Advertisement

ಹೊಸ ಮಾಸ್ಟರ್‌ ಪ್ಲಾನ್‌ ತಯಾರಿಸಲು ಬಿಡಿಎಗೆ ಸೂಚನೆ

05:47 AM Jun 28, 2020 | Lakshmi GovindaRaj |

ಬೆಂಗಳೂರು: ಬಿಡಿಎ ಸಿದ್ಧಪಡಿಸಿದ್ದ ನಗರ ಅಭಿವೃದ್ಧಿ ಮಹಾ ಯೋಜನೆ- 2031ಕ್ಕೆ ನೀಡಿದ್ದ ಅನುಮೋದನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಪರಿಷ್ಕೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.  ಪ್ರಾಧಿಕಾರ 2011- 12ರ ಅಂಕಿ ಅಂಶದ ಆಧಾರದಲ್ಲಿ ಬಿಡಿಎ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತುತ ಕೆಲಬದಲಾವಣೆ ಹಾಗೂ ಬೆಳವಣಿಗೆಗಳು ಆಗಿವೆ.

Advertisement

ಆದ್ದರಿಂದ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಿದೆ.  ಆದ್ದರಿಂದ 9- 12 ತಿಂಗಳೊಳಗೆ ಪರಿಷ್ಕೃತ ಯೋಜನಾ ವರದಿ ತಯಾರಿಸಲು ಆಯುಕ್ತರಿಗೆ ಸೂಚಿಸಿದೆ. 2011-12 ರಲ್ಲಿ ಪ್ರಾಧಿಕಾರ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿತ್ತು. ಅರಣ್ಯ ಪ್ರದೇಶದ ಮಧ್ಯ  ಜಾಗದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ, ರಿಯಲ್‌ ಎಸ್ಟೇಟ್‌, ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲಿದೆ ಹಾಗೂ ಯೋಜನಾ ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next