Advertisement

ಬಿಸಿಸಿಐ ಪದಾಧಿಕಾರಿಗಳ ವಜಾಕ್ಕೆ ಶಿಫಾರಸು!

07:30 AM Mar 10, 2018 | Team Udayavani |

ನವದೆಹಲಿ: ಬಿಸಿಸಿಐ ಆಡಳಿತಾಧಿಕಾರಿಗಳಾದ ವಿನೋದ್‌ ರಾಯ್‌, ಡಯಾನಾ ಎಡುಲ್ಜಿ ಸರ್ವೋಚ್ಚ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಪದಾಧಿಕಾರಿಗಳನ್ನು ವಜಾ ಮಾಡಲು ಶಿಫಾರಸು ಮಾಡಿದ್ದಾರೆ.  ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿಯನ್ನು ವಜಾ ಮಾಡಿ ಹೊಸ ಚುನಾವಣೆ ನಡೆಸಲು ಮನವಿ ಮಾಡಿದ್ದಾರೆ.
ಬಿಸಿಸಿಐನ ನೂತನ ಸಂವಿಧಾನ ಅಳವಡಿಕೆಗೆ ಮುನ್ನವೇ ವಾರ್ಷಿಕ ಸರ್ವಸದಸ್ಯರ ಸಭೆ ನಡೆಸಲು ಅನುಮತಿ ಕೋರಿದ್ದಾರೆ. ಈ ಪದಾಧಿಕಾರಿಗಳು ಲೋಧಾ ಶಿಫಾರಸು ಜಾರಿಗೆ ಅಡ್ಡಿಯಾಗಿದ್ದಾರೆನ್ನುವುದು ಅವರ ಅಭಿಪ್ರಾಯವಾಗಿದೆ. ಈ ಹಿಂದೆ ಇದೇ ರೀತಿ ಮನವಿ ಮಾಡಿದ್ದಾಗ ಸರ್ವೋಚ್ಚ ನ್ಯಾಯಾಲಯ ಬಲವಾದ ತೀರ್ಮಾನ ಕೈಗೊಂಡು, ಅಂದಿನ ಅಧ್ಯಕ್ಷ ಅನುರಾಗ್‌ ಠಾಕೂರ್‌, ಕಾರ್ಯದರ್ಶಿಯಾಗಿದ್ದ ಅಜಯ್‌ ಶಿರ್ಕೆ ವಜಾಗೊಂಡಿದ್ದರು.

Advertisement

ಬಿಸಿಸಿಐ “ಸ್ವಹಿತಾಸಕ್ತಿ’ ಕುರಿತು ಪ್ರಶ್ನಿಸಿದ ರಾಹುಲ್‌ ದ್ರಾವಿಡ್‌
ನವದೆಹಲಿ: ಬೆಂಗಳೂರಿನಲ್ಲಿ ಕ್ರೀಡಾ ತರಬೇತಿಗಾಗಿ ಪಡುಕೋಣೆ-ದ್ರಾವಿಡ್‌ ಕ್ರೀಡಾ ಕೇಂದ್ರ ಕಳೆದ ವರ್ಷ ಆರಂಭವಾಗಿದೆ. ಇದು ಸ್ವಹಿತಾಸಕ್ತಿ ಪ್ರಕರಣದಡಿ ಬರುತ್ತದೆಯೇ ಎಂದು ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಬಿಸಿಸಿಐಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ. ಬಿಸಿಸಿಐಗೆ ಬರೆದಿರುವ ಪತ್ರದಲ್ಲಿ, ತನ್ನ ಹೆಸರನ್ನು ಆ ಕ್ರೀಡಾ ಸಂಸ್ಥೆ ಬಳಸಿಕೊಂಡಿದೆ. ಆದರಲ್ಲಿ ತಾನು ಮಾಲಿಕತ್ವ ಹೊಂದಿಲ್ಲ, ಇದು ಸ್ವಹಿತಾಸಕ್ತಿ ಅಡಿಯಲ್ಲಿ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ದ್ರಾವಿಡ್‌ ಅ-19 ತಂಡದ ಕೋಚ್‌ ಹುದ್ದೆಯ ಜತೆಗೆ ಐಪಿಎಲ್‌ ಫ್ರಾಂಚೈಸಿ ಡೆಲ್ಲಿಡೇರ್‌ಡೆವಿಲ್ಸ್‌ ತಂಡದ ಕೋಚ್‌ ಆಗಿದ್ದರು. ಒಂದೇ ಸಮಯದಲ್ಲಿ ಎರಡು ಹುದ್ದೆ ನಿರ್ವಹಿಸುವುದು ಸ್ವಹಿತಾಸಕ್ತಿಗೆ ಕಾರಣವಾಗುತ್ತದೆ ಎಂದು ಎಂದು ವಿವಾದವಾಗಿತ್ತು. ಆ ನಂತರ ಡೆಲ್ಲಿ ತಂಡದ ಕೋಚ್‌ ಹುದ್ದೆ ಕೈಬಿಟ್ಟಿದ್ದರು. ಭಾರತ ಕಿರಿಯರ ತಂಡದ ಕೋಚ್‌ ಸ್ಥಾನಕ್ಕೆ ಅಂಟಿಕೊಂಡಿದ್ದರು. ಆಗ ದ್ರಾವಿಡ್‌ ವೇತನವನ್ನು 5 ಕೋಟಿ ರೂ.ಗೆ ಏರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸದ್ಯ ದ್ರಾವಿಡ್‌ ಭಾರತ ಕಿರಿಯರ ತಂಡ, ಎ ತಂಡದ ಕೋಚ್‌ ಆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next