ಹೊಸದೆಹಲಿ: ಶುಕ್ರವಾರ ರಾತ್ರಿ ವೇಳೆಗೆ ಪಾಕಿಸ್ಥಾನದಿಂದ ಭಾರತಕ್ಕೆ ಮರಳಿ ಬಂದ ಭಾರತದ ಹೆಮ್ಮೆಯ ಪೈಲಟ್ ಅಭಿನಂದನ್ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿ ವಿಶೇಷ ಸ್ವಾಗತ ಕೋರಿದೆ. ನಿನ್ನೆ ರಾತ್ರಿ ಹೊಸ ಜೆರ್ಸಿ ಬಿಡುಗಡೆ ಮಾಡಿದ ಬಿಸಿಸಿಐ ಅದರಲ್ಲಿ ‘ವಿಂಗ್ ಕಮಾಂಡರ್ ಅಭಿನಂದನ್’ ಎಂದು ಬರೆದು ವೀರ ಪೈಲಟ್ ಗೆ ಗೌರವ ನೀಡಿದೆ.
ಮಿಗ್ 21 ಯುದ್ಧ ವಿಮಾನದ ಪೈಲಟ್ ಆಗಿರುವ ಅಭಿನಂದನ್ ಪಾಕಿಸ್ಥಾನದ ಮೇಲೆ ದಾಳಿ ನಡೆಸುವ ವೇಳೆ ವಿಮಾನ ದುರ್ಘಟನೆ ನಡೆದು ಪಾಕಿಸ್ಥಾನದಲ್ಲಿ ಬಿದ್ದಿದ್ದರು. ನಂತರದ ಬೆಳವಣಿಗೆಯಲ್ಲಿ ಶುಕ್ರವಾರ ಪಾಕಿಸ್ಥಾನ ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು.
ಈ ಬಗ್ಗೆ ಟ್ವೀಟ್ ಮಾಡಿದ ಬಿಸಿಸಿಐ,’ #WelcomeHomeAbhinandan ನೀವು ಆಕಾಶವನ್ನು ಆಳುತ್ತೀರಿ. ಈಗ ನೀವು ನೀವು ನಮ್ಮ ಹೃದಯವನ್ನು ಆಳುತ್ತಿದ್ದೀರಿ. ನಿಮ್ಮ ಧೈರ್ಯ ಮತ್ತು ಘನತೆ ಮುಂದಿನ ತಲೆಮಾರುಗಳನ್ನು ಉತ್ತೇಜಿಸುತ್ತದೆ’ ಎಂದಿದೆ. ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಎಂದು ಬರೆದು ಜೆರ್ಸಿಗೆ ಒಂದನೇ ಸಂಖ್ಯೆ ನೀಡಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿನಂದನ್ ಫೋಟೋ ಹಾಕಿ, ‘ರಿಯಲ್ ಹೀರೋ, ನಿಮಗೆ ತಲೆ ಬಾಗುತ್ತೇನೆ. ಜೈ ಹಿಂದ್ ಎಂದು ಅಭಿಮಾನ ತೋರಿದ್ದಾರೆ.