Advertisement

ಹಾರ್ದಿಕ್‌, ರಾಹುಲ್‌ಗೆ ನಿಷೇಧ, ಹಿಂತಿರುಗಲು ಬಿಸಿಸಿಐ ಆದೇಶ

12:30 AM Jan 12, 2019 | |

ನವದೆಹಲಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಭಾಗವಹಿಸಿ ಎಡವಟ್ಟು ಮಾಡಿಕೊಂಡಿರುವ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ಗೆ ಮತ್ತೂಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಇಬ್ಬರನ್ನೂ ಆಸ್ಟ್ರೇಲಿಯ ವಿರುದ್ಧದ ಮೂರು ಏಕದಿನಗಳಿಗೆ ಅಮಾನತು ಮಾಡಲಾಗಿದೆ, ಕೂಡಲೇ ಭಾರತಕ್ಕೆ ಹೊರಡಬೇಕೆಂದು ಬಿಸಿಸಿಐ ಸೂಚಿಸಿದೆ. ಇಬ್ಬರ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ. ಫ‌ಲಿತಾಂಶ ಬರುವವರೆಗೆ ಅಮಾನತು ಮುಂದುವರಿಯಲಿದೆ. ಇದರ ಪರಿಣಾಮ ಮುಂದಿನ ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲೂ ಅವರು ಆಡುವ ಸಾಧ್ಯತೆ ಕ್ಷೀಣ.

Advertisement

ಈ ಇಬ್ಬರನ್ನೂ ಎರಡು ಏಕದಿನ ಪಂದ್ಯಗಳಿಗೆ ನಿಷೇಧಿಸುವ ಕುರಿತು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಮೊದಲು ನಿರ್ಧರಿಸಿದ್ದರು. ಆದರೆ ಸದಸ್ಯೆ ಡಯಾನ ಎಡುಲ್ಜಿ ಪ್ರಕರಣವನ್ನು ಕಾನೂನು ವಿಭಾಗಕ್ಕೆ ವರ್ಗಾಯಿಸಲು ಹೇಳಿದ್ದರು. ಕಾನೂನು ವಿಭಾಗ ಇಂತಹ ಪ್ರಕರಣಗಳ ಬಗ್ಗೆ ಏನೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತ್ತು ಎನ್ನಲಾಗಿದೆ. ಆದ್ದರಿಂದ ಇಬ್ಬರನ್ನೂ ಹೊಸತಾಗಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಮತ್ತೂಮ್ಮೆ ನೋಟಿಸ್‌ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ಮಹಿಳೆಯರ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ರಾಹುಲ್‌ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಹಾರ್ದಿಕ್‌ ಮುಕ್ತವಾಗಿ ಮಾತುಗಳನ್ನಾಡಿದ್ದರು. ತಾನು ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ, ಇದನ್ನೆಲ್ಲ ಪೋಷಕರಿಗೆ ಹೇಳಿಯೇ ಮಾಡಿದ್ದೇನೆ ಎಂದು ಹಾರ್ದಿಕ್‌ ಹೇಳಿದ್ದರು. ಇದು ಅಸಭ್ಯ, ಅಶ್ಲೀಲ ಹೇಳಿಕೆ ಎಂಬ ವಿವಾದ ಹುಟ್ಟಿದ್ದರಿಂದ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ. ಹಾರ್ದಿಕ್‌, ರಾಹುಲ್‌ ಭಾರತಕ್ಕೆ ಮರಳಿದ್ದರಿಂದ ತಂಡದ ಸಂಯೋಜನೆ ಮೇಲೆ ಕಿಂಚಿತ್‌ ಹೊಡೆತ ಬಿದ್ದಿದೆ. ಜೊತೆಗೆ ಈ ಇಬ್ಬರ ಭವಿಷ್ಯಕ್ಕೂ ಇದು ಮಾರಕವಾಗಬಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next