Advertisement

ರೋಹಿತ್ ಶರ್ಮಾ ನಾಯಕತ್ವದ ಕುರಿತು ಪ್ರಮುಖ ನಿರ್ಧಾರ ಕೈಗೊಂಡ ಬಿಸಿಸಿಐ

09:33 AM Jan 02, 2023 | Team Udayavani |

ಮುಂಬೈ: ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಸೋಲು ಮತ್ತು ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಕುರಿತಂತೆ ರವಿವಾರ ಬಿಸಿಸಿಐ ಪ್ರಮುಖ ಸಭೆಯೊಂದನ್ನು ನಡೆಸಿದೆ. ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಸೇರಿದ್ದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

Advertisement

ಪ್ರಮುಖವಾಗಿ ತಂಡದ ನಾಯಕತ್ವದ ಕುರಿತಾಗಿ ನಿರ್ಧಾರ ಮಾಡಲಾಗಿದೆ. ಮಂಡಳಿಯ ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಅವರ ಏಕದಿನ ಮತ್ತು ಟೆಸ್ಟ್ ನಾಯಕತ್ವಕ್ಕೆ ಯಾವುದೇ ಸಂಕಷ್ಟವಿಲ್ಲ. ಯಾಕೆಂದರೆ ಬಿಸಿಸಿಐಗೆ ಈ ಎರಡು ಮಾದರಿಯಲ್ಲಿ ಅವರ ನಾಯಕತ್ವದ ಬಗ್ಗೆ ಅತೃಪ್ತಿಕರವಾಗಿ ಏನನ್ನೂ ಕಂಡುಕೊಂಡಿಲ್ಲ.

ಇದನ್ನೂ ಓದಿ:ಕಲಾವಿದೆಯ ಶಾಸ್ತ್ರೀಯ ನೃತ್ಯ… ಶ್ರೀ ಕಟೀಲು ಕ್ಷೇತ್ರ ಅದ್ಬುತವೆಂದು ಟ್ವೀಟ್ ಮಾಡಿದ ಆನಂದ ಮಹೀಂದ್ರ

ರೋಹಿತ್ ಟೆಸ್ಟ್ ಮತ್ತು ಏಕದಿನಗಳಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಈ ಎರಡು ಸ್ವರೂಪಗಳಲ್ಲಿ ನಾಯಕರಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಟೆಸ್ಟ್ ಮತ್ತು ಏಕದಿನಗಳಲ್ಲಿ ಅವರ ನಾಯಕತ್ವದ ದಾಖಲೆಗಳು ಉತ್ತಮವಾಗಿದೆ” ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

2023 ರ ವಿಶ್ವಕಪ್ ವರೆಗೆ 20 ಆಟಗಾರರ ಪೂಲ್ ಮಾಡಲು ನಿರ್ಧರಿಸಲಾಯಿತು. 50 ಓವರ್‌ಗಳ ಐಸಿಸಿ ವಿಶ್ವಕಪ್‌ ವರೆಗೆ ಆಡುವ 20 ಆಟಗಾರರನ್ನು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಸಭೆಯ ನಂತರ ಶಾ ಹೇಳಿದರು.

Advertisement

ಟಿ20ಗೆ ಹೊಸ ಕೋಚ್ ನೇಮಕ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ದ್ರಾವಿಡ್ ಅವರೇ ಮೂರು ಮಾದರಿಗೆ ಕೋಚ್ ಆಗಿರಲಿದ್ದಾರೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next