಜಿಗಿಡಲಾಗಿದೆ. ಸೆ. 9ರಿಂದ ಬಿಡ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಆಸಕ್ತರು ಇ-ಪ್ರಕ್ಯೂರ್‌ವೆುಂಟ್ ಮೂಲಕ ಆನ್‌ಲೈನ್‌ಲ್ಲಿ ಬಿಡ್ ಮಾಡಿ, ಖರೀದಿಸಬಹುದು. ಇ-ಹರಾಜು ಪ್ರಕ್ರಿಯೆ ಒಟ್ಟು ಆರು ಹಂತಗಳಲ್ಲಿ ನಡೆಯಲಿದ್ದು, ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್ ಆಗಲಿದೆ. ಇ-ಹರಾಜು ಮೊದಲ ಹಂತವು ಸೆ. 9ರ ಬೆಳಗ್ಗೆ 11ಕ್ಕೆ ಪ್ರಾರಂಭವಾಗಲಿದ್ದು, ಕೊನೆಯ ಬಿಡ್ ಅ. 3ರಂದು ಅಂತ್ಯಗೊಳ್ಳಲಿದೆ. ಹರಾಜಿಗಿರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್ ಅಳವಡಿಸಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬಿಡ್‌ದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ.
………………………………………………………………………………………………………………………………………………………
ಕಾರ್ಮಿಕರ ರಕ್ಷಣೆಗೆ ಸೂಚನೆ : ಬೆಂಗಳೂರು/ಕೆಂಗೇರಿ: ಕೋವಿಡ್ ಲಾಕ್‌ಡೌನ್ ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿರುವ ಟೆಕ್ಸ್‌ಟೈಲ್ ಉದ್ಯಮಗಳಲ್ಲಿ ಕಾರ್ಮಿಕರ ಸಂಖ್ಯೆ ಕಡಿತ ಮಾಡದಂತೆ ಜವಳಿ ಸಚಿವ ಶ್ರೀಮಂತ ಪಾಟೀಲ್ ಸೂಚಿಸಿದ್ದಾರೆ. ಗುರುವಾರ ನಗರದ ಅರವಿಂದ್ ಮಿಲ್ಸ್ ಹಾಗೂ ಟೆಕ್ಸಪೋರ್ಟ್ ಇಂಡಸ್ಟ್ರಿಗೆ ಭೇಟಿ ನೀಡಿ, ಕೋವಿಡ್ ಸಂದರ್ಭದಲ್ಲಿ ಉದ್ಯಮಕ್ಕೆ ಎದುರಾದ ಸಂಕಷ್ಟ ಹಾಗೂ ಕಾರ್ಮಿಕರಿಗೆ ಆಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಕಾರ್ಮಿಕರ ಕಡಿತ ಮಾಡದಂತೆ ವಿಶೇಷವಾಗಿ ಮಹಿಳಾ ಕಾರ್ಮಿಕರ ಕಡಿತ ಮಾಡದಂತೆ ಸಚಿವರು ಉದ್ಯಮಿಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ಟೆಕ್ಸ್‌ಟೈಲ್ ರಫ್ತು ಪ್ರಮಾಣ ವಿದೇಶಗಳಿಗಿಂತ ಕಡಿಮೆಯಾಗುತ್ತಿರುವ ಬಗ್ಗೆ ಹಾಗೂ ರಫ್ತು ಹೆಚ್ಚಳ ಮಾಡುವ ಕುರಿತು ಉದ್ಯಮಿಗಳೊಂದಿಗೆ ಚರ್ಚಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಟೆಕ್ಸ್ ಟೈಲ್ ಉದ್ಯಮ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಹೇಳಿದ್ದಾರೆ.