Advertisement
ಭೂಸ್ವಾಧೀನ, ಫ್ಲಾಟ್‌ಗಳ ಹಂಚಿಕೆ, ನಿವೇಶನಗಳಹಂಚಿಕೆಯಲ್ಲಿ ವಿವಾದ ಸೇರಿ ಇನ್ನಿತರಕಾರಣಗಳಿಂದಾಗಿ ಬಿಡಿಎ ಮೇಲೆ ಸಾರ್ವಜನಿಕರು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲೀಕರಿಂದ ಅತಿಹೆಚ್ಚಿನ ಪ್ರಕರಣಗಳು ಬಿಡಿಎ ಮೇಲೆ ದಾಖಲಾಗಿವೆ.
Related Articles
Advertisement
ಸಮನ್ವಯಕಾರರ ನೇಮಕ: ಕೋರ್ಟ್ ಪ್ರಕರಣಗಳ ಕುರಿತು ಕಾನೂನು ಸಲಹಾ ಸಂಸ್ಥೆ ಅಥವಾ ವಕೀಲರಿಗೆ ಮಾಹಿತಿ ನೀಡುವುದಕ್ಕೆ ಬಿಡಿಎಯಿಂದ ಪ್ರತ್ಯೇಕಸಮನ್ವಯಕಾರರನ್ನು ನೇಮಿಸಲಾಗುತ್ತದೆ. ಅವರುಪ್ರಕರಣ ಯಾವ ನ್ಯಾಯಾಲಯದಲ್ಲಿದೆ, ಈವರೆಗೆನಡೆದಿರುವ ಬೆಳವಣಿಗೆಗಳು, ಮುಂದಿನ ವಿಚಾರಣೆ ಯಾವ ದಿನಾಂಕದಲ್ಲಿದೆ ಎಂಬಿತ್ಯಾದಿ ಮಾಹಿತಿಯನ್ನುಕಾನೂನು ಸಲಹಾ ಸಂಸ್ಥೆ ಜತೆಗೆ ಹಂಚಿಕೊಳ್ಳಲಿದ್ದಾರೆ.ಆಮೂಲಕ ಪ್ರಕರಣದ ಬಗೆಗಿನ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಮಾಡಲಾಗುತ್ತದೆ.
5619 ಪ್ರಕರಣಗಳು: ನ್ಯಾಯಾಲಯಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿವೆ. ಆ ಪ್ರಕರಣಗಳು ಸಿವಿಲ್ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ರೇರಾ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ದಾಖಲಾಗಿವೆ. ಒಟ್ಟಾರೆ ವಿವಿಧ ನ್ಯಾಯಾಲಯಗಳಲ್ಲಿ ಬಿಡಿಎ ವಿರುದ್ಧ 5,619 ಪ್ರಕರಣಗಳಿವೆ. ಅವುಗಳ ಇತ್ಯರ್ಥ ಬಿಡಿಎಗೆ ದೊಡ್ಡ ತಲೆನೋವಾಗಿದೆ.
ಪ್ರಕರಣ ಇತ್ಯರ್ಥವಾಗದಿದ್ದರೆ ದಂಡ: ಕಾನೂನು ಸಲಹಾ ಸಂಸ್ಥೆ ನ್ಯಾಯಾಲಯಗಳಲ್ಲಿ ಬಿಡಿಎ ಪರವಾಗಿ ಪ್ರಕರಣ ಇತ್ಯರ್ಥವಾಗುವಂತೆ ಮಾಡಬೇಕಿದೆ. ಅದಕ್ಕೆತಕ್ಕಂತೆ ಸಲಹೆಗಳನ್ನು ನೀಡಬೇಕಿದೆ. ಒಂದು ವೇಳೆಪ್ರಕರಣ ಬಿಡಿಎ ಪರವಾಗಿ ಆಗದಿದ್ದರೆ ಬಿಡಿಎಕಾನೂನು ಸಲಹಾ ಸಂಸ್ಥೆಗೆ ದಂಡ ವಿಧಿಸಲಿದೆ. ಸ್ವಲ್ಪಮಟ್ಟಿನ ವೈಫಲ್ಯಕ್ಕೆ ಸಲಹಾ ಸಂಸ್ಥೆಗೆ ನೀಡಲಾಗುವಬಿಲ್‌ನಲ್ಲಿ ಶೇ. 10 ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಪೂರ್ಣ ವೈಫಲ್ಯ ಕಂಡರೆ ಕಾನೂನು ಸಲಹಾ ಸಂಸ್ಥೆ ಬಿಡಿಎಗೆ ನೀಡುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.
ಬಿಡಿಎ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ಬಿಡಿಎ ಪರವಾಗಿ ತೀರ್ಪು ಬರುವಂತೆ ಮಾಡಲು ಪ್ರತ್ಯೇಕ ಕಾನೂನು ಸಲಹಾ ಸಂಸ್ಥೆಯನ್ನು ನೇಮಿಸಲಾಗುತ್ತದೆ. ಅವರಿಗೆಪ್ರಮುಖ ಪ್ರಕರಣಗಳ ಮಾಹಿತಿ ನೀಡಿ ಪ್ರಕರಣ ನಮ್ಮ ಪರವಾಗಿ ತೀರ್ಪು ಬರುವಂತೆಮಾಡಲು ಸಲಹೆ ಕೋರಲಾಗುವುದು. -ರಾಜೇಶ್ ಗೌಡ, ಬಿಡಿಎ ಆಯುಕ್ತ
-ಗಿರೀಶ್ ಗರಗ