ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿರುವ ಕಾರಣ ಅಂಡರ್-16 ವಿಭಾಗದ “ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್’ ಪಂದ್ಯಾವಳಿಯನ್ನು ಬಿಸಿಸಿಐ ಮುಂದೂಡಿದೆ. ವೇಳಾಪಟ್ಟಿಯಂತೆ ಇದು ಜ. 9ರಂದು ಆರಂಭವಾಗಬೇಕಿತ್ತು.
Advertisement
“ಇದು ಕಿರಿಯರ ಕ್ರಿಕೆಟ್ ಪಂದ್ಯಾವಳಿ. ಇವರಿಗೆ ಇನ್ನೂ ವ್ಯಾಕ್ಸಿನೇಶನ್ ಆಗಿಲ್ಲ.
ಹೀಗಾಗಿ ವೈದ್ಯರ ಸಲಹೆಯನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಯಿತು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಆದರೆ ಕೂಟದ ಮುಂದಿನ ದಿನಾಂಕವನ್ನು ತಿಳಿಸಿಲ್ಲ.