Advertisement
ಈ ವರ್ಷಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆಡಳಿತಾತ್ಮಕ ಸುಧಾರಣೆಗೆ ಅಡ್ಡಿಯಾಗಿದ್ದಾರೆ ಎಂಬ ಕಾರಣದಿಂದ ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆಯನ್ನು ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯಿಂದ ಪದಚ್ಯುತಿಗೊಳಿಸಲಾಗಿತ್ತು. ಆ ನೆನಪು ಇನ್ನೂ ಹಾಗೆಯೇ ಇರುವಾಗಲೇ ಮತ್ತೂಂದು ಬೆಳವಣಿಗೆ ನಡೆಯುತ್ತಿದೆ. ಆಡಳಿತಾಧಿಕಾರಿಗಳ ಸಿಟ್ಟಿಗೆ ಕಾರಣ, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಯನ್ನು ಜು.26ರಂದು ನಡೆದ ವಿಶೇಷಸಭೆಯಿಂದ ಹೊರ ಕಳುಹಿಸಿದ್ದು. ಬಿಸಿಸಿಐನ ಎಲ್ಲ ಸಭೆಗಳಲ್ಲಿ ಸಿಇಒ ಕಡ್ಡಾಯವಾಗಿ ಇರಲೇಬೇಕೆಂದು ಹೇಳಿದ್ದರೂ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಯವರು ಜೊಹ್ರಿ ಸೇರಿದಂತೆ ಇನ್ನಿತರ ಕೆಲ ಕಾನೂನು ಸಲಹೆಗಾರರನ್ನು ಸಭೆಯಿಂದ ಹೊರ ಹೋಗಲು ಸೂಚಿಸಲಾಗಿತ್ತು! ಇದಕ್ಕೆ
ನ್ಯಾಯಪೀಠದ ಆದೇಶವನ್ನೇ ಆಧಾರವಾಗಿ ನೀಡಲಾಗಿತ್ತು!
ವಿವಾದ, ವಿಶೇಷ ಅಧಿಕಾರಿ ನೇಮಕದ ಕುರಿತೂ ವಿಶೇಷ ಸಭೆಯಲ್ಲಿ ಚರ್ಚೆಯೇ ಆಗಿಲ್ಲ ಎನ್ನುವುದು ಆಡಳಿತಾಧಿಕಾರಿಗಳ ಆರೋಪ. ಅಷ್ಟಲ್ಲದೇ ಸಭೆಯ ಪ್ರಕ್ರಿಯೆಗಳ ಕುರಿತು ಆಡಳಿತಾಧಿಕಾರಿಗಳಿಗೆ ಯಾವುದೇ ನೇರ ಮಾಹಿತಿ ಸಿಗದಂತೆ ನೋಡಿಕೊಳ್ಳಲಾಗಿದೆ. ಇದು ಆಡಳಿತಾಧಿಕಾರಿಗಳನ್ನು ದೂರ ವಿಡುವ ಸ್ಪಷ್ಟ ಯತ್ನ ಎಂದು ಹೇಳಲಾಗಿದೆ.